
“ಉತ್ತುಂಗ” – ಪುಸ್ತಕ ಪರಿಚಯ ಕಾರ್ಯಕ್ರಮ ಸಂಘದ ಜ್ಯೇಷ್ಠ ಪ್ರಚಾರಕರಾಗಿದ್ದ ಸ್ವರ್ಗೀಯ ಶ್ರೀ ಕೃ. ಸೂರ್ಯನಾರಾಯಣ ರಾವ್ ಅವರ ಜೀವನ ಚಿತ್ರಣ.

ಸಾಧಕರ ವ್ಯಕ್ತಿತ್ವದ ಅಧ್ಯಯನದಿಂದ ಜೀವನಕ್ಕೆ ಪ್ರೇರಣೆ ಸಿಗುವುದೆಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಸಾಗರ ತಾಲ್ಲೂಕು ಘಟಕದ ಅಧ್ಯಕ್ಷ ತಿಳಿಸಿದರು .

ಸರ್ವಹಿತ ಟ್ರಸ್ಟ್ ಆಶ್ರಯಲ್ಲಿ ಸಾಗರ ಸೇವಾಸಾಗರ ಶಾಲೆಯ ಅಜಿತ್ ಸಭಾ ಭವನದಲ್ಲಿ ನಡೆದ ಆರ್.ಎಸ್.ಎಸ್. ನ ಹಿರಿಯ ಪ್ರಚಾರಕ ಕೃ ಸೂರ್ಯನಾರಾಯಣರಾವ್ ಅವರ ಜೀವನ ಚಿತ್ರಣ ‘ಉತ್ತುಂಗ’ ಕೃತಿ ಬಿಡುಗಡೆ ಮಾಡಿ ಅವರು ಮಾತಾನಾಡುತ್ತಿದ್ದರು. ಸೂರ್ಯನಾರಾಯಣರಾಯರು ತಾವು ನಂಬಿದ ಸಿದ್ದಾಂತಕ್ಕಾಗಿ ಇಡೀ ಜೀವನಕವನ್ನೇ ಸಮರ್ಪಿಸಿದರು ಅವರ ತಾರುಣ್ಯದ ಕಾಲದಲ್ಲಿ ಸಾಕಷ್ಟು ಸಂಬಳದ ಉದ್ಯೋಗ ಸಿಗುವ ಸಂದರ್ಭದಲ್ಲಿ ಅದನ್ನು ತ್ಯಜಿಸಿ ರಾಷ್ಟ್ರ ಕಾರ್ಯವನ್ನೇ ಜೀವನ ವ್ರತವಾಗಿ ಸ್ವೀಕರಿಸಿದರು ಸರಳ ಜೀವನ ,ಉದಾತ್ತ ಚಿಂತನೆಯ ಅವರ ವ್ರತ ಜೀವನ ಅಂತ್ಯದವರೆಗೂ ಹಾಗೆಯೇ ಇತ್ತು . ಅವರ ಜೀವನದ ಸಮಗ್ರ ಚಿತ್ರಣ ನೀಡುವ ‘ಉತ್ತುಂಗ’ ಪುಸ್ತಕವನ್ನು ಪ್ರತಿಯೊಬ್ಬರೂ ಓದಬೇಕೆಂದರು.

ಪುಸ್ತಕದ ಲೇಖನ ಕೃಷ್ಣಪ್ರಸಾದ್ ಬದಿ ಮಾತನಾಡಿ ಸೂರ್ಯನಾರಾಯಣರ ಜೀವನದ ಅಧ್ಯಾಯನಕ್ಕೆ ಕರ್ನಾಟಕದ ಹಾಗೂ ತಮಿಳುನಾಡಿನ ಹಲವರನ್ನುಭೇಟಿಯಾದಾಗ ಅವರು ಹಲವರ ಮೇಲೆ ಬೀರಿರುವ ಪ್ರಭಾವಕಂಡು ಅಚ್ಚರಿಯಾಯಿತು.ಅವರು ಪ್ರತಿಕ್ಷಣದಲ್ಲಿ ಕಾರ್ಯಕರ್ತರನ್ನು ತಿದ್ದಿಬೆಳೆಸಿದರು ಎಂದರು.
ಸರ್ವಹಿತ ಟ್ರಸ್ಟ್ ನ ಅಧ್ಯಕ್ಷ ಹನಿಯು ರವಿ ಮಾತನಾಡಿ ಸಂದು ಅವರದ್ದು ತಪಸ್ವಿ ಜೀವನ ರಾಷ್ಟ್ರಭಕ್ತಿ ಅವರ ಹೃದಯಾಂತರಾಳದಿಂದ ಬಂದಿತ್ತು ದೇಶದ ಹಲವು ಗಣ್ಯ ವ್ಯಕ್ತಿಗಳು ಸಂಘದ ವಿರೋಧಿಗಳಾಗಿದ್ದಾಗ್ಯೂ.ಸಂದು ಅವರು ತಮ್ಮ ವ್ಯಕ್ತಿತ್ವದ ಪ್ರಭಾವದಿಂದ ಅವರ ಮನವೊಲಿಸಿ ಅವರು ಸಂಘದ ಕಾರ್ಯಕರ್ತರಾಗುವಂತೆ ಮಾಡಿದ್ದರು,ಅವರ ಜೀವನವು ಹಲವರಿಗೆ ಪ್ರೇರಣೆಯಾಗಿದೆ. ಅವರ ಜೀವನವು ,’ಉತ್ತುಂಗ’ದಲ್ಲಿ ಚೆನ್ನಾಗಿ ಮೂಡಿಬಂದಿದೆ. ಬಿ.ಹೆಚ್.ರಾಘವೇಂದ್ರ ಪ್ರಾಸ್ತಾವಿಕ ಮಾತನಾಡಿದರು,ಅಜಿತ್ ಸ್ವಾಗತಿಸಿದ ಪವನ್ ಬಾಂಬುರೆ ವಂದಿಸಿದರು – ರಾಘವೇಂದ್ರ ಕಾನ್ಲೆ ನಿರೂಪಿಸಿದರು

ಈ ಸಂದರ್ಭದಲ್ಲಿ ಗೌರವ ಉಪಸ್ಥಿತಿ : ಶ್ರೀ ರವಿ ಹನಿಯ, ಕಾರಣಗಿರಿ ಕ್ಷೇತ್ರ ಪ್ರಧಾನ ಅರ್ಚಕರು, ಸಾಗರ ಜಿಲ್ಲಾ ಸಂಘಚಾಲಕರು ಹಾಗೂ ಶ್ರೀ ಕೃಷ್ಣಪ್ರಸಾದ್, ಪುಸ್ತಕದ ಲೇಖಕರು ಹಾಗೂ ಪ್ರಾಂತ ಸಹ ಬೌದ್ಧಿಕ ಪ್ರಮುಖರು, ರಾಷ್ಟ್ರೀಯ ಸ್ವಯಂಸೇವಕ ಸಂಘ, ಕರ್ನಾಟಕ ದಕ್ಷಿಣ ಪ್ರಾಂತ ಮತ್ತಿತರರು ಭಾಗವಹಿಸಿದ್ದರು.

ವರದಿ: ಸಿಸಿಲ್ ಸೋಮನ್ (C E O – HIND SAMACHAR)
