ಸಿದ್ದಾಪುರ: ಶ್ರೀ ವಿನಾಯಕ ಸೌಹಾರ್ದದಿಂದ ನಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ.
ಇಲ್ಲಿನ ಶ್ರೀ ವಿನಾಯಕ ಸೌಹಾರ್ದ ಕ್ರೆಡಿಟ್ ಕೊ ಆಪರೇಟಿವ್ ಲೀ. ಸಿದ್ದಾಪುರ ಇದರ ಆಡಳಿತ ಮಂಡಳಿ ವತಿಯಿಂದ ಪಟ್ಟಣದ ಬಾಲಭವನದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನಾ ಸಮಾರಂಭ ನಡೆಯಿತು. ಕಳೆದ 2021-22 ನೇ ಸಾಲಿನಲ್ಲಿ 90%ಗಿಂತ ಹೆಚ್ಚಿನ ಅಂಕ ಗಳಿಸಿ ಉತ್ತೀರ್ಣರಾದ ಸಹಕಾರಿಯ ಸಿಬ್ಬಂದಿಗಳ ಮಕ್ಕಳಾದ ಕಿಶೋರ್ ಹೆಗಡೆ, ಶ್ರೇಯಸ್ ನಾಯ್ಕ, ಮನೋಜ್ ನಾಯ್ಕ, ಮೋನಿಕಾ ನಾಯ್ಕ, ಮತ್ತು ಮಯೂರ್ ನಾಯ್ಕ ಪ್ರತಿಭಾ ಪುರಸ್ಕಾರ ನೀಡಿಸನ್ಮಾನಿಸಲಾಯಿತು. ಇದೇ ವೇಳೆ ಸಹಕಾರಿಯಿಂದ ನಿರ್ಗಮಿತ ನಿರ್ದೇಶಕರಾದ ಶ್ರೀ ಸದಾನಂದ ಕಾಮತ್ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಸಹಕಾರಿಯ ಅಧ್ಯಕ್ಷ ಆನಂದ ಈರಾ ನಾಯ್ಕ, ಎಂ.ಡಿ ವಿನಾಯಕ್ ನಾಯ್ಕ, ಹಾಗೂ ಎಲ್ಲಾ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಪ್ರಧಾನ ವ್ಯವಸ್ಥಾಪಕ ಶ್ರೀಧರ್ ಹೆಗಡೆ, ಮತ್ತು ಭಾಗೀರಥಿ ಮೇಸ್ತ ನಿರ್ವಹಿಸಿದರು.
ವಿಭಾಗೀಯ ವ್ಯವಸ್ಥಾಪಕ ಪ್ರಶಾಂತ್ ನಾಯ್ಕ ಸ್ವಾಗತಿಸಿದರು ಹಾಗೂ ಕೇಶವ್ ಮೇಸ್ತ ವಂದಿಸಿದರು.
ವರದಿ: ನಾಗರಾಜ ನಾಯ್ಕ
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.