
ರಿಪ್ಪನ್ ಪೇಟೆ: ವ್ಯಕ್ತಿಯೋರ್ವರು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ರಿಪ್ಪನ್ ಪೇಟೆ ಸಮೀಪದ ದೊಡ್ಡಿನಕೊಪ್ಪ ಎಂಬಲ್ಲಿ ನಡೆದಿದೆ.
ಮೃತಪಟ್ಟ ವ್ಯಕ್ತಿಯನ್ನು ಗಣೇಶ್ 38 ವರ್ಷ ಎಂದು ಗುರುತಿಸಲಾಗಿದೆ. ಮೃತ ವ್ಯಕ್ತಿಯು ಪ್ರತಿದಿನ ರಾತ್ರಿ ತಮ್ಮ ಕೃಷಿ ಜಮೀನಿಗೆ ತೆರಳಿ ಕಾಡು ಪ್ರಾಣಿಗಳಿಂದ ತಮ್ಮ ಬೆಳೆಯನ್ನು ರಕ್ಷಿಸಿಕೊಳ್ಳಲು ತೆರಳುತ್ತಿದ್ದರು, ಆದರೆ ಎಂದಿನಂತೆ ಮುಂಜಾನೆ ಮನೆಗೆ ಆಗಮಿಸದಿದ್ದಾಗ ಅನುಮಾನಗೊಂಡ ಮನೆಯವರು ತಮ್ಮ ಜಮೀನಿಗೆ ತೆರಳಿದಾಗ ಮೃತಪಟ್ಟಿರುವುದು ಬೆಳಕಿಗೆ ಬಂದಿದೆ.
ಈ ಸಂಬಂಧ ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ವರದಿ: ಸಿಸಿಲ್ ಸೋಮನ್
