
ಮಾರುತಿಪುರ: ಬೇಳೂರು ಅಪ್ಪಟ ಅಭಿಮಾನಿಯನ್ನು ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದ ಅಭಿಮಾನಿ ಬಳಗ.

“ನಾನು ಸಾಯೋಕ್ಕಿಂತ ಮುಂಚೆ ಬೇಳೂರರನ್ನು ನೋಡಬೇಕು, ಅವರನ್ನು ಈ ಬಾರಿ ನಾನೊಂದು ಓಟು ಹಾಕಿ ಗೆಲ್ಲಿಸಬೇಕು, ದಯವಿಟ್ಟು ನನ್ನ ಬದುಕಿಸಿ.” ಇದು ಇಲ್ಲಿನ ಬಾಣಿಗ ಗ್ರಾಮದ ಪೂಜಾರಿ ಜಡ್ಡು ನಿವಾಸಿ, ಬೇಳೂರು ಗೋಪಾಲಕೃಷ್ಣ ಅವರ ಅಪ್ಪಟ ಅಭಿಮಾನಿ ಹುಟ್ಟು ಅಂಗವಿಕಲ ಉಮಾಪತಿ ಅವರ ಕೋರಿಕೆ. ಕೆಲವು ವರ್ಷದಿಂದ ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಅವರು, ಇತ್ತೀಚೆಗೆ ತೀವ್ರವಾಗಿ ಕಾಯಿಲೆಗೆ ತುತ್ತಾಗಿದ್ದು, ಉಮಾಪತಿಯವರ ಕೊನೆಯ ಕೋರಿಕೆಯೇ ಮಾಜಿ ಶಾಸಕ ಹಾಗೂ ಹಾಲಿ ಸಾಗರ ವಿಧಾನ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯಾರ್ಥಿ ಬೇಳೂರು ಗೋಪಾಲಕೃಷ್ಣ ಅವರನ್ನು ಈ ಚುನಾವಣೆಯಲ್ಲಿ ಗೆಲ್ಲಿಸುವುದು. ಹಾಗೂ ಕೊನೆಯದಾಗಿ ಅವರ ಮುಖ ನೋಡಿ ಮಾತಾಡಿಸಬೇಕು ಅನ್ನುವುದು.

ಇಂದು ಬೆಳಿಗ್ಗೆ ಸ್ಥಳೀಯ ನಾಯಕರಿಗೆ ಸ್ವತಃ ಕರೆ ಮಾಡಿ ತನ್ನ ಮನದ ಇಂಗಿತವನ್ನು ಉಮಾಪತಿ ಹೇಳಿದ್ದಾರೆ. ತಕ್ಷಣ ಅವರ ನಿವಾಸಕ್ಕೆ ಬೇಟಿ ನೀಡಿದ ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗ, ಉಮಾಪತಿ ಕಾಯಿಲೆಯಿಂದ ನಿತ್ರಾಣಗೊಂಡಿದ್ದನ್ನು ಗಮನಿಸಿ, ತಕ್ಷಣ ಮಾರುತಿಪುರ ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿ ಕರೆದುಕೊಂಡು ಬಂದು ತೋರಿಸಿದ್ದಾರೆ. ಅವರ ಬಿಪಿ ಹೆಚ್ಚಾಗಿದ್ದು, ತೀವ್ರವಾಗಿ ಬಳಲಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲು ಆರೋಗ್ಯ ಇಲಾಖೆ ಸಿಬ್ಬಂದಿ ಸೂಚಿಸಿದ್ದಾರೆ. ಉಮಾಪತಿ ಅವರನ್ನು ತಕ್ಷಣವೇ ಬೇಳೂರು ಗೋಪಾಲಕೃಷ್ಣ ಅಭಿಮಾನಿ ಬಳಗದ ವತಿಯಿಂದ ಆಂಬುಲೆನ್ಸ್ ಮೂಲಕ ಕರೆದೊಯ್ದು, ಸಾಗರ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅಭಿಮಾನಿ ಬಳಗದ ಮಂಜು ಸಣ್ಣಕ್ಕಿ, ಮಂಜುನಾಥ್ ಬ್ಯಾಣದ, ಬಸವರಾಜ್ ಗಗ್ಗ, ರೋಹಿತ್ ಚಿಕ್ಕಮಣತಿ, ವಿಜಿತ್ ಗೌಡ, ಗೋಪಿನಾಥ್ ಜಯನಗರ, ರಾಜು ಎರಗಿ, ಸತೀಶ್ ಮೊದಲಾದವರು ಉಮಾಪತಿಯ ನೆರವಿಗೆ ಧಾವಿಸಿದರು.
ದೂರವಾಣಿಯಲ್ಲೆ ಸಮಾಧಾನದ ಮಾತನಾಡಿ, ಬೇಟಿಯ ಭರವಸೆ ನೀಡಿದ ಬೇಳೂರು
ಚುನಾವಣೆಯ ಪ್ರಚಾರ ಸಭೆಯಲ್ಲಿದ್ದ ಬೇಳೂರು ಗೋಪಾಲ ಕೃಷ್ಣ ಅವರು, ದೂರವಾಣಿ ಮೂಲಕ ಮಾತನಾಡಿ ಉಮಾಪತಿಯವರನ್ನು ಸಮಾಧಾನಿಸಿದರು.ಬೇಗ ಗುಣಮುಖರಾಗುವಂತೆ ಹಾರೈಸಿ, ಇನ್ನೆರೆಡು ದಿನದಲ್ಲಿ ಬೇಟಿ ಮಾಡವ ಭರವಸೆಯನ್ನೂ ನೀಡಿದ್ದಾರೆ.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.
ಬಡತನದಲ್ಲಿ ಬೇಯುತ್ತಿರುವ ಕುಟುಂಬ
ಉಮಾಪತಿ ಸೇರಿದಂತೆ ಕುಟುಂಬದ ಮೂರು ಮಂದಿ ಸಹೋದರರು ಕೂಡ ಹುಟ್ಟು ಅಂದರು. ಎಲ್ಲರೂ ಪ್ರತ್ಯೇಕವಾಗಿ ವಾಸಿಸುತ್ತಿರುವ ಸಹೋದರರು ಎಲ್ಲರೂ ತೀವ್ರ ಆರ್ಥಿಕ ತೊಂದರೆಯಿಂದ ಬಳಲುತ್ತಿದ್ದಾರೆ. ಹುಟ್ಟು ಕುರುಡನಾಗಿ ಹಾಗೂ ದೈಹಿಕ ಅಸಮರ್ಥತೆಯಿಂದ, ಇದೀಗ ತೀವ್ರ ತರದ ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಉಮಾಪತಿ, ಪತ್ನಿ ಹಾಗೂ ಎರಡು ಚಿಕ್ಕ ಮಕ್ಕಳನ್ನು ಹೊಂದಿದ್ದಾರೆ. ಹೊತ್ತಿನ ತುತ್ತು ಅನ್ನಕ್ಕೂ ಪರದಾಡುವ ಸ್ಥಿತಿ ತಲುಪಿರುವ ಕುಟುಂಬಕ್ಕೆ ದಾನಿಗಳ, ಮಾನವೀಯ ಕೈಗಳ ಸಹಕಾರ ಕೂಡ ಬೇಕಿದೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.