
ಶಿವಮೊಗ್ಗ : ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ.
ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನ ಫೆಬ್ರವರಿ ೧ ಮತ್ತು ೨ ರಂದು ಶಿವಮೊಗ್ಗ ಗೋಪಿಶೆಟ್ಟಿಕೊಪ್ಪದ ಚಾಲುಕ್ಯ ನಗರದಲ್ಲಿ ನಿರ್ಮಾಣ ವಾಗುತ್ತಿರುವ ಸಾಹಿತ್ಯ ಗ್ರಾಮದಲ್ಲಿ ೧೭ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಲಿದೆ.
ಸಮ್ಮೇಳನದ ಷಮಿಯಾನ ಹಾಕುವ ಕೆಲಸ ಶನಿವಾರ ಬೆಳಿಗ್ಗೆ ಆರಂಭಿಸಿದ್ದಾರೆ. ಪುಸ್ತಕ ಮಳಿಗೆ, ವಾಣಿಜ್ಯ ಮಳಿಗೆ ಸಿದ್ದಪಡಿಸುವುದು. ಬೆಳಗಾವಿ ಸೇರಿದಂತೆ ಗಡಿ ಸಮಸ್ಯೆ ಕುರಿತು ದಾಖಲೆಗಳ, ಚಿತ್ರ ಪ್ರದರ್ಶನ ಏರ್ಪಡಿಸಿ ಆಸಕ್ತರಿಗೆ ಮಾಹಿತಿ ಒದಗಿಸಲು ಬೆಳಗಾವಿಯಿಂದ ಒಂದು ತಂಡ ಬರಲಿದೆ. ಸಮ್ಮೇಳನ ಎಂದರೆ ಬಹುಮುಖಿ ಜ್ಞಾನ ಪ್ರಸಾರದ ಮಹತ್ವದ ಸ್ಥಾನವಾಗುವಂತೆ ಶ್ರಮಿಸಿದ್ದೇವೆ.
ಸಾಹಿತ್ಯ, ಸಾಂಸ್ಕೃತಿಕ ಆಸಕ್ತ ಮನಸ್ಸುಗಳಿಗೆ ಸ್ವಾಗತ. ಪ್ರತಿನಿಧಿಗಳಾಗಿ ಭಾಗವಹಿಸಲು ನಮ್ರವಾಗಿ ಕೋರುತ್ತೇವೆ.
ವರದಿ: ಸಿಂಚನ ಕೆ

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.