
ಶಾಲಾ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
ಗುಂಡ್ಲುಪೇಟೆ:ಶಾಲಾ ವಿದ್ಯಾರ್ಥಿನಿಯೋರ್ವಳು ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಪಟ್ಟಣದ ಸಿಎಂಎಸ್ ಅನಾಥಾಲಯದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಪಟ್ಟಣದ ನಿರ್ಮಲ ಕಾನ್ವೆಂಟ್ ನಲ್ಲಿ ಎಸ್ಎಸ್ ಎಲ್ ಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ ಫಿಲಿಶ್(15) ಹೃದಯಾಘಾತದಿಂದ ಸಾವನ್ನಪ್ಪಿದ್ದು, ಈಕೆ ಸಿಎಂಎಸ್ ಅನಾಥಾಲಯದಲ್ಲಿ ವಾಯು ವಿಹಾರ ಮಾಡುತ್ತಿದ್ದ ವೇಳೆ ಏಕಾಏಕಿ ಕುಸಿದು ಬಿದ್ದಿದ್ದಾಳೆ. ನಂತರ ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿ ವೈದ್ಯರು ತಪಾಸಣೆಗೆ ಒಳಪಡಿಸಿದ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂದು ವೈದ್ಯರು ಧೃಡಪಡಿಸಿದ್ದಾರೆ.

ಮೃತ ವಿದ್ಯಾರ್ಥಿನಿ ಫಿಲಿಶ್(15) ಮೂಲತಃ ಬೆಂಗಳೂರಿನ ನಿವಾಸಿಯಾಗಿದ್ದು, ತಂದೆ ಪ್ರಭು ಕಳೆದ ಐದಾರು ವರ್ಷಗಳಿಂದ ವ್ಯಾಸಂಗಕ್ಕಾಗಿ ಪಟ್ಟಣದ ಸಿಎಂಎಸ್ ಅನಾಥಾಲಯಕ್ಕೆ ತಂದು ಬಿಟ್ಟಿದ್ದರು ಎಂದು ನಿಲಯ ಪಾಲಕರಾದ ಸೆಲ್ವರಾಜ್ ಮಾಹಿತಿ ನೀಡಿದ್ದು, ಬಾಲಕಿ ಆರೋಗ್ಯವಾಗಿದ್ದು ಧಿಡೀರ್ ಕುಸಿದು ಬಿದ್ದು ಹೃದಯಾಘಾತವಾಗಿರುವುದು ನಮಗೆಲ್ಲರಿಗೂ ಆಘಾತವಾಗಿದೆ ಎಂದು ತಿಳಿಸಿದರು.
ಮೃತ ಬಾಲಕಿಯ ಪಟ್ಟಣದ ಶವಾಗಾರಕ್ಕೆ ರವಾನಿಸಿ, ಮರಣೋತ್ತರ ಪರೀಕ್ಷೆ ನಡೆಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಲಾಗಿದೆ.
ವರದಿ:ನಂದಿನಿ ಮೈಸೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 .8182350116