ಕಲಬುರಗಿಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾಧ್ಯಮ ಹೇಳಿಕೆ:

ಕಲಬುರಗಿ : ಕಲಬುರಗಿಯಲ್ಲಿ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರ ಮಾಧ್ಯಮ ಹೇಳಿಕೆ:

ಯಡಿಯೂರಪ್ಪನವರ ರಥ ಪಂಚರ್‌ ಆಗದಿದ್ದರೆ ಸಾಕು. ಈಗಾಗಲೇ ಯಡಿಯೂರಪ್ಪ ಅವರನ್ನು ಬಿಜೆಪಿ ಹೈಕಮಾಂಡ್‌ ಪಂಚರ್‌ ಮಾಡಿಬಿಟ್ಟಿದೆ. ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದೇ ಅವರನ್ನು ಪಂಚರ್‌ ಮಾಡಿದಂತೆ. ಅವರ ಬಗ್ಗೆ ನನಗೆ ಕನಿಕರ ಇದೆ. ಅವರು ಆರೋಗ್ಯವಾಗಿದ್ದಾರೆ ಎಂಬುದು ಖುಷಿಯ ವಿಚಾರ. ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕು ಎಂದು ಹೋರಾಟ ಮಾಡುತ್ತಿದ್ದಾರೆ ಸಂತೋಷ, ಮಾಡಲಿ. ಆದರೆ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕಿತ್ತು ಹಾಕಿದ್ದು ಯಾಕೆ? ಮತ್ತೆ ಅವರು ಮುಖ್ಯಮಂತ್ರಿ ಆಗುತ್ತಾರ? ಹೀಗಾದ್ದಾಗ ಅವರನ್ನು ನೋಡಿ ಜನ ಮತ ಹಾಕುತ್ತಾರ? ಕಳೆದ ಬಾರಿ ಯಡಿಯೂರಪ್ಪ ಅವರೇ ಸ್ವತಃ ಮುಖ್ಯಮಂತ್ರಿಯಾಗುತ್ತೇನೆ ಎಂದು ಎಲ್ಲಾ ಕಡೆ ಪ್ರಚಾರ ಮಾಡಿದ್ರು, ಆದರೂ ಗೆದ್ದಿದ್ದು 104 ಸೀಟುಗಳು ಮಾತ್ರ, ಈ ಬಾರಿ ಮುಖ್ಯಮಂತ್ರಿ ಸ್ಥಾನದಿಂದಲೂ ಕಿತ್ತು ಹಾಕಿದ್ದಾರೆ, ಇವರನ್ನು ನಂಬಿ ಜನ ಮತ ನೀಡುತ್ತಾರ?

ನಾವ್ಯಾರು ಕನಸು ಕಾಣುತ್ತಾ ಇರುವುದಲ್ಲ, ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬರುವುದು ವಾಸ್ತವ. ಮುಖ್ಯಮಂತ್ರಿಯನ್ನು ಆಯ್ಕೆ ಮಾಡುವುದು ಹೈಕಮಾಂಡ್. ಬಿಜೆಪಿ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದೆ, ಸರ್ಕಾರದ ಭ್ರಷ್ಟಾಚಾರ, 40% ಕಮಿಷನ್‌ ಹಗರಣಗಳು, ವಚನ ಭ್ರಷ್ಟತೆ ಇವುಗಳಿಂದ ಜನ ಬೇಸತ್ತಿದ್ದಾರೆ. ಪೆಟ್ರೋಲ್‌, ಡೀಸೆಲ್‌ ಸೇರಿ ಅಗತ್ಯ ವಸ್ತುಗಳ ಬೆಲೆಯೇರಿಕೆ ಆಗಿರುವುದರಿಂದ ಜನರು ಹೈರಾಣಾಗಿದ್ದಾರೆ. ಹೀಗಾದ್ದಾಗ ಮತ್ತೆ ಬಿಜೆಪಿಗೆ ಮತ ಹಾಕುತ್ತಾರ?

ನಾನು ಸೋಲಿನ ಭಯದಿಂದ ಕ್ಷೇತ್ರ ಹುಡುಕುತ್ತಿರುವುದಲ್ಲ, ಹತ್ತಿರದ ಕ್ಷೇತ್ರ ಬೇಕು ಎಂಬ ಕಾರಣಕ್ಕೆ ಹುಡುಕಾಟ ಮಾಡುತ್ತಿದ್ದೇನೆ. ಬಾದಾಮಿಯಿಂದ ನಿಂತರೆ ನೂರಕ್ಕೆ ನೂರು ಗೆಲ್ಲುತ್ತೇನೆ, ಕಳೆದ ಬಾರಿ ಚಾಮುಂಡೇಶ್ವರಿಯಲ್ಲಿ ನನ್ನನ್ನು ಸೋಲಿಸಲು ಬಹಳ ಪ್ರಯತ್ನ ಮಾಡಿದ್ದರು, ಇದರ ಸುಳಿವು ಸಿಕ್ಕಿದ್ದರಿಂದ ಬಾದಾಮಿಯಿಂದ ಸ್ಪರ್ಧೆ ಮಾಡಿದ್ದೆ. ಈ ಬಾರಿ ಬಾದಾಮಿ ಜನ ತಮ್ಮ ಆಸ್ತಿ ಮಾರಿ ಹೆಲಿಕಾಪ್ಟರ್‌ ತೆಗೆದುಕೊಡುತ್ತೇವೆ, ನೀವು ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂದು ಕರೆದಿದ್ದಾರೆ, ನನ್ನನ್ನು ಸೋಲಿಸುವುದಾಗಿದ್ದರೆ ಜನ ತಮ್ಮ ಆಸ್ತಿ ಮಾರಿ ಹೆಲಿಕಾಪ್ಟರ್‌ ಕೊಡಿಸುತ್ತಾರ?

ನಾವು 5 ವರ್ಷದಲ್ಲಿ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿ ಕೊಟ್ಟಿದ್ದೆವು, ಕಳೆದ 4 ವರ್ಷದಲ್ಲಿ ಬಿಜೆಪಿ ಸರ್ಕಾರ ಒಂದೇ ಒಂದು ಮನೆ ಕಟ್ಟಿಸಿಕೊಟ್ಟಿಲ್ಲ. ಜನ ಯಾರಿಗೆ ಮತ ನೀಡುತ್ತಾರೆ? ನಾನು ಕೋಲಾರದಿಂದ ಸ್ಪರ್ಧೆ ಮಾಡಿದರೆ ನೂರಕ್ಕೆ ನೂರು ಗೆಲ್ಲುತ್ತೇನೆ. ಇದಕ್ಕೆ ಹೈಕಮಾಂಡ್‌ ಒಪ್ಪಿಗೆ ಬೇಕು ಅಷ್ಟೆ. ನಾನು ಕೋಲಾರದಿಂದಲೇ ಸ್ಪರ್ಧೆ ಮಾಡಬೇಕು ಎಂದು ತೀರ್ಮಾನ ಮಾಡಿದ್ದೇನೆ. ಹೈಕಮಾಂಡ್‌ ನ ಒಪ್ಪಿಗೆ ಸಿಕ್ಕರೆ ಕೋಲಾರದಿಂದ ನನ್ನ ಸ್ಪರ್ಧೆ ಸಾಧ್ಯ.

ನಾನು ಕೇಂದ್ರ ಸರ್ಕಾರಕ್ಕೆ ಯಾದಗಿರಿ, ಕಲಬುರಗಿ, ಕೊಡಗು, ಬೀದರ್‌ ನ ಕುರುಬರು, ಗೊಂಡ, ರಾಜಗೊಂಡ ಸಮುದಾಯವನ್ನು ಎಸ್‌,ಟಿ ಸೇರಿಸಿ ಎಂದು ಶಿಫಾರಸು ಮಾಡಿದ್ದೆ. ಇವು ಕುರುಬ ಸಮುದಾಯಕ್ಕೆ ಇರುವ ಸಮಾನಾರ್ಥಕ ಹೆಸರುಗಳು. ಶಿಫಾರಸು ಮಾಡಿ 8 ವರ್ಷ ಆಯ್ತು, ಈ ವರೆಗೆ ಮಾಡಿಲ್ಲ. ಈಗ ಎರಡೂ ಕಡೆ ಬಿಜೆಪಿಯದೇ ಸರ್ಕಾರ ಇದ್ದರೂ ಇನ್ನೂ ಆಗಿಲ್ಲ. ಇವರನ್ನು ನಂಬುತ್ತಾರ? ಕುರುಬರು ನಮ್ಮನ್ನು ಎಸ್‌,ಟಿ ಸೇರಿಸಿ ಎಂದು ಹೇಳಿ ಎಷ್ಟು ದಿನ ಆಯ್ತು ಸೇರಿಸಿದ್ರಾ? ನಾನು ಶಿಫಾರಸು ಮಾಡಿದ್ದನ್ನು ಸೇರಿಸಿಲ್ಲ, ಇವರು ಹೇಳಿದ್ದನ್ನು ಸೇರಿಸಿಲ್ಲ.

ಪಂಚಮಸಾಲಿಗಳಿಗೆ ಮೀಸಲಾತಿ ಬದಲಾವಣೆ ಮಾಡಿಲ್ಲ, ಅದಕ್ಕೀಗ ಕೋರ್ಟ್ ತಡೆಯಾಜ್ಞೆ‌ ನೀಡಿದೆ. ತಡೆಯಾಜ್ಞೆ ನೀಡುತ್ತಾರೆ ಎಂಬುದು ಗೊತ್ತಿದ್ದರೂ ಅವರು ಒಂದು ತೀರ್ಮಾನ ಮಾಡಲು ಹೋದರು. ಎಸ್‌,ಸಿ ಗಳಿಗೆ 15 ರಿಂದ 17% ಮತ್ತು ಎಸ್‌,ಟಿ ಗಳಿಗೆ 3 ರಿಂದ 7% ಗೆ ಮೀಸಲಾತಿ ಏರಿಕೆ ಮಾಡಿದರು. ಇದಕ್ಕೆ ಸಂವಿಧಾನ ತಿದ್ದುಪಡಿ ಮಾಡಿಸಿದ್ರಾ? ಈ ಬಗ್ಗೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ ಸಂವಿಧಾನದ 9ನೇ ಶೆಡ್ಯೂಲ್‌ ಗೆ ಸೇರಿಸುವ ಪ್ರಯತ್ನ ಮಾಡಿದ್ರಾ? ಕೇಂದ್ರ ಮತ್ತು ರಾಜ್ಯದಲ್ಲಿ ಯಾರ ಸರ್ಕಾರ ಇದೆ? ಡಬ್ಬಲ್‌ ಇಂಜಿನ್‌ ಸರ್ಕಾರದ ಸಾಧನೆ ಇದೆನಾ?

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *