
ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯಲ್ಲಿದ್ದಾರೆ 14,58,680 ಮತದಾರರು: ಜಿಲ್ಲಾಧಿಕಾರಿ ಡಾ.ಸೆಲ್ವಮಣಿ.
ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ನೀತಿ ಸಂಹಿತೆಯನ್ನು ಜಾರಿ ಮಾಡಲಾಗಿದೆ. ಅಲ್ಲದೆ, ಜಿಲ್ಲೆಯಲ್ಲಿ ಒಟ್ಟು 14,58,680 ಮತದಾರರು ನೋಂದಾಯಿಸಿಕೊಂಡಿದ್ದು, 722080 ಪುರುಷ, 736574 ಮಹಿಳೆ, 14773 ವಿಶೇಷಚೇತನರು ಹಾಗೂ 26 ಇತರೆ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿ ಡಾ.ಸೆಲ್ವಮಣಿ ಆರ್. ಮಾಹಿತಿ
ನೀಡಿದರು.
ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 13-04-2023ರಂದು ಚುನಾವಣಾ ಅಧಿಸೂಚನೆ, 20-04-2023ರಂದು ಉಮೇದುವಾರಿಕೆ ಸಲ್ಲಿಕೆಗೆ ಕಡೆಯ ದಿನವಾಗಿದೆ. 21-04-2023 ಉಮೇದುವಾರಿಕೆ ಪರಿಶೀಲನೆ ದಿನವಾಗಿದ್ದು, 24-04-2023 ಉಮೇದುವಾರಿಕೆ ಹಿಂಪಡೆಯಲು ಕಡೆಯ ದಿನವಾಗಿದೆ. ಮೇ 10ರಂದು ಮತದಾನ ನಡೆದರೆ, ಮೇ 13ರಂದು ಮತ ಎಣಿಕೆ ನಡೆಯಲಿದೆ ಎಂದು ತಿಳಿಸಿದರು.
ಮತಗಟ್ಟೆಗಳು
ಶಿವಮೊಗ್ಗ ಗ್ರಾಮಾಂತರ -111 ರಲ್ಲಿ 247 ಮತಗಟ್ಟೆಗಳು, ಭದ್ರಾವತಿ-112 ರಲ್ಲಿ 253 ಮತಗಟ್ಟೆಗಳು, ಶಿವಮೊಗ್ಗ-113 ರಲ್ಲಿ 282 ಮತಗಟ್ಟೆಗಳು, ತೀರ್ಥಹಳ್ಳಿ-114 ರಲ್ಲಿ 258, ಶಿಕಾರಿಪುರ-115 ರಲ್ಲಿ 232, ಸೊರಬ-116 ರಲ್ಲಿ 239, ಸಾಗರ-117 ರಲ್ಲಿ 264 ಒಟ್ಟು 1775 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಚುನಾವಣಾಧಿಕಾರಿಗಳು
ಶಿವಮೊಗ್ಗ ಗ್ರಾಮಾಂತರ -111 ರ ಚುನಾವಣಾಧಿಕಾರಿ ಕೊಟ್ರೇಶ್ ಎಚ್, ಸೂಡಾ ಆಯುಕ್ತರು, ಶಿವಮೊಗ್ಗ ಮೊ.ಸಂ: 9611079416. ಭದ್ರಾವತಿ-112 ರವಿಚಂದ್ರ ನಾಯ್ಕ್ ಶಿವಮೊಗ್ಗ ಉಪವಿಭಾಗಾಧಿಕಾರಿ ಮೊ.ಸಂ: 9916821123. ಶಿವಮೊಗ್ಗ-113 ಶಿವಾನಂದ ಪಿ ಸಾಗರ, ಉಪ ಆಯುಕ್ತರು, ಮಹಾನಗರಪಾಲಿಕೆ ಶಿವಮೊಗ್ಗ ಮೊ.ಸಂ: 9480241088. ತೀರ್ಥಹಳ್ಳಿ-114 ಮಲ್ಲಪ್ಪ ಕೆ ತೊದಲಬಾಗಿ, ಉಪ ಕಾರ್ಯದರ್ಶಿ-1, ಜಿ.ಪಂ ಶಿವಮೊಗ್ಗ ಮೊ.ಸಂ: 9480876010. ಶಿಕಾರಿಪುರ-115 ನಾಗೇಶ್ ಎ ರಾಯ್ಕರ್, ಉಪ ಕಾರ್ಯದರ್ಶಿ-2, ಜಿ.ಪಂ, ಶಿವಮೊಗ್ಗ ಮೊ.ಸಂ: 9480876001. ಸೊರಬ-116 ಪ್ರವೀಣ್ ಜೈನ್, ಜಿಲ್ಲಾ ತರಬೇತಿ ಸಂಸ್ಥೆಯ ಪ್ರಾಂಶುಪಾಲರು, ಶಿವಮೊಗ್ಗ ಮೊ.ಸಂ: 7353324771. ಸಾಗರ-117 ಪಲ್ಲವಿ ಸಾಥೇನಹಳ್ಳಿ, ಸಾಗರ ಉಪವಿಭಾಗಾಧಿಕಾರಿ, ಮೊ.ಸಂ: 9480760602.

ವಿವಿಧ ತಂಡಗಳ ರಚನೆ
ಒಟ್ಟು ಸೆಕ್ಟರ್ ಆಫೀಸರ್-166, ಅಸಿಸ್ಟೆಂಟ್ ಎಕ್ಸ್‌ಪೆಂಡಿಚರ್ ಅಬ್ಸರ್ವರ್-07, ಅಕೌಂಟಿಂಗ್ ಟೀಂ-07, ಫ್ಲೈಯಿಂಗ್ ಸ್ಕ್ವಾಡ್-44, ಸ್ಟಾಟಿಕ್ ಸರ್ವೆಲೆನ್ಸ್ ಟೀಂ-36, ಎಂಸಿಸಿ-07, ವಿಡಿಯೋ ಸರ್ವೆಲೆನ್ಸ್ ಟೀಂ-44, ವಿಡಿಯೋ ವ್ಯೂವಿಂಗ್ ಟೀಂ-07.
ನೋಡಲ್ ಅಧಿಕಾರಿಗಳು
ಕಾನೂನು ಮತ್ತು ಸುವ್ಯವಸ್ಥೆ, ವಿಎಂ ಮತ್ತು ಸುಭದ್ರತೆ ಯೋಜನೆಗೆ ನೋಡಲ್ ಅಧಿಕಾರಿ ಜಿ.ಕೆ.ಮಿಥನ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಮೊ.ಸಂ: 9480803301. ಸ್ವೀಪ್(ಎಸ್‍ವಿಇಇಪಿ) ಮತ್ತು ಎಂಸಿಸಿ ಗೆ ನೋಡಲ್ ಅಧಿಕಾರಿ ಎನ್.ಡಿ.ಪ್ರಕಾಶ್, ಸಿಇಒ, ಜಿಲ್ಲಾ ಪಂಚಾಯಿತಿ ಶಿವಮೊಗ್ಗ ಮೊ.ಸಂ: 9480876000. ಸಾಮಗ್ರಿ ನಿರ್ವಹಣೆಗೆ ಚಿದಾನಂದ ವಟಾರೆ, ಎಚಿಡಿ, ಸ್ಮಾರ್ಟ್‍ಸಿಟಿ, ಶಿವಮೊಗ್ಗ ಮೊ.ಸಂ: 9591419817. ತರಬೇತಿ ನಿರ್ವಹಣೆಗೆ ಶಿವಕುಮಾರ್ ಕೆ.ಎಚ್. ಸಿಎಒ, ಸಿಮ್ಸ್, ಶಿವಮೊಗ್ಗ ಮೊ.ಸಂ: 9448357490 ಹಾಗೂ ಜಿ.ಸಿ.ಪೂರ್ಣಿಮಾ, ಜಂಟಿ ನಿರ್ದೇಶಕಿ ಕೃಷಿ ಇಲಾಖೆ ಮೊ.ಸಂ: 8277932600. ವೆಚ್ಚ ಮೇಲ್ವಿಚಾರಣೆಗೆ ಜಿ.ಪ್ರಶಾಂತ ನಾಯಕ್, ಮುಖ್ಯ ಲೆಕ್ಕಾಧಿಕಾರಿ ಜಿ.ಪಂ ಶಿವಮೊಗ್ಗ ಮೊ.ಸಂ: 9480876003. ಇವಿಎಂ ನಿರ್ವಹಣೆಗೆ ನಾರಾಯಣಸ್ವಾಮಿ, ಉಪನಿರ್ದೇಶಕರು ಭೂ ದಾಖಲೆಗಳು, ಶಿವಮೊಗ್ಗ ಮೊ.ಸಂ: 9448895836. ದೂರು ಪರಿಹಾರ ಮತ್ತು ವೋಟರ್ ಹೆಲ್ಪ್‌ಲೈನ್‍ಗೆ ಅವಿನ್ ಆರ್. ಉಪನಿರ್ದೇಶಕರು, ಆಹಾರ ಇಲಾಖೆ ಶಿವಮೊಗ್ಗ, ಮೊ.ಸಂ: 9886907455 .ಮ್ಯಾನ್‍ಪವರ್ ಮ್ಯಾನೇಜ್‍ಮೆಂಟ್ ನೋಡಲ್ ಅಧಿಕಾರಿ ಮಹೇಶ್ವರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ, ಶಿವಮೊಗ್ಗ ಮೊ.ಸಂ: 9485963165, ಎನ್.ತಾರಾ, ಸಹಾಯಕ ಯೋಜನಾಧಿಕಾರಿ, ಜಿ.ಪಂ ಶಿವಮೊಗ್ಗ ಮೊ.ಸಂ: 9480876005. ಸಾರಿಗೆ ನಿರ್ವಹಣೆಗೆ ಗಂಗಾಧರ ಜಿ.ಪಿ, ಪ್ರಾದೇಶಿಕ ಸಾರಿಗೆ ಅದಿಕಾರಿ, ಶಿವಮೊಗ್ಗ ಮೊ.ಸಂ: 944864014. ಗಣಕೀಕರಣ, ಸೈಬರ್ ಭದ್ರತೆ & ಐಟಿಗೆ ವೆಂಕಟೇಶ್ ಬೆಣಕಟ್ಟಿ, ಡಿಸ್ಟ್ರಿಕ್ಟ್ ಇನ್ಫಾರ್ಮ್ಯಾಟಿಕ್ಸ್ ಅಧಿಕಾರಿ ಮೊ.ಸಂ: 9242413050. ಬ್ಯಾಲಟ್ ಪೇಪರ್, ಪೋಸ್ಟಲ್ ಬ್ಯಾಲಟ್, ಇಟಿಪಿಬಿಎಸ್‍ಗೆ ಕರಿಭೀಮಣ್ಣನವರ್, ಪಿಡಿ, ಡಿಯುಡಿಸಿ ಶಿವಮೊಗ್ಗ ಮೊ.ಸಂ: 9980125449. ಮೀಡಿಯಾ ನೋಡಲ್ ಅಧಿಕಾರಿ ಡಿ.ಟಿ.ಮಂಜುನಾಥ, ಉಪ ನಿರ್ದೇಶಕರು, ಕೃಷಿ ಇಲಾಖೆ ಮೊ.ಸಂ: 8277932601. ಕಮ್ಯುನಿಕೇಷನ್ ಪ್ಲಾನಿಂಗ್‍ಗೆ ಎಸ್.ಜಿ. ಶ್ರೀನಿವಾಸ, ಉಪ ನಿರ್ದೇಶಕರು, ಸಮಾಜ ಕಲ್ಯಾಣ ಇಲಾಖೆ, ಮೊ.ಸಂ: 9480843044. ಎಲೆಕ್ಟೊರೊಲ್ ರೋಲ್ ನೋಡಲ್ ಅಧಿಕಾರಿ ರವಿಚಂದ್ರ ನಾಯ್ಕ್, ಉಪವಿಭಾಗಾಧಿಕಾರಿ, ಶಿವಮೊಗ್ಗ ಮೊ.ಸಂ: 9916821123. ಅಬ್ಸರ್ವರ್ಸ್ ನೋಡಲ್ ಅಧಿಕಾರಿ ಸಂಪತ್ ಕುಮಾರ್ ಪಿಂಗಳೆ ಎಂ, ಕಾರ್ಯಪಾಲಕ ಅಭಿಯಂತರ ಪಿಡಬ್ಲ್ಯುಡಿ ಮೊ.ಸಂ: 9986843601.
ಕಂಟ್ರೋಲ್ ರೂಂ ವಿವರ
ಜಿಲ್ಲೆಯಲ್ಲಿ 1950 ಸಹಾಯವಾಣಿಯೊಂದಿಗೆ ಶಿವಮೊಗ್ಗ ಗ್ರಾಮಾಂತರ-111 ದೂ.ಸಂ: 08182-200508. ಭದ್ರಾವತಿ-112 08282-263466, ಶಿವಮೊಗ್ಗ-113 08182-277906 ತೀರ್ಥಹಳ್ಳಿ-114 ದೂ.ಸಂ: 08181-200925. ಶಿಕಾರಿಪುರ-115 ದೂ.ಸಂ: 08187-222239. ಸೊರಬ-116 ದೂ.ಸಂ: 08184-272241., ಸಾಗರ-117 ದೂ.ಸಂ: 08183-226601.
ಜಿಲ್ಲೆಯಲ್ಲಿ 2023 ರ ವಿಧಾನ ಸಭಾ ಚುನಾವಣೆಯನ್ನು ವಿದ್ಯುನ್ಮಾನ ಮತ ಯಂತ್ರ ಬಳಸಿ ನಿರ್ವಹಿಸಲಾಗುತ್ತಿದ್ದು, ಜಿಲ್ಲೆಯಲ್ಲಿ 3350 ಬ್ಯಾಲೆಟ್ ಯೂನಿಟ್‍ಗಳು, 2352 ಕಂಟ್ರೋಲ್ ಯುನಿಟ್ ಹಾಗೂ 2417 ವಿವಿ ಪ್ಯಾಟ್ ಲಭ್ಯವಿರುತ್ತದೆ. ಜಿಲ್ಲೆಯಲ್ಲಿ ಚುನಾವಣಾ ದಿನದಂದು ಚುನಾವಣಾ ಕಾರ್ಯ ನಿರ್ವಹಿಸಲು 8520 ಅಧಿಕಾರಿ/ಸಿಬ್ಬಂದಿಗಳ ಅವಶ್ಯಕತೆ ಇದ್ದು ಈಗಾಗಲೇ 10700 ಸಿಬ್ಬಂದಿಗಳ ಮಾಹಿತಿ ಸಂಗ್ರಹಿಸಲಾಗಿದೆ. ಉಮೇದುವಾರಿಕೆ ಸಲ್ಲಿಕೆಯ ಅವಧಿಯವರೆಗೆ ಅಂದರೆ ಏಪ್ರಿಲ್ 20 ರವರೆಗೆ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು ಹಾಗೂ ನಮೂನೆ 8 ರಲ್ಲಿ ತಿದ್ದುಪಡಿಗೆ ಅವಕಾಶವಿರುತ್ತದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, “ಜಿಲ್ಲೆಯಲ್ಲಿ 36 ಕಡೆ ಚೆಕ್‍ಪೋಸ್ಟ್‌ಗಳನ್ನು ಸ್ಥಾಪಿಸಿದ್ದು, 7 ಚೆಕ್‍ಪೋಸ್ಟ್ ಈಗಾಗಲೇ ಕಾರ್ಯ ನಿರ್ವಹಿಸುತ್ತಿವೆ. ಚುನಾವಣೆಗೆ 6 ಸಿಆರ್‍ಪಿಎಫ್ ತಂಡಗಳು ಬರಲಿವೆ. ಸ್ಟ್ರಾಂಗ್ ರೂಂ, ಮತ ಎಣಿಕೆ ಕೇಂದ್ರಗಳಿಗೆ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿದೆ. ಕಳೆದ ತಿಂಗಳಿಂದ ಜಿಲ್ಲೆಯಲ್ಲಿ 55 ಜನರಿಗೆ ಗಡಿಪಾರು ಆದೇಶ ಮತ್ತು ಕಳೆದ 5-6 ತಿಂಗಳಿಂದ 6 ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಚುನಾವಣೆಗೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ವಹಿಸಲಾಗಿದೆ” ಎಂದರು. ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಎಸ್.ಎಸ್.ಬಿರಾದರ್ ಹಾಜರಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655.