ಕೊಪ್ಪಳ: ಮನೆಗಳ ಮುಂಭಾಗ, ರಸ್ತೆಯಲ್ಲಿ ಹರಿಯುತ್ತಿರುವ ಚರಂಡಿ ನೀರು, ಕೊಳಚೆ ನೀರನ್ನು ತುಳಿದು ತಿರುಗಾಡುತ್ತಿರುವ ನಿವಾಸಿಗಳು, ಗುಂಡಿ ಬಿದ್ದ ಸಂಪರ್ಕ ರಸ್ತೆ.
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ಮೆಣೇದಾಳ ಗ್ರಾಮ ಪಂಚಾಯಿತಿಗೆ ಸೇರಿದ ಹಿರೇಮುಕರ್ತ್ನಾಳ ಗ್ರಾಮದ ಸ್ಥಿತಿ ಇದು .
ಗ್ರಾಮದ ಯಾವ ಭಾಗದಲ್ಲಿಯೂ ಚರಂಡಿ ಹಾಗೂ ರಸ್ತೆಯ ವ್ಯವಸ್ಥೆ ಉತ್ತಮವಾಗಿಲ್ಲ. ಸಂಬಂಧಪಟ್ಟ ಮೆಣೇದಾಳ ಗ್ರಾಮ ಪಂಚಿಯತಿ ಅಭಿವೃದ್ದಿ ಅಧಿಕಾರಿಗಳಿಗೆ ಮತ್ತು ಜನಪ್ರತಿನಿಧಿಗಳ ಗಮನಕ್ಕೆ ತಂದರು ಯಾವುದೇ ರೀತಿಯ ಪ್ರಯೋಜನವಿಲ್ಲ ಗ್ರಾಮಕ್ಕೆ ಭೇಟಿ ನೀಡಿದಾಗ ಸಮಸ್ಯೆ ಬಗೆಹರಿಸುವುದಾಗಿ ಭರವಸೆ ನೀಡುತ್ತಾರೆಯೇ
ವಿನಾ, ಸಮಸ್ಯೆ ಬಗೆಹರಿಸಲು ಮುಂದಾಗುತ್ತಿಲ್ಲ,
ಗ್ರಾಮಸ್ತರು ಮಲಿನಗೊಂಡ ನೀರು ಕುಡಿಯಬೇಕಾಗಿದೆ ಕುಡಿಯುವ ನೀರಿನ ತೊಟ್ಟೆಯನ್ನ ಸ್ವಚ್ಛಗೋಳಿಸುತ್ತಿಲ್ಲ.
ಗ್ರಾಮದಲ್ಲಿ. ಒಂದು ಓಣಿಯಿಂದ ಯಿಂದ ಮತ್ತೊಂದು ಓಣಿಗೆ ಸಂಪರ್ಕ ಕಲ್ಪಿಸುವಂತಹ ಚರಂಡಿ ನಿರ್ಮಿಸಿಲ್ಲ. ಇದರ ಪರಿಣಾಮವಾಗಿ ಮನೆಗಳ ಮುಂಭಾಗ ಕೋಳಚೆ ನೀರು ಹರಿಯುತ್ತಿದೆ. ನಿವಾಸಿಗಳು ಅನಿವಾರ್ಯವಾಗಿ ಕೊಳಚೆ ನೀರನ್ನು ತುಳಿದು ಮನೆಗಳ ಹೊಸ್ತಿಲು ದಾಟಬೇಕಾಗಿದೆ.
ಮನೆಗಳ ಮುಂಭಾಗ ನಿಂತಿರುವ ಕೊಳಚೆ ನೀರು ದುರ್ವಾಸನೆ ಬೀರುತ್ತಿದ್ದು, ನಿವಾಸಿಗಳಿಗೆ ಮಲೇರಿಯಾ,ಕಾಲರಾ,ಡೆಂಗ್ಯೂ ರೋಗಗಳಿಗೆ ಆವ್ಹಾನ ಕೊಟ್ಟಂತಾಗಿದೆ ಮಳೆಗಾಲ ಇರುವದರಿಂದ ನಲ್ಲಿಯ ನೀರು ಹಾಗೂ ಮಳೆಯ ನೀರಿನ ಜೊತೆಗೆ ರಸ್ತೆಯು ಕೊಚ್ಚೆಮಯವಾಗಿದೆ.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.