“ಭೂ ಪುನಃಶ್ಚೇತನ ಬರ ನಿರ್ವಹಣೆ ಮತ್ತು ಬರಡು ಭೂಮಿ ಚೇತರಿಕೆ” ಈಗಿನ ಪರಿಸರಕ್ಕೆ ಅವಶ್ಯಕತೆಯಿದೆ-ಅರವಿಂದ ಪಿ ವಲಯ ಅರಣ್ಯಾಧಿಕಾರಿ

“ಭೂ ಪುನಃಶ್ಚೇತನ ಬರ ನಿರ್ವಹಣೆ ಮತ್ತು ಬರಡು ಭೂಮಿ ಚೇತರಿಕೆ” ಈಗಿನ ಪರಿಸರಕ್ಕೆ ಅವಶ್ಯಕತೆಯಿದೆ -ಅರವಿಂದ ಪಿ ವಲಯ ಅರಣ್ಯಾಧಿಕಾರಿ

ಸಾಗರ: “ದಿನನಿತ್ಯ ಅರಣ್ಯಗಳು ಮಾನವನ ದುರಾಸೆಯಿಂದ, ಅತಿಕ್ರಮಣದಿಂದ ನಾಶವಾಗುತ್ತಿದೆ. ಭೂಮಿಯಲ್ಲಿ ಹೆಚ್ಚಿನ ಇಳುವರಿ ಪಡೆಯಲು ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸುವುದರಿಂದ ಭೂಮಿಯ ಫಲವತ್ತತೆ ಕಡೆಮೆಯಾಗಿ ಬರಡು ಭೂಮಿಯಾಗುತ್ತಿದೆ. ಎಲ್ಲಾ ಕಡೆ ಪ್ಲಾಸ್ಟಿಕ್ ತ್ಯಾಜ್ಯಗಳನ್ನು ಎಸೆಯುವುದರ ಮುಖಾಂತರ ನೀರು ಇಂಗುವುದು ಕಡಿಮೆಯಾಗಿ ನೀರಿನ ಲಭ್ಯತೆ ಕ್ರಮೇಣ ಜನರಿಗೆ ದೂರವಾಗುತ್ತಿದೆ. ಕೆರೆಗಳು ಮಾಯವಾಗಿ ರಿಯಲ್ ಎಸ್ಟೇಟ್ ಗಳಾಗಿ ಪರಿವರ್ತನೆಗೊಳ್ಳುವುದರ ಮುಖಾಂತರ ಪ್ರಾಣಿ, ಪಶು-ಪಕ್ಷಿಗಳಿಗೆ ನೀರಿನ ಸಮಸ್ಯೆಯುಂಟಾಗಿ ಅರಣ್ಯದಲ್ಲಿ ಸಮತೋಲನ ತಪ್ಪಿ ವನ್ಯ ಮೃಗಗಳು ನಾಡಿಗೆ ಬಂದು ರೈತ ಮತ್ತು ವನ್ಯ ಮೃಗಗಳ ನಡುವೆ ಸಂಘರ್ಷ ಏರ್ಪಟ್ಟಿದೆ. ನಾವು ಈಗಿನಿಂದಲೇ ಇದರ ಬಗ್ಗೆ ಮಾರ್ಗೋಪಾಯಗಳನ್ನು ಹುಡುಕದಿದ್ದರೆ ರಾಜ್ಯದಲ್ಲಿ ನೀರು ಮತ್ತು ವಾತಾವರಣ ಕಲುಷಿತಗೊಂಡು ಕೋವಿಡ್, ಡೆಂಗ್ಯೂ, ಮಲೇರಿಯಾದಂತಹ ಮರಣಾಂತಿಕ ಖಾಯಿಲೆಗೆ ತುತ್ತಾಗುತ್ತೇವೆ. ಕೋವಿಡ್ ಪೀಡಿತರಿಗೆ ಸಮಯದಲ್ಲಿ ಆಮ್ಲಜನಕ ಒದಗಿಸುವಲ್ಲಿ ವಿಫಲರಾಗಿ ಲಕ್ಷಾಂತರ ಜನ ಸಾವಿಗೀಡಾಗಿದ್ದಾರೆ. ಇಂತಹ ನೈಸರ್ಗಿಕವಾಗಿ ಆಮ್ಲಜನಕವನ್ನು ತಯಾರಿಸುವ ಮರ-ಗಿಡಗಳ ರಕ್ಷಣೆ ಈ ದಿನಗಳಲ್ಲಿ ಅತ್ಯವಶ್ಯಕತೆಯಿದೆ ಮತ್ತು ನಾವೆಲ್ಲರೂ ಕೂಡಿ ಸುಂದರ, ಪರಿಶುದ್ಧ ಭೂ-ಪುನಃಶ್ಚೇತನ, ಸಮರ್ಥವಾಗಿ ಬರ ನಿರ್ವಹಣೆ ಮತ್ತು ನರಡು ಭೂಮಿಯನ್ನು ಹಸಿರೀಕರಣ ಮಾಡಿ, ಸಂರಕ್ಷಿಸುವ ಪಣತೊಡೋಣ ಎಂದು ಅರವಿಂದ ಪಿ., ವಲಯ ಅರಣ್ಯಾಧಿಕಾರಿಗಳು, ಸಾಗರ. ಎಲ್.ಬಿ.ಮತ್ತು ಎಸ್.ಬಿ.ಎಸ್.ಕಾಲೇಜು, ಡಾ.ಜಿ.ಎ.ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ, ಸಾಗರ, ಅರಣ್ಯ ಇಲಾಖೆ ಸಾಗರ, ಎನ್.ಎಸ್.ಎಸ್. ಮತ್ತು ಎನ್.ಸಿ.ಸಿ.ಘಟಕಗಳು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಕಾಲೇಜು ಆವರಣದಲ್ಲಿ ರಾಜ್ಯಕ್ಕೆ ಮಾದರಿಯಾಗುವ “ ಒನ್ ಸ್ಟೂಡೆಂಟ್, ಒನ್ ಪ್ಲಾನ್ಟ್” ಯೋಜನೆಯನ್ವಯ ಐದನೂರಕ್ಕೂ ಮಿಕ್ಕಿ ಕಾಡು ಜಾತಿಯ ಗಿಡಗಳನ್ನು ಕಾಲೇಜು ವಿದ್ಯಾರ್ಥಿಗಳು ಗಿಡ ನೆಡುವುದರ ಮೂಲಕ ಪಾಲ್ಗೊಂಡು ವನ-ಮಹೋತ್ಸವಕ್ಕೆ ಚಾಲನೆ ನೀಡಿದರು.


ಮೊದಲು ಎನ್.ಎಸ್.ಎಸ್.ವಿದ್ಯಾರ್ಥಿಗಳಿಂದ ನಾಡಗೀತೆಯೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಸುಮಂತ್ ದ್ವಿತೀಯ ಬಿ.ಎ. ಸ್ವಾಗತಿಸಿದರು. ಸಭೆಯ ಅಧ್ಯಕ್ಷತೆಯನ್ನು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿರುವ ಡಾ. ಹೆಚ್.ಎಂ.ಶಿವಕುಮಾರ್ ವಹಿಸಿದ್ದರು. ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಪ್ರತಿಜ್ಞೆಯನ್ನು ಕೋಶಾಧ್ಯಕ್ಷರಾದ ಕೆ.ವೆಂಕಟೇಶ್ ಬೋದಿಸಿದರು. ಮುಖ್ಯ ಅತಿಥಿಗಳಾಗಿ ಎಂ.ಆರ್.ಸತ್ಯನಾರಾಯಣ, ಸಹಕಾರ್ಯದರ್ಶಿಗಳು, ಡಾ. ಎ.ಎಸ್.ಲಕ್ಷ್ಮೀಶ್, ಪ್ರಾಂಶುಪಾಲರು, ಎಲ್.ಬಿ.ಮತ್ತು ಎಸ್.ಬಿ.ಎಸ್.ಕಾಲೇಜು, ಡಾ.ಸುಮುಖ ಪಿ.ಸ್, ನಿರ್ದೇಶಕರು ಕೆ.ಹೆಚ್.ಶ್ರೀನಿವಾಸ ಸ್ನಾತಕೋತ್ತರ ಅಧ್ಯಯನ ಸಂಸ್ಥೆ, ಡಾ. ಶಿಲ್ಪ ವಿ.ಎನ್, ಪ್ರಾಂಶುಪಾಲರು, ಡಾ. ಜಿ.ಎ.ನಾರಿಬೋಲಿ ಶಿಕ್ಷಣ ಮಹಾವಿದ್ಯಾಲಯ ಇವರುಗಳು ಭಾಗವಹಿಸಿದ್ದರು. ಮಾನಸ ಆರ್, ದ್ವಿತೀಯ ಬಿ.ಸಿ.ಎ, ಇವರು ನಿರೂಪಿಸಿದರು, ಮಂಜುನಾಥ ಪ್ರಥಮ ಬಿ.ಎ. ಇವರು ವಂದಿಸಿದರು

ವರದಿ :ಅಪೂರ್ವ ಸಾಗರ

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *