2.7 ಲಕ್ಷ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ವಿಕಸಿತ್‌ ಭಾರತ್‌ ಸಂಕಲ್ಪ ಯಾತ್ರೆ

2.7 ಲಕ್ಷ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ ವಿಕಸಿತ್‌ ಭಾರತ್‌ ಸಂಕಲ್ಪ ಯಾತ್ರೆ

ದೇಶಾದ್ಯಂತ ವಿಕಸಿತ ಭಾರತ ಸಂಕಲ್ಪ ಯಾತ್ರೆ ಕೇಂದ್ರ ಸರ್ಕಾರದಿಂದ ದೇಶದ 2.7 ಲಕ್ಷ ಪಂಚಾಯತ್‌ಗಳ ವ್ಯಾಪ್ತಿಯಲ್ಲಿ “ವಿಕಸಿತ್‌ ಭಾರತ್‌ ಸಂಕಲ್ಪ ಯಾತ್ರೆ” ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳು ಮತ್ತು ಸಂಸ್ಕೃತಿ ಇಲಾಖೆ ಸಚಿವೆ ಮೀನಾಕ್ಷಿ ಲೇಖಿ ಹೇಳಿದರು ಅವರು ಹುಣಸೂರು ತಾಲೂಕಿನ ನೇರಳಕುಪ್ಪೆ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ಆವರಣದಲ್ಲಿ ವಿಕ್ಷಿತ್ ಭಾರತ ಸಂಕಲ್ಪ ಯಾತ್ರೆ ಉದ್ಘಾಟಿಸಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ
ಈ ಯಾತ್ರೆಯ ಮೂಲಕ ಪ್ರಧಾನ ಮಂತ್ರಿ ಅವಾಸ್‌ ಯೋಜನೆ (ಗ್ರಾಮೀಣ), ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಯೋಜನೆ, ಪ್ರಧಾನಮಂತ್ರಿ ಕಿಸಾನ್‌ ಯೋಜನೆ, ಫ‌ಸಲ್‌ ಬೀಮಾ ಯೋಜನೆ, ಪೋಷಣ್‌ ಅಭಿಯಾನ, ಉಜ್ವಲ್‌ ಯೋಜನೆ, ಆಯುಷ್ಮಾನ್‌ ಭಾರತ್‌, ಜನೌಷಧಿ ಯೋಜನೆ, ಪ್ರಧಾನಮಂತ್ರಿ ಗರೀಬ್‌ ಕಲ್ಯಾಣ್‌ ಅನ್ನ ಯೋಜನೆ ಸೇರಿದಂತೆ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಜನರಿಗೆ ತಿಳಿಸಲಾಗುತ್ತದೆ ಎಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಜನರು ಇರುವ ಕಡೆ ಈ ಎಲ್ಲಾ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳವುದೇ ಮುಖ್ಯ ಉದ್ದೇಶ ಎಂದು ಮಾಹಿತಿ ನೀಡಿದ್ದರು

ಸರ್ಕಾರದ ಅಭಿವೃದ್ಧಿ ಯೋಜನೆಗಳು ಗರಿಷ್ಠ ಸಂಖ್ಯೆಯಲ್ಲಿ ಫ‌ಲುನುಭವಿಗಳನ್ನು ತಲುಪುವ ನಿಟ್ಟಿನಲ್ಲಿ ಆರು ತಿಂಗಳ ಗುರಿಯನ್ನು ಖುದ್ದು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಸಚಿವರಿಗೆ ಸೂಚನೆ ನೀಡಿದ್ದಾರೆ. ಫ‌ಲನುಭವಿಗಳನ್ನು ತಲುಪುವ ನಿಟ್ಟಿನಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಿದ “ರಥ’ಗಳು ದೇಶಾದ್ಯಂತ ಸಂಚರಿಸಲಿವೆ

ಇತ್ತೀಚೆಗೆ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ, ಇನ್ನು ಹೆಚ್ಚಿನ ಶ್ರಮ ವಹಿಸುವಂತೆ ಹಾಗೂ ಅರ್ಹ ಫ‌ಲನುಭವಿಗಳಿಗೆ ಕಲ್ಯಾಣ ಯೋಜನೆಯ ಸೌಲಭ್ಯಗಳು ತ್ವರಿತವಾಗಿ ತಲುಪುವಂತೆ ನೋಡಿಕೊಳ್ಳುವಂತೆ ತಮ್ಮ ಸಹೋದ್ಯೋಗಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಸಲಹೆ ನೀಡಿದರು ಎಂದಿದ್ದಾರೆ. ಈ ದಿನ ಆದಿವಾಸಿ ನಾಯಕ ಬಿರ್ಸಾಮುಂಡ ಜಯಂತಿ ಆಗಿರುವುದರಿಂದ ದೇಶದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು ವಿಕ್ಷಿತ್ ಭಾರತ ಕಾರ್ಯಕ್ರಮ ನಾಗರಿಕರು ಬದ್ಧರಾಗಿರಬೇಕು ಮನವಿ ಮಾಡಿದ್ದರು ದೇಶದ ದೊಡ್ಡ ದೊಡ್ಡ ಬ್ಯಾಂಕ್ ಗಳ‌ ಅಧಿಕಾರಿಗಳು ಹಳ್ಳಿಗಳಿಗೆ ತೆರಳಿ ಕೆಲಸ ಮಾಡಲು ಹೇಳಿರುವುದರಿಂದ ಎಲ್ಲಾ ಸೌಲಭ್ಯಗಳನ್ನು ಸಾಧ್ಯವಾಗಿದೆ ಎಂದರು ಕಾರ್ಯಕ್ರಮಕ್ಕೂ ಮುನ್ನ ಪೂರ್ಣ ಕುಂಭದೊಂದಿಗೆ ಸ್ವಾಗತಿಸಲಾಯಿತು ಮತ್ತು ಕಿಸಾನ್ ಸನ್ಮಾನ್ ಯೋಜನೆಯ ವತಿಯಿಂದ ನೀಡಲಾದ ಪ್ರಧಾನಿ ಮಂತ್ರಿ ಪ್ರಣಮ್ ಯೋಜನೆಯಡಿಯಲ್ಲಿ ಡ್ರೋನ್ ಹಾರಿಸಿ ರೈತರಿಗೆ ತಿಳಿವಳಿಕೆ ನೀಡುವ ಮೂಲಕ ಔಷಧಿ ಯಾವ ರೀತಿಯಲ್ಲಿ ಸಿಂಪರಣೆ ಮಾಡುವ ಸಾಧನವನ್ನು ಬಿಡುಗಡೆ ಮಾಡಿದರು ಈ ಸಂದರ್ಭದಲ್ಲಿ ಕೊಡಗು ಮೈಸೂರು ಸಂಸದ ಪ್ರತಾಪಸಿಂಹ ಮಾತನಾಡಿದರು ಸಮಾರಂಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಗೀತಾ ಸುರೇಶ್ ಕೆನರಾ ಬ್ಯಾಂಕ್ ಎಂಜಿಎಂ ಉಮೇಶ್ ಎಸ್ ಬಿ ಐ ಡಿಜಿಎಂ ರಾಜಶೇಖರ್ ಕರ್ನಾಟಕ ಬ್ಯಾಂಕ್ ಡಿಜಿಎಂ ಐಯ್ಯರ್ ಸುಂದರಂ ರಮೇಶ್ ಕೆನರಾ ಬ್ಯಾಂಕ್ ಜಿಎಂ ಭಾಸ್ಕರ್ ಚಕ್ರವರ್ತಿ ಹುಣಸೂರು ಚೀಪ್ ಮ್ಯಾನೇಜರ್ ಕೆ ಸುಲೋಚನಾ ಹನಗೋಡು ಬ್ಯಾಂಕ್ ವ್ಯವಸ್ಥಾಪಕ ಶ್ರೀಜಿತ್ ತಾ ಪಂ ಮಾಜಿ ಸದಸ್ಯ ಕೆ ಗಣಪತಿ ತಾಲೂಕು ಬಿಜೆಪಿ ಅಧ್ಯಕ್ಷ ನಾಗಣ್ಣ ಹನಗೋಡು ಮಂಜುನಾಥ್ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು

ವರದಿ :ನಂದಿನಿ ಮೈಸೂರು

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ವಿಳಾಸ: ಮುಖ್ಯ ಕಚೇರಿ: ನಂ ,356/10 ಸಿ,ವೈಕುಂಠ ಧಾಮ ಪಕ್ಕದಲ್ಲಿ ಹಳೆ. ಪಿ .ಬಿ .ರಸ್ತೆ, ದಾವಣಗೆರೆ -577 006. ಶಾಖೆ ವೀರರಾಣಿ ಕೆಳದಿ ಚೆನ್ನಮ್ಮ ರಸ್ತೆ ಶುಭ ಮಂಗಳ ಮಂಟಪದ ಹತ್ತಿರ ವಿನೋಬನಗರ ಶಿವಮೊಗ್ಗ -577 204

Leave a Reply

Your email address will not be published. Required fields are marked *