ಮಕ್ಕಳೊಂದಿಗೆ ಹುಟ್ಟುಹಬ್ಬ ಆಚರಿಸಿಕೊಂಡ ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿಶ್ರೀಪಾಲ್
ಉಳ್ಳವರು ದುಂದುವೆಚ್ಚ ಮಾಡಿ ಹುಟ್ಟು ಹಬ್ಬ ಆಚರಿಸಿಕೊಳ್ಳುವುದರ ಬದಲು ನಮ್ಮ ಸುತ್ತಾಮುತ್ತ ಇರುವ ವಿಶೇಷ ಚೇತನ ಮಕ್ಕಳ ಜೊತೆ ಆಚರಿಸಿಕೊಂಡರೇ ಹುಟ್ಟು ಹಬ್ಬ ಅರ್ಥಪೂರ್ಣವಾಗಲಿದೆ ಎಂದು ಕೆಪಿಸಿಸಿ ಅಸಂಘಟಿತ ಕಾರ್ಮಿಕ ವಿಭಾಗದ ರಾಜ್ಯ ಕಾರ್ಯದರ್ಶಿ
ಶ್ರೀಪಾಲ್ ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀರಾಂಪುರ ನಿರ್ಮಲ ಶಾಲೆ ಪಕ್ಕದಲ್ಲಿರುವ
ಶ್ರೀ ನವಚೇತನ ಬಸವೇಶ್ವರ ಟ್ರಸ್ಟ್ ಸ್ಥಾಪಿಸಿದ ಮರಿಗೌಡ ಅವರು ಕಳೆದ 5 ವರ್ಷಗಳಿಂದ ವಿಶೇಷ ಚೇತನ ಮಕ್ಕಳನ್ನ ಸಾಕಿ ಸಲುಹಿಸುತ್ತಿದ್ದಾರೆ.ಶ್ರೀಪಾಲ್ ರವರು ಮಕ್ಕಳ ಜೊತೆ ಕೇಕ್ ಕತ್ತರಿಸುವ ಮೂಲಕ ಹುಟ್ಟು ಹಬ್ಬ ಆಚರಿಸಿಕೊಂಡರು.ಶ್ರೀಪಾಲ್ ರವರು ಮಕ್ಕಳಿಗೆ ಕೇಕ್ ತಿನ್ನಿಸಿ ನಂತರ ಊಟ ಬಡಿಸುವ ಮೂಲಕ ಖುಷಿ ಪಟ್ಟರು.ನಂತರ ಮಾತನಾಡಿದ ಅವರು ಶ್ರೀ ನವಚೇತನ ಟ್ರಸ್ಟ್ ನನ್ನ ಹುಟ್ಟು ಹಬ್ಬ ಆಚರಿಸಿಕೊಂಡಿದ್ದೇನೆ. ಈ ಟ್ರಸ್ಟ್ ಆರಂಭದಲ್ಲಿ 10 ಮಕ್ಕಳಿದ್ದರು.ಈಗ
48 ವಿಶೇಷ ಚೇತನರ ಮಕ್ಕಳಿದ್ದಾರೆ ,10 ಜನ ಸಿಬ್ಬಂದಿಗಳು ಮಕ್ಕಳನ್ನ ನೋಡಿಕೊಳ್ಳುತ್ತಿದ್ದಾರೆ.ಸರ್ಕಾರಕ್ಕೆ ನಾನು ಕೂಡ ಮನವಿ ಮಾಡುತ್ತಿದ್ದೇನೆ ಎಂದರು.
ಮರಿಗೌಡರು ಮಾತನಾಡಿ ನಾನು ಗಾರೆಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದೇ.ನನ್ನ ಮಗನು ಕೂಡ ವಿಶೇಷ ಚೇತನರಾಗಿದ್ದಾರೆ ನನ್ನ ಮಗನಂತೆ ಸಾಕಷ್ಟು ವಿಶೇಷ ಚೇತನರು ಬಡ ಕುಟುಂಬದಲ್ಲಿ ಹುಟ್ಟಿದ್ದಾರೆ.ಅವರನ್ನು ನೋಡಿಕೊಳ್ಳಲಾಗದೇ ಮನೆಯಲ್ಲಿ ಕಾಲಿಗೆ ಹಗ್ಗ ಕಟ್ಟಿ ತಂದೆ ತಾಯಿ ಕೆಲಸಕ್ಕೆ ಹೋಗುತ್ತಿದ್ದನು ನೋಡಿ ನಾನು ಟ್ರಸ್ಟ್ ಆರಂಭಿಸಿದೆ.
ವರ್ಷ ವರ್ಷ ಟ್ರಸ್ಟ್ ನಡೆಸುವುದು ಕಷ್ಟವಾಗಿದೆ.ಈಗಾಗಲೇ
ಸರ್ಕಾರಕ್ಕೆ ಸಿಎ ನಿವಾಸ ನೀಡುವಂತೆ ಮನವಿ ಮಾಡಿದ್ದೇವೆ ಯಾವುದೇ ಪ್ರಯೋಜನ ಆಗಲಿಲ್ಲ. ವಿಶೇಷ ಚೇತನ ಮಕ್ಕಳಗಾಗಿ ನನ್ನ ಬಳಿ ಇದ್ದ ಒಂದು ಮನೆ ಕೂಡ ಮಾರಾಟ ಮಾಡಿ ಟ್ರಸ್ಟ್ ನಡೆಸುತ್ತಿದ್ದೇನೆ. ದಯಮಾಡಿ ಸರ್ಕಾರ ಇತ್ತ ಗಮನ ಹರಿಸಿ ಮಕ್ಕಳಿಗೆ ಪ್ರತಿ ದಿನದ ಊಟ ಹಾಗೂ ಸಿಎ ನಿವೇಶನ ನೀಡುವಂತೆ ಮತ್ತೊಮ್ಮೆ ಕೋರುತ್ತೇನೆ ಎಂದರು
ವರದಿ :ನಂದಿನಿ ಮೈಸೂರು
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link