ಪೊಲೀಸರ ವಶಕ್ಕೆ ಸುನೀಲನ ಹಲ್ಲೆಗೆ ಯತ್ನಿಸಿದ ಪ್ರಮುಖ ಆರೋಪಿ ಸಮೀರ್

ಸಾಗರ: ಪೊಲೀಸರ ವಶಕ್ಕೆ ಸುನೀಲನ ಹಲ್ಲೆಗೆ ಯತ್ನಿಸಿದ ಪ್ರಮುಖ ಆರೋಪಿ ಸಮೀರ್.

ಸಮೀರ್

ಸಾಗರ ಭಜರಂಗದಳದ ಕಾರ್ಯಕರ್ತ ಸುನೀಲ್ ಹತ್ಯೆಗೆ ಯತ್ನ‌ ವಿಚಾರದಲ್ಲಿ ಸಾಗರ ಟೌನ್ ಠಾಣೆಯಲ್ಲಿ ನಿನ್ನೆ ಘಟನೆ ಕುರಿತಂತೆ ಎಫ್ಐಆರ್ ದಾಖಲಾಗಿದೆ. ಸಾಗರದ ಸಮೀರ್ ಎ1 ಆರೋಪಿ ಆರೋಪಿಯನ್ನ ಬಂಧಿಸಲಾಗಿದೆ. ಉಳಿದಂತೆ ಫಾರುಕ್ ಹಾಗೂ ನಾಲ್ಕೈದು ಜನರ ವಿರುದ್ಧ ಸಹ ಎಫ್ಐಆರ್ ದಾಖಲಾಗಿದೆ. ಐಪಿಸಿ ಸೆಕ್ಷನ್ 307, 149, 506, 504 ಅಡಿ ಕೇಸ್ ದಾಖಲಾಗಿದೆ. ಜೀವ ಬೆದರಿಕೆ, ಕೊಲೆ ಯತ್ನ ಸಂಬಂಧ ಕೇಸ್ ದಾಖಲಾಗಿದೆ.

ಈಗಾಗಲೇ ಆರೋಪಿಯನ್ನ ಶಿವಮೊಗ್ಗದಲ್ಲಿ ವಶಕ್ಕೆ ಪಡೆದುಕೊಳ್ಳಲಾಗಿದೆ. ನಿನ್ನೆ ಮೂರು ತಂಡಗಳಾಗಿ ಜಿಲ್ಲಾ ರಕ್ಷಣಾಧಿಕಾರಿಗಳು ತಂಡ ರಚನೆ ಮಾಡಲಾಗಿದ್ದು ವಿಶೇಷ ತಂಡದಿಂದ ಆರೋಪಿಯನ್ನ ವಶಕ್ಕೆ ಪಡೆಯಲಾಗಿದೆ.

ಇಂದಿರಾ ಗಾಂಧಿ ಕಾಲೇಜಿನಲ್ಲಿ ಪದವಿ ಓದುತ್ತಿದ್ದ ಸಭಾಶೇಖ್ ಗೆ ಬಜರಂಗದಳದ ಸುನೀಲ್ ಹಿಜಾಬ್ ತೆಗೆಯುವಂತೆ ಒತ್ತಾಯಿಸುತ್ತಿದ್ದನು. ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವಂತೆ ಬಜರಂಗದಳದ ಕಾರ್ಯಕರ್ತ ಸುನೀಲ್ ಬೆನ್ನುಬಿದ್ದಿದ್ದು ,ಇದರಿಂದಲೇ ಅಣ್ಣ ಎಚ್ಚರಿಕೆ ನೀಡಲು ಹೋಗಿರಬಹುದು ಎಂದು ಸಭಾಶೇಖ್ ಗಂಭೀರ ಆರೋಪ ಮಾಡಿದ್ದಾರೆ.

ಹಿಜಾಬ್ ಗಲಭೆ ಆಗಿ ಒಂದು ವರ್ಷ ನಂತರ ಈ ಗಲಾಟೆ ನಡೆದಿರುವುದು ಹಲವು ಸಂಶಯಕ್ಕೆ ಕಾರಣವಾಗಿದೆ. ಆದರೆ ಸುನೀಲ್ ಸಮೀರ್ ಮತ್ತು ಆತನ ಸಹೋದರಿಯ ಬಗ್ಗೆ ಯಾವುದೇ ಗುರುತಿಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

ವರದಿ: ಸಿಸಿಲ್ ಸೋಮನ್ (C E O – HIND SAMACHAR)

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *