
ಗೋಪಾಲ ಕೃಷ್ಣ ಬೇಳೂರು ಅವರಿಗೆ ಸಾಗರ ಕ್ರೈಸ್ತರ ಬಳಗದಿಂದ ಬೆಂಬಲ ಸೂಚಿಸಿದರು.

ಸಾಗರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಘೋಷಿತ ಅಭ್ಯರ್ಥಿ ಗೋಪಾಲಕೃಷ್ಣ ಬೇಳೂರು ರವರಿಗೆ ಸಾಗರದ ಕ್ರೈಸ್ತರ ಬಳಗದಿಂದ ಸಾಗರ ಪಟ್ಟಣದ ಗಾಂಧಿ ಮಂದಿರದಲ್ಲಿ ಮಾಜಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ನವರ ನೇತೃತ್ವದಲ್ಲಿ ನೂರಾರು ಸದಸ್ಯರು ಬಹಿರಂಗ ಬೆಂಬಲ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ರೈಸ್ತ ಬಳಗದ ಯುವ ಮುಖಂಡ ಮಿಲನ್ ಸಾಗರ್ ಗೋಪಾಲ ಕೃಷ್ಣ ಬೇಳೂರು ಅವರು ಮಾದರಿ ನಾಯಕನಾಗಿದ್ದಾರೆ ಅವರ ಅವಶ್ಯಕತೆ ನಮ್ಮ ಕ್ಷೇತ್ರಕ್ಕೆ ಇದೆ ಎಂದು ಹೇಳಿದರು.

ಇಂದು ರಾಜಕೀಯ ವ್ಯವಸ್ಥೆಯಲ್ಲಿ ಕೋಮುವಾದ ಮತ್ತು ಜಾತೀಯತೆಯ ವಾದದ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನಗಳು ನಡೆಯುತ್ತಿದ್ದು ಕ್ಷೇತ್ರದ ಜನರಿಗೆ ಪ್ರಭುತ್ವದ ಸರಕಾರದ ಅವಶ್ಯಕತೆ ಇದೆ. ಸರ್ವರನ್ನು ಒಂದಾಗಿ ಕಾಣುವ ನಾಯಕ ನಮಗೆ ಬೇಕಾಗಿದ್ದಾರೆ.ಪ್ರಸ್ತುತ ಸ್ಥಿತಿಯಲ್ಲಿ ಜಾತಿ ಆಧಾರದ ಮೇಲೆ ರಾಜಕೀಯ ನಡೆಸಲಾಗುತ್ತಿದ್ದು ನಾಯಕರನ್ನು ಅದರಲ್ಲೇ ಗುರುತಿಸಲಾಗುತ್ತಿದೆ. ಆದರೆ ಬೇಳೂರು ಗೋಪಾಲಕೃಷ್ಣ ರವರು ಎಲ್ಲ ಸಮುದಾಯದ ನಾಯಕರಾಗಿ ತಾವು ನಂಬಿದ ಸಿದ್ಧಾಂತ, ತತ್ವಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಯಾವ ತ್ಯಾಗಕ್ಕೂ ಸಿದ್ದರಾಗಿದ್ದಾರೆ.

ಇಂದು ಇಂತಹ ಮಾದರಿ ನಾಯಕರ ಅವಶ್ಯಕತೆ ನಮ್ಮ ಕ್ಷೇತ್ರಕ್ಕೆ ಅವಶ್ಯಕತೆ ಇದೆ. ಸಾಗರ ಕ್ಷೇತ್ರದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ.ನಾವೆಲ್ಲರೂ ಒಗ್ಗಟ್ಟಿನಿಂದ ಚುನಾವಣೆ ಮಾಡಬೇಕಾಗಿದೆ. ಬಿಜೆಪಿ ಸರಕಾರ ಕಳೆದ ಐದು ವರ್ಷಗಳಲ್ಲಿ ಯಾವುದೇ ರೀತಿಯ ಜನಪರ ಯೋಜನೆಗಳನ್ನು ನೀಡುವಲ್ಲಿ ವಿಫಲವಾಗಿದೆ. ನಮ್ಮ ಕಳೆದ ಸರ್ಕಾರ ಯಾವುದೇ ಅಭಿವೃದ್ಧಿ ಕೆಲಸಗಳನ್ನು ಮಾಡುವಲ್ಲಿ ಸಂಪೂರ್ಣವಾಗಿ ವಿಫಲವಾಗಿದ್ದಾರೆ.ಆದ ಕಾರಣ ಈ ಬಾರಿ ಗೋಪಾಲಕೃಷ್ಣ ಬೇಳೂರು ರವರನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸುವುದೆ ನಮ್ಮ ಗುರಿ ಎಂದರು. ಕಾಗೋಡು ತಿಮ್ಮಪ್ಪ.ಬಿ. ಆರ್ ಜಯಂತ್. ತಶ್ರೀಫ್ ಇಬ್ರಾಹಿಂ. ಗಣಪತಿ ಮಂಡ ಗಳಲೆ ಮೈಕಲ್ ಡಿಸೋಜ. ಅರ್ಥುರ್ ಗೊಮ್ಸ್. ಪ್ರದೀಪ್ ಡಿಸಿಲ್ವಾ, ಪ್ರವೀಣ್ ಲೋಬೋ. ಸುನೀಲ್ ದಿಕಾಸ್ಟ.ಜೇವಿಯರ್ ಹಾಗೂ ಸಮುದಾಯದ ಹಲವಾರು ಮಂದಿ ಇದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.