
ಸಾಗರ ನಗರಸಭೆಯ ದುರಾಡಳಿತಕ್ಕೆ ಮತ್ತೊಂದು ಸಾಕ್ಷಿ – ಖಾತೆ ಬದಲಾವಣೆಗಾಗಿ ಸತಾಯಿಸುತ್ತಿರುವ ಸಾಗರ ನಗರಸಭೆ – ಕಣ್ಣಿದ್ದೂ ಜಾಣ ಕುರುಡುತನದತ್ತ ಬೇಜವಾಬ್ದಾರಿ ಪೌರಾಯುಕ್ತ
ಸಾಗರ :- ಶಿವಮೊಗ್ಗ ಜಿಲ್ಲೆ ಸಾಗರದ ನಗರಸಭೆ ಅವ್ಯವಹಾರ ಅಕ್ರಮ ಬಗೆದಷ್ಟು ಬಯಲಿಗೆ, ಹೇಳುವರ್ಯಾರು ಕೇಳುವರ್ಯಾರು ಇಲ್ಲದಂತಾದ ಸಾಗರ ನಗರಸಭೆ
ದಿನಾಂಕ 09/02/2023 ರಂದು ಸಲ್ಮಾ ಕೋಂ ನೌಷದ್ ಭಾಷಾ ಎಂಬುವವರು ಕ್ರಯ ಮಾಡಿದ ಸ್ವತ್ತು ಖಾತೆ ಬದಲಾವಣೆಗಾಗಿ ಸಮುಚಿತ ಮಾರ್ಗದಲ್ಲಿ ಅರ್ಜಿಗಳನ್ನು ಸಲ್ಲಿಸಿ, ಸುಮಾರು 03 ತಿಂಗಳು ಕಳೆಯುತ್ತಾ ಬಂದರೂ ಖಾತೆ ಬದಲಾವಣೆ ಮಾಡಿಕೊಡಲು ಮೀನಾಮೇಷ ಮಾಡುತ್ತಿರುವುದಾಗಿ ನಗರಸಭೆಯ ವಿರುದ್ಧ ಹರಿಹಾಯುತ್ತಿದ್ದಾರೆ, ಅಲ್ಲದೇ ಕುರುಡು ಕಾಂಚನ ಬೇಡಿಕೆ ನೀಡುತ್ತಿರುವುದಾಗಿಯೂ ಸಹ ನೇರ ಗಂಭೀರ ಆರೋಪ ಮಾಡುತ್ತಿರುವುದು ಅಲ್ಲದೇ ಸ್ಥಿರಾಸ್ಥಿ ಕೊಳ್ಳಲು ತನ್ನ ಕುಟುಂಬದ ಬಂಗಾರವನ್ನೂ ಬ್ಯಾಂಕ್ ನಲ್ಲಿ ಒತ್ತೆಯಿಟ್ಟಿರುವುದಾಗಿ ತಿಳಿಸಿದ್ದೂ, ಒತ್ತೆಯಿಟ್ಟ ಬಂಗಾರವೂ ಹರಾಜು ಆಗುವ ಬಗ್ಗೆ ನೋಟೀಸ್ ಕೂಡ ಬಂದಿದ್ದೂ, ನಾವು ಖರೀದಿಸಿದ ಸ್ಥಿರಾಸ್ಥಿಯನ್ನೂ ಬ್ಯಾಂಕ್ ನಲ್ಲಿ ಅಡಮಾನ ಸಾಲ ಮಾಡಿ ಒತ್ತೆಯಿಟ್ಟ ಬಂಗಾರ ಬಿಡಿಸಲು ತೀರಾ ಹಣದ ಅವಶ್ಯಕತೆ ಯಿರುವುದಾಗಿ ಕೂಡಲೇ ಖಾತೆ ಏರಿಸಿ ಕೊಡುವಂತೆ ಸಾಗರ ನಗರಸಭೆಗೆ ಓಡಾಡಿದರೂ ಕಾನೂನು ಪ್ರಕಾರ ಖಾತೆ ಏರಿಸದೇ ಸತಾಯಿಸುತ್ತಿದ್ದಾರೆ. ನಗರಸಭೆಗೆ ಓಡಾಡಿ ಚಪ್ಪಲಿ ಸವೆಯುತ್ತಿದೆಯೋ ಹೊರತು ನಾನು ಕಷ್ಟ ಪಟ್ಟು ಕ್ರಯ ಮಾಡಿದ ಸ್ಥಿರಾಸ್ಥಿಯನ್ನೂ ಖಾತೆ ಬದಲಾವಣೆ ಮಾಡಿಲ್ಲ ಎಂದು ನೊಂದ ಮಹಿಳೆ ತಿಳಿಸಿದ್ದಾಳೆ.
ಎಲ್ಲಿಗೆ ಬಂತು….? ಯಾರಿಗೆ ಬಂತು…..? ಯಾತಕ್ಕಾಗಿ ಬಂತು……?! 1947 ರ ಸ್ವಾತಂತ್ರ್ಯ….. ಗೊಂದಲದಲ್ಲಿ ನೊಂದ ಮಹಿಳೆ
ಕಣ್ಣು ಬಿಟ್ಟು ನೊಂದ ಮಹಿಳೆಗೆ ನ್ಯಾಯ ಒದಗಿಸುವವರೇ ಸಾಗರ ನಗರಸಭೆ ಪೌರಾಯುಕ್ತ ✒️ಓಂಕಾರ ಎಸ್. ವಿ. ತಾಳಗುಪ್ಪ

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.