ಮೈಸೂರು : ಕುಡಿಯುವ ನೀರು ಮತ್ತು ನೈರ್ಮಲ್ಯ ಕುರಿತು ಕಾರ್ಯಗಾರ.
ಮೈಸೂರು ಜಿಲ್ಲಾ ಪಂಚಾಯತ್ ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಟಿ ನರಸೀಪುರ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಗೀರಥ ಸಂಸ್ಥೆಯ ಸಹಯೋಗದೊಂದಿಗೆ ಸ್ವಚ್ಛ ಭಾರತ್ ಮಿಷನ್ ಯೋಜನೆ ಅಡಿಯಲ್ಲಿ ತ್ಯಾಜ್ಯ ನಿರ್ವಹಣೆ. ಬೂದು ನೀರು ನಿರ್ವಹಣೆ. ಮಲ ತ್ಯಾಜ್ಯ ಸಂಸ್ಕರಣ ಘಟಕದ ಮಹತ್ವ ಹಾಗೂ ವಿ. ಡಬ್ಲ್ಯೂಎಸ್‌ಸಿ ರಚನೆಯ ಪಾತ್ರ ಜವಾಬ್ದಾರಿಗಳ ಕುರಿತು ಮಾಹಿತಿ ನೀಡಲಾಯಿತು. ನಂತರ ಜಲಜೀವನ್ ಮಿಷನ್ ಯೋಜನೆ ಅಡಿ ಹರ್ ಘರ್ ಜಲ್ ಉತ್ಸವ ಹರ್ ಘರ್ ಜಲ್ ಗ್ರಾಮಗಳನ್ನು ಗುರುತಿಸಿ ಘೋಷಿಸುವ ಕುರಿತು ತರಬೇತಿಯನ್ನು ನೀಡಲಾಯಿತು.
ಇದೆ ಸಂದರ್ಭದಲ್ಲಿ ಕಾರ್ಯನಿರ್ವಾಹಕ ಅಧಿಕಾರಿ ಸಿ.ಆರ್. ಕೃಷ್ಣ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಟಿ ನರಸೀಪುರ ಸಹಾಯಕ ಕಾರ್ಯ ಪಾಲಕ ಇಂಜಿನಿಯರ್ ಶ್ರೀಮತಿ ರಶ್ಮಿ AE ಮಂಜುನಾಥ್ ಹಾಗೂ ಅನಿಲ್ , ಹಾಗೂ ಎಸ್ ಬಿ ಎಂ ಸಮಾಲೋಚಕರು ಶ್ರೀಮತಿ ದಿವ್ಯಶ್ರೀ ಜಿಲ್ಲಾ ಪಂಚಾಯತ್ ಮೈಸೂರು , ಭಗೀರಥ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕರಾದ ಶ್ರೀ ಕೆ ಎ ಚೆಂಗಪ್ಪ, ISA ಜಿಲ್ಲಾ ತಂಡದ ನಾಯಕರಾದ ಶ್ರೀ ಆದರ್ಶ್, ಸಾಮಾಜಿಕ ಅಭಿವೃದ್ಧಿ ತಜ್ಞರಾದ ವಿಜಯೇಂದ್ರ ಕುಮಾರ್. ಸಹಾಯಕ ಸಿಬ್ಬಂದಿ ಶ್ರೀ ನಾಗೇಶ್, ಮತ್ತು ಮಹೇಶ್ 36 ಗ್ರಾಮ ಪಂಚಾಯಿತಿಯ ಎಲ್ಲಾ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಹಾಗೂ ಕಾರ್ಯದರ್ಶಿ ವಾಟರ್ ಮ್ಯಾನ್ ಹಾಜರಿದ್ದರು.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.