“ಉಗಾಂಡದಲ್ಲಿ ಬಾರಿ ಮಳೆ ಹಿನ್ನಲೆ: ಭೂಕುಸಿತದಿಂದ 15 ಜನರ ಸಾವು”

ಉಗಾಂಡ: ಉಗಾಂಡದಲ್ಲಿ ಬಾರಿ ಮಳೆ ಹಿನ್ನಲೆ: ಭೂಕುಸಿತದಿಂದ 15 ಜನರ ಸಾವು.

ಭಾರೀ ಮಳೆಯಿಂದ ಜರ್ಜರಿತವಾಗಿರುವ ಉಗಾಂಡ ದೇಶದ ಪಶ್ಚಿಮ ಭಾಗದಲ್ಲಿ ಸಂಭವಿಸಿದ ಭೂಕುಸಿತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 15 ಜನರು ಸಾವನ್ನಪ್ಪಿದ್ದಾರೆ ಎಂದು ರೆಡ್ ಕ್ರಾಸ್ ಸಂಸ್ಥೆ ತಿಳಿಸಿದೆ ..
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋದ ಗಡಿಯಲ್ಲಿರುವ ಕಾಸೆಸೆ ಪಟ್ಟಣದಲ್ಲಿ ಸಂಭವಿಸಿದ ದುರಂತವು ಸಾಕಷ್ಟು ಸಂಖ್ಯೆಯ ಜನರನ್ನು ಕಾಣೆಯಾಗಿಸಿದೆ ಮತ್ತು ಹಲವಾರು ಮನೆಗಳನ್ನು ನಾಶಪಡಿಸಿದೆ.
“ಈಗ 15 ಮೃತದೇಹಗಳು ಪತ್ತೆಯಾಗಿವೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದ್ದು, ಮತ್ತಷ್ಟು ಜನರು ಸಾವನ್ನಪ್ಪಿರುವ ಶಂಕೆ ಇದೆ “ಎಂದು ರೆಡ್ ಕ್ರಾಸ್ ವಕ್ತಾರ ಐರಿನ್ ನಕಾಸಿಟಾ ಮಾದ್ಯಮಗಳಿಗೆ ನೀಡಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ನಾಪತ್ತೆಯಾದವರ ನಿಖರ ಸಂಖ್ಯೆ ತಿಳಿದಿಲ್ಲ ,ಆದರೆ ಆರು ಜನರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ,ಎಂದು ನಕಾಸಿಟಾ ಹೇಳಿದರು.
ರೆಡ್ ಕ್ರಾಸ್ ನಿಂದ ಹಂಚಿಕೊಂಡಿರುವ ಬೀಕರ ಛಾಯ ಚಿತ್ರಗಳಲ್ಲಿ ಕುಸಿದ ಮನೆಗಳ ಅಡಿಯಲ್ಲಿ ಸಿಲುಕಿಕೊಂಡಿರುವ ಹಲವು ದೇಹಗಳನ್ನು ಕಾಣಬಹುದು .
ಕಳೆದ ಶುಕ್ರವಾರ ನೆರೆಯ ಜಿಲ್ಲೆಯ ಬುಂಡಿಬುಗ್ಯೋದಲ್ಲಿ ಭಾರೀ ಮಳೆಯಿಂದಾಗಿ ಮೂರು ಜನರು ಸಾವನ್ನಪ್ಪಿದ್ದರೆ, ಮತ್ತು ಹಲವಾರು ಜನರು ಗಾಯಗೊಂಡಿದ್ದರು.
ಜುಲೈ ಅಂತ್ಯದಲ್ಲಿ ಸಂಭವಿಸಿದ ಹಠಾತ್ ಪ್ರವಾಹದಿಂದ ಪೂರ್ವ ಉಗಾಂಡಾದ ಪಟ್ಟಣವಾದ ಮಾಬ್ಲೇ ಯಲ್ಲಿ ಕನಿಷ್ಠ 22 ಜನರು ಸಾವನ್ನಪ್ಪಿದ್ದರು. ಇದರಿಂದ ನೂರಾರು ನಿವಾಸಿಗಳು ನಿರಾಶ್ರಿತರಾಗಿದ್ದಾರೆ.

ವರದಿ : ಸಿಂಚನ ಜಯಂತ ಬಲೇಗಾರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *