ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುಟ್ಟೂರಿನಲ್ಲಿ ಬುಧವಾರ 11.50ರಲ್ಲಿ ಮತದಾನ ಮಾಡಿದರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುಟ್ಟೂರಿನಲ್ಲಿ ಬುಧವಾರ 11.50ರಲ್ಲಿ ಮತದಾನ ಮಾಡಿದರು

ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಹುಟ್ಟೂರಿನಲ್ಲಿ ಬುಧವಾರ 11.50ರಲ್ಲಿ ಮತದಾನ ಮಾಡಿದರು.
ಕ್ಷೇತ್ರದ ಬೂತ್ ಸಂಖ್ಯೆ 86 , ಸೀರಿಯಲ್ ನಂ.351 ಸಿದ್ದರಾಮಯ್ಯ ತಮ್ಮ ಪುತ್ರ ಯತೀಂದ್ರ ಅವರೊಂದಿಗೆ ಆಗಮಿಸಿ ಮತ ಚಲಾಯಿಸಿದರು. ಮೈಸೂರಿನಿಂದ ಸ್ವಗ್ರಾಮಕ್ಕೆ ಆಗಮಿಸಿದ ಸಿದ್ದರಾಮಯ್ಯ ಊರಿನಲ್ಲಿರುವ ಮನೆಯಲ್ಲಿ ವಿಶ್ರಾಂತಿ ಪಡೆದು, ಬಳಿಕ ಗ್ರಾಮದ ಸಿದ್ದರಾಮೇಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ನಂತರ ಮತದಾನ ಮಾಡಿದರು. ಸೊಸೆ ಸ್ಮಿತಾ ರಾಕೇಶ್, ಎಂಎಲ್ಸಿ ಡಾ‌.ಕೆ. ತಿಮ್ಮಯ್ಯ ಇದ್ದರು. ಮತ ಚಲಾಯಿಸಿ ಈಚೆ ಬರುತ್ತಿದ್ದಂತೆ ಸಿದ್ದರಾಮಯ್ಯ ಅವರನ್ನು ಸುತ್ತುವರಿದ ಅಭಿಮಾನಿಗಳು ಮುಂದಿನ ಮುಖ್ಯಮಂತ್ರಿ ಎಂಬ ಘೋಷಣೆ ಮೊಳಗಿಸಿದರು. ಚುನಾವಣೆಯಲ್ಲಿ ಸಾಹೇಬರು ೩೦ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ ಎಂದು ಕೂಗಿ ಸಂಭ್ರಮಿಸಿದರು. ಮೈಸೂರು ಹುಲಿ ಸಿದ್ದರಾಮಯ್ಯ ಎಂದು ಘೋಷಣೆ. ಬಳಿಕ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಮತದಾನಕ್ಕೆ ಮುನ್ನಾ ಮಾತನಾಡಿದ ಸಿದ್ದರಾಮಯ್ಯ, ಕಾಂಗ್ರೆಸ್ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮೋದಿ,ಶಾ ಎಷ್ಟೆಲ್ಲಾ ರ್ಯಾಲಿ, ಸಭೆ ಮಾಡಿದರೂ ವರ್ಕೌಟ್ ಆಗಲ್ಲ. ಹಣವನ್ನು ನೀರಿನಂತೆ ಖರ್ಚು ಮಾಡಿದರೂ ಜನ ಅವರ ಪರ ಇಲ್ಲ. ಬಿಜೆಪಿ ಅವಧಿಯ ದುರಾಡಳಿತ, ಜನ ವಿರೋಧಿ ನೀತಿಗಳಿಂದ ಬೇಸತ್ತಿದ್ದಾರೆ. ಕಾಂಗ್ರೆಸ್ ಈ ಬಾರಿ ಅಧಿಕಾತಕ್ಕೆ ಬರಲಿದೆ. ನಾನೂ ಈ ಕ್ಷೇತ್ರದಲ್ಲಿ ಭಾರಿ ದೊಡ್ಡ ಅಂತರದಲ್ಲಿ ಗೆಲ್ಲುವ ವಿಶ್ವಾಸ ಇದೆ ಎಂದರು.
ಸಿಎಂ ಬೊಮ್ಮಾಯಿ ಅವರು ಬಿಜೆಪಿ ಸ್ಪಷ್ಟ ಬಹುಮತ ಪಡೆಯುತ್ತೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಎಲ್ಲ ಪಕ್ಷದವರು ಪೂರ್ಣಬಹುಮತ ಬರುತ್ತೆ ಅಂತಲೇ ಹೇಳುವುದು, ಎಲ್ಲರೂ ವಿಶ್ವಾಸದಲ್ಲೇ ಇರುತ್ತಾರೆ. ಆದರೆ ನಾವು ಅಧಿಕಾರಕ್ಕೆ ಬರುವುದು ಖಚಿತ ಎಂದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *