ನೇಣಿಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮದ ಮಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ

ಮೈಸೂರು: ನೇಣಿಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮದ ಮಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.

ನೇಣಿಗೆ ಶರಣಾದ ಘಟನೆ ಮೈಸೂರು ಜಿಲ್ಲೆ ಸಾಲಿಗ್ರಾಮದ ಮಲುಗನಹಳ್ಳಿ ಗ್ರಾಮದಲ್ಲಿ ನಡೆದಿದೆ.ದೀಪಿಕಾ(21) ಮೃತ ದುರ್ದೈವಿ.ವರದಕ್ಷಿಣೆ ಕಿರುಕುಳ ಆರೋಪದ ಹಿನ್ನಲೆ ಗಂಡ ನಾಗರಾಜ್,ಮಾವ ತಮ್ಮಯ್ಯ,ಅತ್ತೆ ಪೊಲೀಸರ ಅತಿಥಿಯಾಗಿದ್ದಾರೆ.ದೀಪಿಕಾ ಹಾಗೂ ನಾಗರಾಜ್ ದೂರದ ಸಂಭಂಧವಾಗಿದ್ದರೂ ವರಸೆಯಲ್ಲಿ ಅಣ್ಣತಂಗಿ ಆಗಬೇಕು.ಹೀಗಿದ್ದೂ ಇಬ್ಬರು ಪ್ರೀತಿಸಿದ್ದಾರೆ.ವರಸೆಯಲ್ಲಿ ಅಣ್ಣತಂಗಿ ಆದ ಕಾರಣ ಎರಡು ಮನೆಯವರಲ್ಲೂ ಮದುವೆಗೆ ವಿರೋದ ವ್ಯಕ್ತವಾಗಿದೆ.ಮನೆಯವರ ವಿರೋಧ ಲೆಕ್ಕಿಸದ ಲವರ್ಸ್ ಮೂರು ವರ್ಷಗಳ ಹಿಂದೆ ಎಸ್ಕೇಪ್ ಆಗಿ ಮದುವೆ ಆಗಿದ್ದಾರೆ.ಎರಡು ವರ್ಷಗಳ ಕಾಲ ಕೆ.ಆರ್.ನಗರದ ಗ್ರಾಮವೊಂದರಲ್ಲಿ ನೆಲೆಸಿದ್ದು ಒಂದು ವರ್ಷದ ಹಿಂದೆ ಮಲುಗನಹಳ್ಳಿ ಗ್ರಾಮಕ್ಕೆ ಬಂದಿದ್ದಾರೆ.ನಾಗರಾಜ್ ಹಾಗೂ ಪೋಷಕರು ದೀಪಿಕಾಗೆ ವರದಕ್ಷಿಣೆಗಾಗಿ ಕಿರುಕುಳ ಕೊಟ್ಟಿದ್ದಾರೆ.ಬೇಸತ್ತ ದೀಪಿಕ ನೇಣಿಗೆ ಶರಣಾಗಿದ್ದಾಳೆ.ದೀಪಿಕಾ ಸಾವಿಗೆ ವರದಕ್ಷಿಣೆ ಕಿರುಕುಳ ಕಾರಣವೆಂದು ಆರೋಪಿಸಿ ದೀಪಿಕಾ ಪೋಷಕರು ಸಾಲಿಗ್ರಾಮ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.ಸಧ್ಯ ಪತಿ ನಾಗರಾಜ್,ಮಾವ ತಮ್ಮಯ್ಯ,ಅತ್ತೆ ಜಯಮ್ಮ ಪೊಲೀಸರ ಅತಿಥಿಯಾಗಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *