ಇಪ್ಪೆ ಮರದ ಬುಡದಲ್ಲಿ ಕುಳಿತರು ಸಾಕು ಮನಸ್ಸು ಶಾಂತವಾಗುತ್ತದೆ – ಸುಮನಾ ಮಳಲಗದ್ದೆ

ಇಪ್ಪೆ ಮರದ ಬುಡದಲ್ಲಿ ಕುಳಿತರು ಸಾಕು ಮನಸ್ಸು ಶಾಂತವಾಗುತ್ತದೆ – ಸುಮನಾ ಮಳಲಗದ್ದೆ.

ಮರದ ಬುಡದಲ್ಲಿ ಕುಳಿತರು ಸಾಕು ಮನಸ್ಸು ಶಾಂತವಾಗುತ್ತದೆ. ಇದರ ಎಲೆ ಹೂವು ಕಾಯಿ ತೊಗಟೆ ಇವು ಉತ್ತಮ ಔಷಧಿಯು ಹೌದು. ರುಚಿಯು ಹೌದು. ಸಾಧಾರಣವಾಗಿ ಮೇ ಕೊನೆಯ ವಾರಗಳಲ್ಲಿ ಇದರ ಹಣ್ಣು ಬೀಜ ಸಿಕ್ಕುತ್ತದೆ. ಬೀಜವನ್ನು ಸಂಗ್ರಹಿಸಿ ಉಪ್ಪಾಗೆ, ಮುರುಗನ ಬೀಜ ದಿಂದ ಎಣ್ಣೆ ತೆಗೆದಂತೆ (ತುಪ್ಪ) ತೆಗೆಯಬೇಕು ಇದು ಎರಡು ವರ್ಷಕ್ಕೂ ಹಾಳಾಗುವುದಿಲ್ಲ.

1) ಇಪ್ಪೆ ತುಪ್ಪವನ್ನು ಬಿಸಿ ಮಾಡಿ ಹಚ್ಚುವುದರಿಂದ ಸಂಧಿವಾತ ಗುಣವಾಗುತ್ತದೆ.
2) ತಲೆಗೆ ಹಾಕುವುದರಿಂದ ಕೂದಲು ಸೊಂಪಾಗಿ ಬೆಳೆಯುತ್ತದೆ ಮತ್ತು ತಲೆನೋವು ಗುಣವಾಗುತ್ತದೆ.
3) ಇಪ್ಪೇಚಕ್ಕೆ ಕಷಾಯ ಸಂಧಿವಾತಕ್ಕೆ ಒಳ್ಳೆಯ ಔಷಧಿ.
4) ತೊಗಟೆಯ ಪುಡಿಯಲ್ಲಿ ಹಲ್ಲು ಉಜ್ಜುವುದರಿಂದ ಹಲ್ಲಿನ ಸಮಸ್ಯೆಗಳು ದೂರವಾಗುತ್ತವೆ.
5) ತೊಗಟೆಯ ಪುಡಿಯನ್ನು ತೋನ್ನು ರೋಗದಲ್ಲಿ ಉಪಯೋಗಿಸುತ್ತೇನೆ.
6) ತೊಗಟೆಯ ಪುಡಿಯನ್ನು ಕ್ಯಾನ್ಸರ್ ರೋಗದಲ್ಲಿ ಬಳಸುತ್ತೇನೆ.
7) ತಿಪ್ಪೆಯ ಹೂವಿನಲ್ಲಿ ಮಾಡಿದ ಲೇಹ್ಯ ನಿದ್ದೆಗೆ ಮತ್ತು ಪುಷ್ಟಿಗೆ ತುಂಬಾ ಒಳ್ಳೆಯದು.
8) ಹೂವನ್ನು ನೆರಳಿನಲ್ಲಿ ಒಣಗಿಸಿ ಪುಡಿ ಮಾಡಿ ಬೇಕಾದಾಗ ಶರಭತ್ ಮಾಡಿ ಕುಡಿಯಬಹುದು.
9) ಹೂವನ್ನು ನೀರು ಅಥವಾ ಹಾಲು ಹಾಕಿ ಕುದಿಸಿ ಕುಡಿಯುವುದರಿಂದ ಕರುಳಿನ ಹುಣ್ಣು ಗುಣವಾಗುತ್ತದೆ.
10) ಹಸಿ ಹೂವನ್ನು ತಿನ್ನುವುದರಿಂದ ಕೆಮ್ಮು ಗುಣವಾಗುತ್ತದೆ.

11) ಅರೆಬರೆ ವಣಗಿದ ಹಣ್ಣು ಯಾವ ಡ್ರೈಫ್ರೂಟಿಗೂ ಕಡಿಮೆ ಇಲ್ಲ. ಶಾಲಾ ದಿನಗಳಲ್ಲಿ ಮರದ ಕೆಳಗೆ ಹೆಕ್ಕಿ ತಿನ್ನುವುದೇ ಒಂದು ಸಂಭ್ರಮ. ಹೆಚ್ಚಾಗಿ ಮತ್ತು ಬರುವ ಸಾಧ್ಯತೆಯೂ ಇದೆ.
12) ಇದರ ಎಳೆಯ ಎಲೆಗಳನ್ನು ಎಣ್ಣೆಯಲ್ಲಿ ಕುದಿಸಿ ಕಿವಿಗೆ ಹಾಕುವುದರಿಂದ ಕಿವಿ ನೋವು ಗುಣವಾಗುತ್ತದೆ.
13) ಬೆಳೆದ ಮರದಿಂದ ಮಣೆ (ಕುಳಿತು ಕೊಳ್ಳಲು) ಮಾಡಿ ಕುಳಿತು ಜಪ ಮಾಡುವುದರಿಂದ ಬೇಗನೆ ಸಿದ್ದಿ ಆಗುವುದು ಎನ್ನುವ ನಂಬಿಕೆ.
14) ಮರದ ಕಡಗೋಲು ತಯಾರಿಸಿ ಮಜ್ಜಿಗೆ ಕಡೆಯುವುದರಿಂದ ವಾತರೋಗ ನಿವಾರಣೆ ಆಗುತ್ತದೆ. ದೇಹಕ್ಕೂ ತಂಪು.

ಲೇಖನೆ: ಸುಮನಾ ಮಳಲಗದ್ದೆ

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *