
ಮೈಸೂರು : ಮೈಸೂರು ವಿಭಾಗದ ವತಿಯಿಂದ 74 ನೆಯ ಗಣರಾಜ್ಯೋತ್ಸವವನ್ನು ಮೈಸೂರಿನ ರೈಲ್ವೆ ಕ್ರೀಡಾ ಮೈದಾನದಲ್ಲಿ ಆಚರಿಸಲಾಯಿತು.

ಮೈಸೂರು ವಿಭಾಗದ ವತಿಯಿಂದ 74 ನೆಯ ಗಣರಾಜ್ಯೋತ್ಸವವನ್ನು ಮೈಸೂರಿನ ರೈಲ್ವೆ ಕ್ರೀಡಾ ಮೈದಾನದಲ್ಲಿ ರೈಲ್ವೆ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ಅವರ ಕುಟುಂಬದವರ ಸಮ್ಮುಖದಲ್ಲಿಆಚರಿಸಲಾಯಿತು. ಮೈಸೂರು ವಿಭಾಗದ ವತಿಯಿಂದ 74 ನೆಯ ಗಣರಾಜ್ಯೋತ್ಸವವನ್ನು ಮೈಸೂರಿನ ರೈಲ್ವೆ ಕ್ರೀಡಾ ಮೈದಾನದಲ್ಲಿ . 74 ನೇ ಗಣರಾಜ್ಯೋತ್ಸವದ ಅಂಗವಾಗಿ ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀ ರಾಹುಲ್ ಅಗರ್ವಾಲ್ ರವರು ರೈಲ್ವೆ ಕುಟುಂಬದ ಎಲ್ಲಾ ಸದಸ್ಯರಿಗೆ, ಉದ್ಯಮ ಮತ್ತು ವ್ಯಾಪಾರದ ರೈಲ್ವೆ ಪಾಲುದಾರರು ಮತ್ತು ರೈಲು ಗ್ರಾಹಕರಿಗೆ ಹೃತ್ಪೂರ್ವಕ ಶುಭಾಶಯಗಳನ್ನು ಸಲ್ಲಿಸಿದರು.
ಶ್ರೀ ರಾಹುಲ್ ಅಗರ್ವಾಲ್ ರವರು ಸಾಂಕ್ರಾಮಿಕ ರೋಗಗಳ ಪ್ರತಿಕೂಲತೆಯ ಹೊರತಾಗಿಯೂ, ರೈಲ್ವೆಯ ಪ್ರಾಮಾಣಿಕ ಮತ್ತು ಸಮರ್ಪಿತ ಪುರುಷ ಮತ್ತು ಮಹಿಳಾ ಸಿಬ್ಬಂದಿಗಳ ಉತ್ತಮ ಪ್ರಯತ್ನದಿಂದ ಮೈಸೂರು ವಿಭಾಗದಲ್ಲಿ ಹಿಂದಿನ ವರ್ಷ ಸಾದಿಸಲಾದ ಉತ್ತಮ ಸಾಧನೆಗೆ ಒತ್ತು ನೀಡಿ, ಪ್ರಸಕ್ತ ವರ್ಷದಲ್ಲಿ ಮೈಸೂರು ವಿಭಾಗದ ಆರ್ಥಿಕ ಸಾಧನೆ ಗಮನಾರ್ಹವಾಗಿದೆ ಎಂದು ಹೇಳಿದರು.
ಶ್ರೀ ಅಗರ್ವಾಲ್ ರವರು ಮೂರನೇ ತ್ರೈಮಾಸಿಕದ ಅಂತ್ಯದವರೆಗಿನ ಮೈಸೂರು ವಿಭಾಗದ ಅತ್ಯುತ್ತಮ ಪ್ರದರ್ಶನದ ಬಗ್ಗೆ ಸಹ ಮಾತನಾಡಿದರು. ಡಿಸೆಂಬರ್ 2022 ರ ಅಂತ್ಯದವರೆಗಿನ ಒಟ್ಟು ಆದಾಯವು ರೂ 886.24 ಕೋಟಿಗಳಾಗಿದ್ದು, ಹಿಂದಿನ ವರ್ಷಕ್ಕಿಂತ 3% ಹೆಚ್ಚಾಗಿದೆ. ಸರಕು ಸಾಗಣೆ ವಿಭಾಗದಲ್ಲಿ, ವಿಭಾಗವು 557.34 ಕೋಟಿ ರೂ.ಗಳ ಆದಾಯದೊಂದಿಗೆ 6.53 ಮಿಲಿಯನ್ ಟನ್‌ಗಳ ಸರಕ್ಕನ್ನು ಲೋಡ್ ಮಾಡಿದ್ದು, ಇದು ಹಿಂದಿನ ವರ್ಷ (504.71 ಕೋಟಿಗಳ ಆದಾಯ ಮತ್ತು 6.49 MT ಲೋಡಿಂಗ್) ಕ್ಕೆ ಹೋಲಿಸಿದರೆ ಕ್ರಮವಾಗಿ 10% ಮತ್ತು 1% ಹೆಚ್ಚಾಗಿದೆ ಎಂದು ಮಾಹಿತಿ ನೀಡಿದರು.
ಮೈಸೂರು ವಿಭಾಗವು ರೂ.30.93 ಕೋಟಿ ರೂಗಳನ್ನು ಇತರೆ ಮೂಲಗಳಿಂದ ಗಳಿಸಿದ್ದು, ಹಣಕಾಸು ಇಲಾಖೆಯು ಆಂತರಿಕ ತಪಾಸಣೆಯ ಸಮಯದಲ್ಲಿ ತೋರಿಸಿದ ಶ್ರದ್ಧೆಯಿಂದಾಗಿ, ಈ ಆರ್ಥಿಕ ವರ್ಷದ ಮೊದಲ ಒಂಬತ್ತು ತಿಂಗಳುಗಳಲ್ಲಿ ವಿಭಾಗವು 37.81 ಕೋಟಿ ರೂಪಾಯಿಗಳ ಉಳಿತಾಯವನ್ನು ಸಾಧಿಸಿದೆ.
ಮೈಸೂರು ವಿಭಾಗದ ಇತಿಹಾಸದಲ್ಲಿ ಮೊದಲ ಬಾರಿಗೆ, ನಾವು ಒಂದು ತಿಂಗಳಿನಲ್ಲಿ ಸರಕು ಸಾಗಣಿಕೆಯಲ್ಲಿ ರೂ. 100 ಕೋಟಿ ಗಳಿಕೆಯನ್ನು ದಾಟಲು ಸಮರ್ಥರಾಗಿದ್ದೇವೆ, ಇನ್ನಷ್ಟು ನಿಖರವಾಗಿ ಹೇಳಬೇಕೆಂದರೆ ರೂ. 108.60 ಕೋಟಿಗಳ ಸಾಗಾಟ ಡಿಸೆಂಬರ್ 2022 ರಲ್ಲಿ ಸಾಧ್ಯವಾಗಿದೆ. ಸರಕ್ಕಿನ ತೂಕದ ಪ್ರಕಾರವೂ ಸಹ, ವಿಭಾಗವು ಡಿಸೆಂಬರ್ 2022 ರಲ್ಲಿ 0.988 ಮಿಲಿಯನ್ ಟನ್‌ಗಳನ್ನು ಸಾಧಿಸಿದ್ದೂ, ಡಿಸೆಂಬರ್ 2021 ರ ಅಂಕಿ-ಅಂಶವಾದ 0.918 ಮಿಲಿಯನ್ ಟನ್‌ಗಳನ್ನು ಮೀರಿಸಿ, ಯಾವುದೇ ಒಂದು ತಿಂಗಳಿನಲ್ಲಿ ಸಾಧಿಸಿದ ಅತ್ಯಧಿಕ ಲೋಡಿಂಗ್ ಇದಾಗಿದೆ.
ಡಿಸೆಂಬರ್ 2022 ರ ಅಂತ್ಯದ ವೇಳೆಗೆ ಪ್ರಯಾಣಿಕರ ಆದಾಯವು ರೂ 281.08 ಕೋಟಿಗಳಷ್ಟಾಗಿದ್ದೂ, ಇದು ಹಿಂದಿನ ವರ್ಷಕ್ಕೆ (ರೂ 134.60 ಕೋಟಿ) ಹೋಲಿಸಿದರೆ 109% ಹೆಚ್ಚಾಗಿದೆ ಎಂದು ಅವರು ಹೇಳಿದರು.
ಭಾರತೀಯ ರೈಲ್ವೆಯು ಪ್ರಯಾಣಿಕರ ಸೌಕರ್ಯ ಮತ್ತು ಸುರಕ್ಷತೆಯನ್ನೇ ತನ್ನ ಪ್ರಧಾನ ಗಮನವನ್ನಾಗಿ ಮುಂದುವರೆಸಿದೆ. ಮೈಸೂರು ವಿಭಾಗವು ಡಿಸೆಂಬರ್ 2022 ರವರೆಗೆ 23.61 ಮಿಲಿಯನ್ ಪ್ರಯಾಣಿಕರನ್ನು ಸಾಗಿಸಿದೆ. ಪ್ರಯಾಣಿಕರನ್ನು ಸಾಗಿಸುವ ರೈಲುಗಳ ಸಮಯಪಾಲನೆಯ ಕಾರ್ಯಕ್ಷಮತೆಯು ಉತ್ತಮವಾಗಿದ್ದೂ, ಮೇಲ್ / ಎಕ್ಸ್‌ಪ್ರೆಸ್ ರೈಲುಗಳು 98.7% ಕ್ಕಿಂತ ಹೆಚ್ಚು ಸಮಯಪಾಲನೆಯೊಂದಿಗೆ ಸಂಚರಿಸುವುದರೊಂದಿಗೆ ಗಮನಾರ್ಹ ಸುಧಾರಣೆಯನ್ನು ಕಂಡಿದೆ ಎಂದು ಅವರು ಹೇಳಿದರು.
ವಿಭಾಗದ ಸಾಧನೆಯ ಬಗ್ಗೆ ಮುಂದುವರಿಸಿದ ಅವರು, ಪ್ರಯಾಣಿಕರ ಅನುಕೂಲಕ್ಕಾಗಿ ಮೈಸೂರು ವಿಭಾಗದ 20 ನಿಲ್ದಾಣಗಳಲ್ಲಿ ‘ಸ್ವಯಂ ವಾಚ್ಛಿತ’ ಘೋಷಣಾ ವ್ಯವಸ್ಥೆಯನ್ನು ಪ್ರಾರಂಭಿಸಲಾಗಿದೆ ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ಮೈಸೂರು ವಿಭಾಗದ 35 ನಿಲ್ದಾಣಗಳಲ್ಲಿ ಎರಡೂ ಕಡೆಯ ‘ಎಲ್‌ಇಡಿ ಜಿಪಿಎಸ್’ ಗಡಿಯಾರಗಳನ್ನು ನಿಯೋಜಿಸಲಾಗಿದೆ.
ಕಾರ್ಯಾಚರಣೆಯ ಸುರಕ್ಷತೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದೆ ಮತ್ತು ಅಪಘಾತಗಳಿಗೆ ಶೂನ್ಯ ಸಹಿಷ್ಣುತೆಯೊಂದಿಗೆ ಎಲ್ಲಾ ಹಂತಗಳಲ್ಲಿ ಎಲ್ಲಾ ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸಲು ವಿಭಾಗವು ಕಟಿಬದ್ಧವಾಗಿದೆ ಎಂದು ಶ್ರೀ ಅಗರ್ವಾಲ್ ರವರು ಹೇಳಿದರು. ರೈಲ್ವೆ ಮೇಲ್ಸೇತುವೆ/ಕೆಳಸೇತುವೆಗಳನ್ನು ನಿರ್ಮಿಸುವ ಮೂಲಕ ವಿಭಾಗದ ವ್ಯಾಪ್ತಿಯಲ್ಲಿರುವ ಐದು ಲೆವೆಲ್ ಕ್ರಾಸಿಂಗ್‌ಗಳನ್ನು ತೆಗೆದುಹಾಕಲಾಗಿದೆ ಮತ್ತು ಈ ವಿಷಯದಲ್ಲಿ ವಿಭಾಗಕ್ಕೆ ಈ ವರ್ಷ ನಿಗದಿಪಡಿಸಿರುವ ಗುರಿಯನ್ನು ಸಾಧಿಸುವ ಕೆಲಸ ಪ್ರಗತಿಯಲ್ಲಿದೆ.
ವಿಭಾಗದ ಹಳಿಗಳಲ್ಲಿ ವೇಗವನ್ನು ಹೆಚ್ಚಿಸುವ ಪ್ರಯತ್ನದಲ್ಲಿ, 119 ಕಿಮೀಗಳಷ್ಟು ಹಳಿಯಲ್ಲಿ ಗರಿಷ್ಠ ವೇಗವನ್ನು ಗಂಟೆಗೆ 110 ಕಿಮೀಗೆ ಏರಿಸಲಾಗಿದೆ ಮತ್ತು ಚಿಕ್ಕಜಾಜೂರು-ರಾಯದುರ್ಗ ಮತ್ತು ಹಾಸನ-ಸಕಲೇಶಪುರ ಭಾಗಗಳ ನಡುವಿನ 172 ಕಿಮೀಗಳಷ್ಟು ಲೂಪ್‌ಲೈನ್ ನಲ್ಲಿ ವೇಗವನ್ನು 15 ಕಿಮೀ ನಿಂದ 30 ಕಿಮೀ ಗೆ ಹೆಚ್ಚಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ವೇಗದ, ಆರ್ಥಿಕ ಸಹಕಾರಿ ಮತ್ತು ಪರಿಸರ ಪೂರಕ ಪ್ರಯಾಣಕ್ಕಾಗಿ, ರೈಲ್ವೆಯು ವೇಗದ ವಿದ್ಯುದ್ದೀಕರಣ ಯೋಜನೆಗಳಿಗೆ ಬದ್ಧವಾಗಿದೆ. ವಿಭಾಗದ ಹೊಸದುರ್ಗ-ಬೀರೂರು, ಚಿಕ್ಕಜಾಜೂರು-ತೋಳಹುಣಸೆ, ಮೈಸೂರು-ಚಾಮರಾಜನಗರ, ಬೀರೂರು-ಅರಸೀಕೆರೆ-ಸಂಪಿಗೆರೋಡ್ ಮತ್ತು ಬೀರೂರು-ಮಸರಹಳ್ಳಿ ಭಾಗಗಳ ನಡುವೆ ಸುಮಾರು 275 ಕಿಲೋಮೀಟರ್ ಗಳಷ್ಟು ವಿದ್ಯುದ್ದೀಕರಣ ಪೂರ್ಣಗೊಂಡಿದೆ. ವಿಭಾಗದಲ್ಲಿನ ಇತರ ವಿದ್ಯುದೀಕರಣ ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಡಿಸೆಂಬರ್ 2023 ರೊಳಗೆ ಎಲ್ಲಾ ಬ್ರಾಡ್ ಗೇಜ್ ಮಾರ್ಗಗಳನ್ನು ಸಂಪೂರ್ಣವಾಗಿ ವಿದ್ಯುದ್ದೀಕರಿಸುವ ರಾಷ್ಟ್ರೀಯ ಯೋಜನೆಯ ಪ್ರಕಾರವೇ ಅವುಗಳನ್ನು ಕಾರ್ಯಗತಗೊಳಿಸುವ ವಿಶ್ವಾಸವಿದೆ ಎಂದು ಹೇಳಿದರು.
ವಿಭಾಗದಲ್ಲಿ ಮಾನವ ಸಂಪನ್ಮೂಲ ರಂಗದಲ್ಲಿ ಕೈಗೊಂಡ ವಿವಿಧ ಸಿಬ್ಬಂದಿ ಕಲ್ಯಾಣ ಕ್ರಮಗಳನ್ನು ಪಟ್ಟಿ ಮಾಡಿದರು ಮತ್ತು ಡಿಸೆಂಬರ್ 2021 ರವರೆಗೆ 802 ಉದ್ಯೋಗಿಗಳಿಗೆ ಬಡ್ತಿ ನೀಡಲಾಗಿದೆ ಮತ್ತು 121 ಉದ್ಯೋಗಿಗಳಿಗೆ ಆರ್ಥಿಕ ಉನ್ನತೀಕರಣವನ್ನು ನೀಡಲಾಗಿದೆ ಎಂದು ಹೇಳಿದರು.
ಶ್ರೀ ಅಗರ್ವಾಲ್ ರವರು ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಾ, ರೈಲ್ವೆ ಸಿಬ್ಬಂದಿ ಮತ್ತು ಅವರ ಕುಟುಂಬಗಳ ಉನ್ನತಿಗಾಗಿ ಗಮನಾರ್ಹ ಸೇವೆ ಸಲ್ಲಿಸಿದುದ್ದಕ್ಕಾಗಿ ನೈಋತ್ಯ ರೈಲ್ವೆ ಮಹಿಳಾ ಕಲ್ಯಾಣ ಸಂಸ್ಥೆಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ವಿಭಾಗದ ಪ್ರಗತಿಗೆ ರಚನಾತ್ಮಕ ಬೆಂಬಲವನ್ನು ನೀಡಿದ ಸಿಬ್ಬಂದಿ ಸಂಘ ಮತ್ತು ಸಂಘಟನೆಗಳಿಗೆ ಧನ್ಯವಾದಗಳನ್ನು ಅರ್ಪಿಸಿದರು ಮತ್ತು ಮುಂಬರುವ ಸವಾಲುಗಳನ್ನು ಎದುರಿಸಲು ಹಾಗು ನಮ್ಮ ರಾಷ್ಟ್ರ ಮತ್ತು ಅದರ ಜನರ ಸುಧಾರಣೆಗಾಗಿ ಹೊಸ ಮೈಲಿಗಲ್ಲುಗಳನ್ನು ತಲುಪಲು ನಿರ್ಧರಿಸುವಂತೆ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಒತ್ತಾಯಿಸಿದರು.
ವಂದನೆಗಳೊಂದಿಗೆ,
ತಮ್ಮ ವಿಶ್ವಾಸಿ,
ಡಾ.ಮಂಜುನಾಥ್ ಕನಮಡಿ
ಹಿರಿಯ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕರು ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ, ಮೈಸೂರು ವಿಭಾಗ
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.