ಸಂಸ್ಕೃತಮಯವಾಗಿದ್ದ ಸಾಹಿತ್ಯವನ್ನು ಕನ್ನಡಮಯಗೊಳಿಸಿದ್ದು ಬಸವಣ್ಣ ಮತ್ತು‌ ವಚನಕಾರರು: ಮುಖ್ಯಮಂತ್ರಿ‌ ಸಿದ್ದರಾಮಯ್ಯ

ಸಂಸ್ಕೃತಮಯವಾಗಿದ್ದ ಸಾಹಿತ್ಯವನ್ನು ಕನ್ನಡಮಯಗೊಳಿಸಿದ್ದು ಬಸವಣ್ಣ ಮತ್ತು‌ ವಚನಕಾರರು: ಮುಖ್ಯಮಂತ್ರಿ‌ ಸಿದ್ದರಾಮಯ್ಯ

ಬೆಂಗಳೂರು : ಜನರಿಗೆ ಅರ್ಥವಾಗದ, ಜನರಿಗೆ ಗೊತ್ತಿಲ್ಲದ ಸಂಸ್ಕೃತ ಭಾಷೆಯಲ್ಲಿದ್ದ ಧರ್ಮದ ಸಾರವನ್ನು ಬಸವಣ್ಣ ಮತ್ತು ವಚನಕಾರರು ಜನರಿಗೆ ಅರ್ಥ ಆಗುವ, ಜನರದ್ದೇ ಆದ ಕನ್ನಡ ಭಾಷೆಯಲ್ಲಿ ತಿಳಿಸಿದರು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ನಗರ ಜಿಲ್ಲಾಡಳಿತ ರವೀಂದ್ರ ಕಲಾ ಕ್ಷೇತ್ರದಲ್ಲಿ ಫ.ಗು.ಹಳಕಟ್ಟಿಯವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡಿದ್ದ ವಚನ ಸಾಹಿತ್ಯ ಸಂರಕ್ಷಣಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಫ.ಗು.ಹಳಕಟ್ಟಿಯವರು 200 ವಚನಕಾರರ ವಚನಗಳನ್ನು ಸಂಗ್ರಹಿಸಿ ತಮ್ಮ ಮತ್ತು ಮುಂದಿನ ತಲೆಮಾರಿಗೆ ದಾಟಿಸುವ ಮಹಾನ್ ಮೌಲ್ಯಯುತವಾದ ಕೆಲಸ ಮಾಡಿದರು. ಆದ್ದರಿಂದಲೇ ಫ.ಗು.ಹಳಕಟ್ಟಿಯವರ ಜನ್ಮದಿನವನ್ನು “ವಚನ ಸಾಹಿತ್ಯ ಸಂರಕ್ಷಣಾ ದಿನ” ವನ್ನಾಗಿ ಆಚರಿಸಲಾಗುತ್ತಿದೆ ಎಂದು ವಿವರಿಸಿದರು.

ಹೀಗಾಗಿ ಫ.ಗು.ಹಳಕಟ್ಟಿಯವರ ಮಾರ್ಗ ನಮಗೆಲ್ಲರಿಗೂ ಮಾದರಿಯಾಗಲಿ ಎಂದು ಆಶಿಸಿದರು.

ವೇದಿಕೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ವಿಭೂತಿಪುರ ಮಠದ ಡಾ.ಮಹಾಂತಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು, ಜಿಲ್ಲಾಧಿಕಾರಿ ಕೆ.ಎ.ದಯಾನಂದ್, ಇಲಾಖೆ ಕಾರ್ಯದರ್ಶಿ ಡಾ.ಎನ್.ಮಂಜುಳ ಸೇರಿ ಹಲವರು ಉಪಸ್ಥಿತರಿದ್ದರು. ನಾಡೋಜ ಡಾ.ಗೋ.ರು.ಚನ್ನಬಸಪ್ಪ ಅವರು ಫ.ಗು.ಹಳಕಟ್ಟಿಯವರ ಕುರಿತು ಉಪನ್ಯಾಸ ನೀಡಿದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *