ಸಾಗರ-ಹೊಸನಗರ ಕ್ಷೇತ್ರದಲ್ಲಿ ಮಳೆಹಾನಿ ಕುರಿತು ಬೆಲ್ಜಿಯಂ ದೇಶದಿಂದ ಸಾಗರ ವಿಧಾನಸಭಾ ಕ್ಷೇತ್ರ ಶಾಸಕ ಗೋಪಾಲಕೃಷ್ಣ ಬೇಳೂರು ಆನ್’ಲೈನ್ ಮೀಟಿಂಗ್
ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಮಳೆಹಾನಿ ಪರಿಹಾರ ನೀಡಲು ವಿದೇಶದಲ್ಲಿದ್ದರೂ 24*7 ಜನರ ಮೇಲಿನ ಕಾಳಜಿಗೆ ಜನತೆಯ ಅಪಾರ ಮೆಚ್ಚುಗೆ
ಮಳೆಯಿಂದ ಕ್ಷೇತ್ರದ ಜನತೆಗೆ ಯಾವುದೇ ರೀತಿಯ ತೊಂದರೆ ಆಗಬಾರದೆಂದು ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಶಾಸಕ ಗೋಪಾಲಕೃಷ್ಣ ಬೇಳೂರು ಖಡಕ್ ಸೂಚನೆ
ಹಾನಿಗೊಳಗಾದ ಎಲ್ಲರಿಗೂ ಸೂಕ್ತ ರೀತಿಯ ಪರಿಹಾರ ನೀಡಲಾಗಿದೆ ಎಂದ ಸಾಗರ ತಹಶಿಲ್ದಾರರಾದ ಚಂದ್ರಶೇಖರ ನಾಯ್ಕ ಮತ್ತು ಸಾಗರ ನಗರಸಭಾ ಕಮೀಷನರ್ ಎಚ್.ಕೆ. ನಾಗಪ್ಪ
ಗ್ರಾಮೀಣ ಭಾಗದಲ್ಲಿ ಮಳೆಯಿಂದ ಹಾನಿಗೊಳಗಾದ ಕಡೆ ಹೆಚ್ಚಿನ ಗಮನ ನೀಡಲಾಗಿದ್ದು, ಹಾನಿಗೊಳಗಾದ ಪ್ರತಿಯೊಂದು ಕಡೆ ನಿಗಾ ವಹಿಸಲು ಪಿಡಿಓಗಳಿಗೆ ಹೇಳಲಾಗಿದೆ-ಇಓ ಗುರುಕೃಷ್ಣ ಶೆಣೈ
ಗ್ರಾಮೀಣ ಭಾಗದ ಕುಡಿಯುವ ನೀರು ಮತ್ತು ನೈರ್ನಲ್ಯದ ಬಗ್ಗೆ ಗಮನವಿಟ್ಡು ಜನತೆಗೆ ತೊಂದರೆ ಆಗದಂತೆ ಕೆಲಸ ಮಾಡಲಾಗಿದೆ-ಇಂಜಿನಿಯರ್ ಭರತ್
ರಸ್ತೆಗಳು ಮಳೆಯಿಂದ ಹಾನಿಗೊಳಗಾದ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಮತ್ತು ಸಾಗರ ತಾಲ್ಲೂಕು ಕಚೇರಿ ಮೇಲ್ಚಾವಣಿಗೆ ಟೆಂಡರ್ ಕತೆಯುವ ಪ್ರಕ್ರಿಯೆ ನಡೆಯುತ್ತಿದೆ-ಲೋಕೋಪಯೋಗಿ ಇಂಜಿನಿಯರ್ ಮಂಜುನಾಥ
ಮಳೆಯಿಂದ ಶಾಲೆಗಳಿಗೆ ಹಾನಿಯಾಗಿದ್ದು, ಅವುಗಳಲ್ಲಿ ಪಾಠ ಮಾಡಲು ಸಾಧ್ಯವಾಗದೇ ಇದ್ದರೆ ಅಂತಹ ಸ್ಥಳದಲ್ಲಿ ಮುಖ್ಯಶಿಕ್ಷಕರು ತೀರ್ಮಾನ ಕೈಗೊಳ್ಳಲು ಸೂಚಿಸಲಾಗಿದೆ-ಬಿಇಓ ಪರಶುರಾಮ್
ವರದಿ: ಅಪೂರ್ವ ಸಾಗರ