ಕೊಡಗು : ಅಕಾಲಿಕ ಮಳೆ : ಕಂಗಾಲಾದ ಕಾಫಿ ಬೆಳೆಗಾರ.
ಚೆಟ್ಟಳ್ಳಿ ಕೊಡಗಿನ ಹಲವು ಭಾಗಗಳಲ್ಲಿ ಇತೀಚೆಗೆ ಸುರಿದ ಈ ವರ್ಷದ ಮೊದಲ ಮಳೆಯಿಂದ ಹಲವಾರು ಸಣ್ಣ ಹಾಗು ಮಧ್ಯಮ ವರ್ಗದ ಕಾಫಿ ಬೆಳೆಗಾರರು ಕಂಗಾಲಾಗಿದ್ದಾರೆ.
ಒಂದೆಡೆ ಸಣ್ಣ ಹಾಗು ಮಧ್ಯಮ ವರ್ಗದ ಬೆಳೆಗಾರರು ಕಾಫಿ ಹಣ್ಣು ಕೊಯ್ಲು ಮಾಡುವುದಕ್ಕೆ ಕಾರ್ಮಿಕರ ಕೊರತೆಯಿಂದ ಹೈರಾಣಾದರೆ,
ಇನ್ನೊಂದೆಡೆ ಹೊರಗಿನ ದಿನಗೂಲಿ ಕಾರ್ಮಿಕರನ್ನು ಕರೆತಂದು ಕಾಪಿಹಣ್ಣುಗಳನ್ನು ಗಿಡದಿಂದ ಬಿಡಿಸಿ ತಂದು ಒಣಗಿಸುವುದೇ ಒಂದು ಹರಸಾಹಸವಾಗಿದೆ. ಕಾಫಿ ಕೊಯ್ಲಿಗೆ ಕೆ. ಜಿ. ಒಂದಕ್ಕೆ ಐದರಿಂದ ಆರು ರೂಪಾಯಿ ಕೊಟ್ಟು ಗಿಡದಿಂದ ಬಿಡಿಸಿ ತಂದು, ಏಳೆಂಟು ದಿನಗಳ ಕಾಲ ಬಿಸಿಲಿನಲ್ಲಿ ಒಣಗಬೇಕಾದ ಕಾಫಿಬೀಜಕ್ಕೆ ಮೋಡ ಕವಿದ ವಾತಾವರಣ ಮತ್ತು ಮಳೆ ತಡೆಯೊಡ್ಡುತ್ತಿದೆ. ಇನ್ನೊಂದೆಡೆ ಅಕಾಲಿಕ ಮಳೆಯಿಂದಾಗಿ ಕಾಫಿ ಹೂವು ಅರಳುತಿದ್ದು ಇನ್ನು ಮೂರುನಾಲಕ್ಕೂ ದಿವಸ ಕಾಫಿ ತೋಟದ ಒಳೆಗೆ ಕಾಲಿಡುವಂತಿಲ್ಲ.
ಇನ್ನು ಹಲವಾರು ಬೆಳೆಗಾರರ ಕಾಫಿ ಇನ್ನು ಗಿಡಗಳಲ್ಲಿ ಬಾಕಿ ಇದ್ದು ಅದನ್ನು ಹೂವು ಅರಳಿದ ಮೇಲೆ ಕೊಯ್ಲು ಮಾಡಿದರೆ ಅದು ಬರುವ ವರ್ಷದ ಫಸಲಿಗೆ ಧಕ್ಕೆಯಾಗುತ್ತದೆ ಅನ್ನುತ್ತಿದ್ದಾರೆ ಬೆಳೆಗಾರರು. ಒಟ್ಟಿನಲ್ಲಿ ಕೊಡಗಿನ ಬೆಳೆಗಾರರ ಪರಿಸ್ಥಿತಿ ಇತ್ತ ವರ್ಷದ ಕಾಫಿ ಪಸಲು ಕಡಿಮೆ.. ಮತ್ತೆ ಬರುವ ವರ್ಷದ ಪಸಲಿಗೂ ವರ್ಷದ ಮೊದಲ ಮಳೆ ಸ್ವಲ್ಪ ಮಟ್ಟಿಗೆ ಹಾನಿಯಾಗುವುದು ಖಂಡಿತಾ ಎನ್ನುತ್ತಿದ್ದಾರೆ ಕೊಡಗಿನ ಕಾಫಿ ಬೆಳೆಗಾರರು.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.