ಸಾಗರ : ಕರ್ನಾಟಕ ರಾಜ್ಯ ಇತಿಹಾಸ ಪ್ರಸಿದ್ದ ಶ್ರೀಮಾರಿಕಾಂಬ ಜಾತ್ರೆ ವಿದ್ಯುಕ್ತ ಆರಂಭ 7-02-2023ರ ಮಂಗಳವಾರ ಎಂದು, ಮಾರಿಕಾಂಬ ವ್ಯವಸ್ಥಾಪಕ ಸಮಿತಿ ಅಧ್ಯಕ್ಷ ಕೆ.ಎನ್. ನಾಗೇಂದ್ರರವರು ತಿಳಿಸಿದ್ದಾರೆ.
ಇಂದು (ದಿನಾಂಕ ; 19-08-2022) ಶುಕ್ರವಾರ ಬೆಳಿಗ್ಗೆ ಸಾಗರದ ಗಣಪತಿ ದೇವಸ್ಥಾನದಲ್ಲಿ ಮಾರಿಕಾಂಬಾ ದೇವಿಯ ಜಾತ್ರೆಗೆ ಮುಹೂರ್ತ ಕಟ್ಡಿಸುವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಮಾರಿಕಾಂಬ ವ್ಯವಸ್ಥಾಪಕ ಸಮಿತಿಯ ಅಧ್ಯಕ್ಷ ಕೆ.ಎನ್. ನಾಗೇಂದ್ರ, ಪ್ರ. ಕಾರ್ಯದರ್ಶಿ ಗಿರಿಧರರಾವ್, ನಗರಸಭಾ ಸದಸ್ಯ ಹಾಗೂ ಗೋಪುರ ಸಮಿತಿ ಸಂಚಾಲಕ ಬಿ. ಪುರುಷೋತ್ತಮ, ಅರುಣ, ಕೆ.ಸಿ. ನವೀನ್, ತಾರಾಮೂರ್ತಿ, ಜಂಬಿಗೆ ಲೋಕೇಶ್, ಮಂಜುನಾಥ ಜೇಡಿಕುಣಿ, ಜಯರಾಮ ಅರಮನೆಕೇರಿ ನಾರಾಯಣ, ವಿನಾಯಕ ಗುಡಿಗಾರ್, ಅರ್ಚಕ ರವಿ, ಚಂದ್ರು ಇನ್ನಿತರರು ಈ ಸಂದರ್ಭದಲ್ಲಿ ಹಾಜರಿದ್ದರು.
ಇನ್ನೂ ಮುಂದೆ ಮಾರಿಕಾಂಬೆಯ ಎರಡು ದೇವಾಲಯಗಳಲ್ಲಿ ಪೂಜಾ ವಿಧಿ ವಿಧಾನ ನಡೆಯಲಿದೆ ಎಂದರು.
ವರದಿ: ಸಿಂಚನಾ ಜಯಂತ್ ಬಲೇಗರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.