ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನು ಉಳಿಸಿ -ಎಚ್ ವಿ ರಾಜೀವ್

ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನು ಉಳಿಸಿ -ಎಚ್ ವಿ ರಾಜೀವ್

ಮನುಷ್ಯನ ಒಡನಾಡಿಯಾಗಿರುವ ಪ್ರಾಣಿ ಪಕ್ಷಿಗಳ ಜೀವ ಸಂಕುಲವನ್ನುಳಿಸಲು ಸಮಾಜದಲ್ಲಿರುವ ಸಹೃದಯಿ ನಾಗರಿಕರು ಮುಂದಾಗಬೇಕೆಂದು ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್ ಜನಸಾಮನ್ಯರಿಗೆ ಕರೆ ಕೊಟ್ಟಿದ್ದಾರೆ. ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ತಿಂಗಳ ಕಾಲ ಮೂಕ ಸ್ಪಂದನೆ ಎಂಬ ‘ನೀರುಣಿಸಿ-ಜೀವವನ್ನುಳಿಸಿ, ಅಭಿಯೋಜನೆಯನ್ನು ಮೈಸೂರು ನಗರದಲ್ಲಿ ಹಮ್ಮಿಕೊಂಡಿದ್ದು
ಅದರ ಉದ್ಘಾಟನೆಯನ್ನು ಸಾಂಕೇತಿಕವಾಗಿ ಚಾಮುಂಡಿಪುರಂ ವೃತ್ತದಲ್ಲಿರುವ ತಗಡೂರು ರಾಮಚಂದ್ರರಾವ್ ಉದ್ಯಾನವನದಲ್ಲಿ ಮರಗಳಿಗೆ ಪ್ರಾಣಿ ಪಕ್ಷಿ ಉಳಿಸಿ ಎಂಬ ನಾಮಫಲಕ ಹಾಗೂ ನೀರು ಹಾಗೂ ಆಹಾರದ ಬಟ್ಟಲು ಅಳವಡಿಸುವ ಮೂಲಕ ಮೂಕ ಸ್ಪಂದನೆ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಬಲಿಕ ಮಾತನಾಡಿದ ಅವರು ಬೇಸಿಗೆಯ ರಣಬಿಸಿಲಿನ ತಾಪಮಾನದ ತೀವ್ರತೆಯಿಂದಾಗಿ ಪ್ರಾಣಿ ಪಕ್ಷಿಸಂಕುಲ ಬಳಲುತ್ತವೆ. ಕುಡಿಯುವ ನೀರು ಆಹಾರಕ್ಕಾಗಿ ಪರಿತಪಿಸುತ್ತವೆ. ಆದ್ದರಿಂದ ಪರಿಸರ ರಕ್ಷತಿ ರಕ್ಷಿತಃ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ 2ತಿಂಗಳ ಕಾಲ ಮೂಕ ಸ್ಪಂದನೆ ಎಂಬ ‘ನೀರುಣಿಸಿ-ಜೀವವನ್ನುಳಿಸಿ, ಅಭಿಯೋಜನೆಯನ್ನು ಮೈಸೂರು ನಗರದ ಸುತ್ತಮುತ್ತ ಪ್ರದೇಶಗಳಲ್ಲಿ ರೂಪಿಸುತ್ತಿರುವುದು ಅತ್ಯುತ್ತಮವಾದ ಕೆಲಸ, ಬೇಸಿಗೆಯ ದಿನ ಇನ್ನೇನು ಆರಂಭಗೊಂಡಿದ್ದು ಪ್ರಾಣಿ ಪಕ್ಷಿಗಳು ತಮ್ಮ ಅಸ್ಥಿತ್ವಕ್ಕಾಗಿ ಹೋರಾಟ
ನಡೆಸುವ ಹಾದಿಯಲ್ಲಿರುತ್ತವೆ. ಜನವಸತಿ ಮತ್ತು ಜನಸಂಖ್ಯೆಗನುಗುಣವಾಗಿ ಮೊಬೈಲ್ ಮತ್ತು ಇತರೆ ತರಂಗದಿಂದಾಗಿ ಹಾಗೂ ಅಗತ್ಯ ನಾಗರೀಕ ಸವಲತ್ತುಗಳ ನೆರಳಿನಡಿಯಲ್ಲಿ ಈಗಾಗಲೇ ಸಂತತಿ ಕ್ಷೀಣಿಸುತ್ತಿರುವ ಹಲವಾರು ಪಕ್ಷಿಗಳು ನಶಿಸಿ ಹೋಗುತ್ತಿವೆ. ಅಳಿದು ಉಳಿದಿವೆಯೇನೋ ಎಂಬಂತಿರುವ ಜನತೆಯ ಮಧ್ಯೆಯೇ ಬದುಕಿ ಬೆರೆತು ಜೀವಿಸುವ ಪ್ರಾಣಿಪಕ್ಷಿ ಸಂಕುಲಕ್ಕಿಂದು ತಿನ್ನಲು ಆಹಾರ ಮತ್ತು ಕುಡಿಯಲು ನೀರಿಗಾಗಿ ಪರಿತಪಿಸುವ ಕಾಲ ಇದಾಗಿದ್ದು ಈ ಭೂಮಂಡಲದಲ್ಲಿ ಸರ್ವಜೀವಿಗಳಿಗೂ ಸಮಬಾಳು ಸ್ವತಂತ್ರತೆಯಿರಬೇಕು ಮಾನವೀಯ ದೃಷ್ಟಿಯಿಂದ ಅವುಗಳ ಬಗ್ಗೆ ಕಾಳಜಿವಹಿಸಬೇಕೆಂದು ಅವರು ಕಳಕಳಿ ವ್ಯಕ್ತಪಡಿಸಿದರು. ಸಮಾಜಮುಖಿ ಟ್ರಸ್ಟ್ ನ ಈ ಸೇವಾ ಕಾರ್ಯ ನಿಜಕ್ಕೂ ಶ್ಲಾಘನೀಯ ಇವರ ಈ ಕೆಲಸ ಯಶಸ್ವಿಗೊಳ್ಳಲಿ ಸಾರ್ವಜನಿಕರ ಪಾತ್ರ ಸೇವಾ ಕಾರ್ಯಕ್ಕೆ ಕೈ ಜೋಡಿಸಲಿ ಎಂದು ಹೇಳಿದರು .

ನಂತರ ಮಾತನಾಡಿದ ಕೆಎಂಪಿಕೆ ಟ್ರಸ್ಟ್ ಅಧ್ಯಕ್ಷ ವಿಕ್ರಮ್ ಅಯ್ಯಂಗಾರ್ ನಮ್ಮ ಈ ಅಭಿಯಾನಕ್ಕೆ ಸಾರ್ವಜನಿಕರು ಸಹ ಮೈಸೂರು ನಗರದ ಪ್ರತಿಯೊಂದು ವಾರ್ಡ್‌ ನಲ್ಲಿ ಸಾರ್ವಜನಿಕ ಸ್ಥಳದಲ್ಲಿ ಪ್ರಾಣಿ ಮತ್ತು ಪಕ್ಷಿಗಳಿಗೆ ನೀರಿನ ತೊಟ್ಟಿ ಹಾಗೂ ಮರಗಳಿಗೆ ನೀರಿನ ತಟ್ಟೆ ಹಾಗೂ ಆಹಾರದ ತಟ್ಟೆ ನೆಡಲಾಗುವುದು ಹಾಗೆಯೇ ಸುತ್ತಮುತ್ತ ಇರುವವರಿಗೆ ಪ್ರತಿನಿತ್ಯ ಪ್ರಾಣಿ ಪಕ್ಷಿಗಳಿಗೆ ಆಹಾರ ನೀಡುವಂತೆ ಜಾಗೃತಿ ಮೂಡಿಸಲಾಗುವುದು ನಮ್ಮ ಅಭಿಯಾನಕ್ಕೆ ಕೈ ಜೋಡಿಸುವವರು ಬರುವ ಆಸಕ್ತರು 9880752727 ಸಂಪರ್ಕಿಸಬಹುದು ಎಂದು ತಿಳಿಸಿದರು ನಂತರ ಮಾತನಾಡಿದ ಹಿರಿಯ ಸಮಾಜಸೇವಕರಾದ ಕೆ ರಘುರಾಮ ವಾಜಪೇಯಿ ಎಲ್ಲರೂ ಅವರವರ ಮನೆಗಳ ಮೇಲಿನ ತಾರಸಿಯ ಮೇಲೆ, ಮರಗಳ ಕೆಳಗೆ, ಮನೆಯ ಮುಂದಿನ ರಸ್ತೆಯ ಇಕೆಲಗಳಲ್ಲಿ ಪ್ರಾಣಿ ಪಕ್ಷಿಗಳ ಬಾಯಿಗೆ ಎಟುಕುವಂತೆ ಮಣ್ಣಿನ ಬಟ್ಟಲು ಅಥವಾ ಸಣ್ಣ ಸಿಮೆಂಟ್ ತೊಟ್ಟಿಗಳನ್ನಿಟ್ಟು ಅದರಲ್ಲಿ ಶುದ್ಧ ನೀರನ್ನು ತುಂಬಿಡಬೇಕು. ಆಹಾರ ಧಾನ್ಯ ಮಿತವಾಗಿಟ್ಟು ಅವುಗಳನ್ನು ಸಲುಹಬೇಕಿದೆ. ಎಂದರು. ಪ್ರಾಣಿ ಪಕ್ಷಿ ಸಂಕುಲವನ್ನುಳಿಸಿಕೊಳ್ಳುವುದು
ನಾಗರಿಕ ಸಮಾಜದಲ್ಲಿರುವ ನಮ್ಮಗಳ ಆದ್ಯ ಕರ್ತವ್ಯವೆಂದು ಭಾವಿಸಬೇಕು. ನಮ್ಮೊಟ್ಟಿಗಿರುವ ಜೀವರಾಶಿಗಳನ್ನೂ ರಕ್ಷಿಸಿ ಅವುಗಳ ಬಗೆಗೆ ಅನುಕಂಪ ತೋರಬೇಕಾದ್ದು ಪ್ರತೀಯೊಬ್ಬ ನಾಗರಿಕರ ಕರ್ತವಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು ಇದೇ ಸಂದರ್ಭದಲ್ಲಿ ಮೂಡ ಮಾಜಿ ಅಧ್ಯಕ್ಷರಾದ ಎಚ್ ವಿ ರಾಜೀವ್, ಹಿರಿಯ ಸಮಾಜ ಸೇವಕರಾದ ಕೆ ರಘುರಾಮ ವಾಜಪೇಯಿ, ನಿಕಟ ಪೂರ್ವ ನಗರಪಾಲಿಕ ಸದಸ್ಯರಾದ ಮ್ ವಿ ರಾಮ್ ಪ್ರಸಾದ್, ಅಪೂರ್ವ ಸುರೇಶ್, ಕೆ ಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮೃಗಾಲಯ ಪ್ರಾಧಿಕಾರದ ಮಾಜಿ ನಿರ್ದೇಶಕರಾದ ಜ್ಯೋತಿ ರೇಚಣ್ಣ, ಕಡಕೋಳ ಜಗದೀಶ್,
ಅಖಿಲ ಭಾರತೀಯ ಗ್ರಾಹಕ ಪಂಚಾಯಿತಿ ಮೈಸೂರು ಘಟಕದ ಅಧ್ಯಕ್ಷರಾದ ಚಂದ್ರಶೇಖರ್, ರಾಕೇಶ್, ಮಿರ್ಲೆ ಪನಿಶ್, ಸುಚೇಂದ್ರ, ವಿದ್ಯಾ, ನಾಗಶ್ರೀ, ದಯಾನಂದ, ಮೈಲಾ ವಿಜಯ್ ಕುಮಾರ್, ಹಾಗೂ ಇನ್ನಿತರರು ಭಾಗವಹಿಸಿದ್ದರು.

ವರದಿ :ನಂದಿನಿ ಮೈಸೂರು

https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555

Leave a Reply

Your email address will not be published. Required fields are marked *