ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಕರ್ನಾಟಕದ ಚಾಮರಾಜನಗರದಿಂದಲೇ ಉದ್ಯಮ ಪ್ರಾರಂಭಿಸುತ್ತಿದ್ದಾರೆ.
ಶ್ರೀಲಂಕಾದ ಖ್ಯಾತ ಕ್ರಿಕೆಟಿಗ ಸ್ಪಿನ್ ದಿಗ್ಗಜ ಮುತ್ತಯ್ಯ ಮುರಳೀಧರನ್ ಕೈಗಾರಿಕ್ಕೊಧ್ಯಮಕ್ಕೆ ಕಾಲಿರಿಸಿದ್ದು ಕರ್ನಾಟಕದ ಚಾಮರಾಜನಗರದಿಂದಲೇ ಉದ್ಯಮ ಪ್ರಾರಂಭಿಸುತ್ತಿದ್ದಾರೆ.
ಚಾಮರಾಜನಗರ ಜಿಲ್ಲೆ ಬದನಗುಪ್ಪೆ ಕೆಲ್ಲಂಬಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತಂಪು ಪಾನೀಯ ಕಾರ್ಖಾನೆಯನ್ನು ಶುರುಮಾಡಿದ್ದು 46 ಎಕರೆ ಜಮೀನನ್ನ ಖರೀದಿ ಮಾಡಿದ್ದಾರೆ, ಸರ್ಕಾರದಿಂದ ಅನುಮತಿ ಪಡೆದು ಅಗತ್ಯ ದಾಖಲೆಗಳನ್ನು ಒದಗಿಸಿ ಕಾರ್ಖಾನೆ ಕಾಮಗಾರಿ ಆರಂಭಿಸಿದ್ದಾರೆ. ಮುತ್ತಯ್ಯ ಬೆವರೇಜಸ್ ಹೆಸರಿನಲ್ಲಿ ಸಾಫ್ಟ್ ಡ್ರಿಂಕ್ಸ್ , ಕೂಲ್ ಡ್ರಿಂಕ್ಸ್ , ಉತ್ತಮ ಗುಣಮಟ್ಟದ ಹಾಲನ್ನು ಕ್ಯಾನ್ ಗಳಲ್ಲಿ ಮಾರಾಟ ಮಾಡಲು ಮುಂದಾಗಿದ್ದು ಸಾಫ್ಟ್ ಡ್ರಿಂಕ್ಸ್ ಆಲ್ಕೋಹಾಲಿಕ್ ಪಾನೀಯಗಳು ತಯಾರಾಗಲಿವೆ ಎನ್ನಲಾಗುತ್ತಿದೆ.
ಮೊದಲ ಹಂತವಾಗಿ 250 ಕೋಟಿಗೂ ಹೆಚ್ಚು ಹಣವನ್ನು ಚಾಮರಾಜನಗರದಲ್ಲಿ ಹೂಡಿಕೆ ಮಾಡಲಾಗ್ತಿದ್ದು ಸ್ಥಳೀಯರಿಗೆ ಕೆಲಸ ಸಿಗಲಿದೆ , ಶ್ರೀಲಂಕಾ ಮೂಲದ ಕ್ರಿಕೆಟಿಗ ಕರ್ನಾಟಕದಲ್ಲಿ ಕಾರ್ಖಾನೆ ಆರಂಭಿಸಿರೋದು ಮತ್ತಷ್ಟು ಉದ್ದಿಮೆದಾರರು ರಾಜ್ಯದತ್ತ ಮುಖಮಾಡುವುದಕ್ಕೆ ಸಹಾಯಕವಾಗಲಿದೆ ಎನ್ನಲಾಗುತ್ತಿದೆ.
ವರದಿ:ನಂದಿನಿ ಮೈಸೂರು
ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 , 8182350116.