ಮೀನು ಸಾವನ್ನಪ್ಪಿದ್ದಕ್ಕೆ ಖಿನ್ನತೆಗೊಳಗಾಗಿ ಬಾಲಕ ಆತ್ಮಹತ್ಯೆ.

ಮಲಪ್ಪುರಂ ಜಿಲ್ಲೆ: ಮೀನು ಸಾವನ್ನಪ್ಪಿದ್ದಕ್ಕೆ ಖಿನ್ನತೆಗೊಳಗಾಗಿ ಬಾಲಕ ಆತ್ಮಹತ್ಯೆ

ಕೊಚ್ಚಿ: ಮನೆಯಲ್ಲಿಟ್ಟಿದ್ದ ಅಕ್ವೇರಿಯಂನ ಮೀನು ಸಾವನ್ನಪ್ಪಿದ್ದಕ್ಕೆ ನೊಂದು ಬಾಲಕನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಲಪ್ಪುರಂ ಜಿಲ್ಲೆಯ ಪೊನ್ನಾನಿಯ ಚಂಗರಂಕುಲಂ ಎಂಬಲ್ಲಿ ನಡೆದಿದೆ.
ಮೂಕುತಲ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ರೋಷನ್ ಮೆನನ್ (13 ) ಆತ್ಮಹತ್ಯೆ ಮಾಡಿಕೊಂಡ ಬಾಲಕ. ಪ್ರಾಣಿ ಪ್ರಿಯನಾಗಿದ್ದ ಈತ ತನ್ನ ಮನೆಯಲ್ಲಿ ಅಕ್ವೇರಿಯಂ ಇಟ್ಟುಕೊಂಡಿದ್ದ. ಮೀನುಗಳನ್ನು ಬಹಳವಾಗಿ ಪ್ರೀತಿಸುತ್ತಿದ್ದ ರೋಷನ್, ಪ್ರತಿ ದಿನ ಹೆಚ್ಚಿನ ಸಮಯ ಅಕ್ವೇರಿಯಂನಲ್ಲಿರುವ ಮೀನಿನೊಂದಿಗೆ ಆಡುತ್ತಿದ್ದ. ಆದರೆ ಇತ್ತೀಚೆಗೆ ಮೀನು ಸತ್ತಿತ್ತು. ಇದಾದ ಬಳಿಕ ಆತ ತೀವ್ರ ಖಿನ್ನತೆಗೆ ಒಳಗಾಗಿದ್ದ ಎನ್ನಲಾಗಿದೆ. ಪ್ರಾಣಿ ಪಕ್ಷಿಗಳನ್ನೂ ಹಚ್ಚಿಕೊಂಡಿದ್ದ ಬಾಲಕ ಪಾರಿವಾಳಗಳಿಗೆ ಆಹಾರ ನೀಡಲೆಂದು ಟೆರೇಸ್ ಮೇಲೆ ಹೋದವನು ಎಷ್ಟೇ ಹೊತ್ತಾದರೂ ಕೆಳಗಡೆ ಬಾರದಿದ್ದುದನ್ನು ಗಮನಿಸಿದ ಪೋಷಕರು ಆತನಿಗಾಗಿ ಹುಡುಕಾಡಿದ್ದಾರೆ. ಈ ವೇಳೆ ಮನೆಯ ಟೆರೇಸ್ನಲ್ಲಿರುವ ಪ್ಲಾಸ್ಟಿಕ್ ಶೆಡ್’ನೊಳಗೆ ಬಾಲಕ ಹಗ್ಗದಿಂದ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನೆ. ಕೂಡಲೇ ಆತನನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದರಾದರೂ, ಆ ವೇಳೆಗಾಗಲೇ ಬಾಲಕ ಸಾವನ್ನಪ್ಪಿದ್ದ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *