ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಜಯಪ್ರಕಾಶ್

ಮೈಸೂರು: ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದ ಜಯಪ್ರಕಾಶ್.

ಚಾಮರಾಜ ಕ್ಷೇತ್ರದಿಂದ ಬಿಜೆಪಿ ಟಿಕೇಟ್ ಸಿಗದ ಹಿನ್ನೆಲೆಯಲ್ಲಿ ಬೆಂಬಲಿಗರ ಒತ್ತಾಯಕ್ಕೆ ಮಣಿದ ಬಿಜೆಪಿ ಮುಖಂಡ ಎಸ್.ಜಯಪ್ರಕಾಶ್(ಜೆಪಿ) ಅವರು ಪಕ್ಷೇತರ ಅಭ್ಯರ್ಥಿಯಾಗಿ ಗುರುವಾರ ನಾಮಪತ್ರ ಸಲ್ಲಿಸಿದರು. ಶಿವರಾಂಪೇಟೆಯ ಆಲಮ್ಮ ಛತ್ರದಲ್ಲಿ ಬೆಳ್ಳಿಗ್ಗೆ ಬೆಂಬಲಿಗರ ಸಭೆಯಲ್ಲಿ ಅನೇಕರು ಜಯಪ್ರಕಾಶ್ ಅವರು ನಾಮಪತ್ರವನ್ನು ಸಲ್ಲಿಸದಿದ್ದರೆ ನಾವು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಆಗ್ರಹಿಸಿದರು. ಈ ಹಿನ್ನೆಲೆಯಲ್ಲಿ ಬೆಂಬಲಿಗರು, ಕಾರ್ಯಕರ್ತರ ಒತ್ತಡಕ್ಕೆ ಮಣಿದ ಬಿಜೆಪಿ ಮುಖಂಡ ಹಾಗೂ ನಟ ಜಯಪ್ರಕಾಶ್ ಅವರು ಬೆಂಬಲಿಗರೊಂದಿಗೆ ನಗರಪಾಲಿಕೆ ಕಚೇರಿವರೆಗೆ ಮೆರವಣಿಗೆ ನಡೆಸಿದರು. ಬಳಿಕ ಬೆಂಬಲಗರೊಂದಿಗೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದರು. ರಾಘವಚಾರಿ, ಹನುಮಂತೇಗೌಡ, ಮಾಸ್ಟರ್ ರಾಜಶೇಖರ್, ಚೇತನ್ ರಮೇಶ, ಮಂಜುಳಾ, ಪುರುಷೋತ್ತಮ್ ಜತೆಗಿದ್ದರು.

ನಾಮಪತ್ರ ಸಲ್ಲಿಕೆ ಬಳಿಕ ಮಾತನಾಡಿದ ಜಯಪ್ರಕಾಶ್ ಅವರು, ಕ್ಷೇತ್ರದಲ್ಲಿ ನನಗೆ ಟಿಕೇಟ್ ಸಿಗುವ ಭರವಸೆ ಇತ್ತು. ಆದರೆ, ಪಕ್ಷ ನನ್ನನ್ನು ಪರಿಗಣಿಸದಿರುವುದು ಬೇಸರ ತರಿಸಿದೆ. ಈ ವೇಳೆ ಬೆಂಬಲಿಗರು ಸ್ಪರ್ಧಿಸಬೇಕೆಂದು ಒತ್ತಡ ಹೇರಿದ ಹಿನ್ನೆಲೆಯಲ್ಲಿ ಇಂದು ಅವರೊಟ್ಟಿಗೆ ಸೇರಿ ನಾಮಪತ್ರ ಸಲ್ಲಿಸಿದ್ದೇನೆ. ಮುಂದೆಯೂ ಜನತೆಯೇ ಕ್ಷೇತ್ರದಲ್ಲಿ ನನ್ನನ್ನೂ ಗೆಲ್ಲಿಸುವ ವಿಶ್ವಾಸವಿದೆ. ಇಂದಿಗೂ ಪಕ್ಷದಿಂದ ಯಾರೊಬ್ಬರೂ ನನ್ನನ್ನು ಸಂಪರ್ಕಿಸುವ ಮನಸ್ಸು ಮಾಡಿಲ್ಲ. ಹೀಗಾಗಿ ಯಾವುದೇ ಕಾರಣಕ್ಕೂ ನಾಮಪತ್ರ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಕ್ಷೇತ್ರದ ಮತದಾರರಿಗೆ ನನ್ನ ಮೇಲೆ ಕಳೆದ ಬಾರಿಯೂ ಟಿಕೇಟ್ ನಿಂದ ವಂಚಿತರಾಗಿರುವ ಬಗ್ಗೆ ಅನುಕಂಪವಿದೆ. ಹೀಗಾಗಿ ನೂರಕ್ಕೆ ನೂರರಷ್ಟು ಗೆಲ್ಲಿಸುವ ವಿಶ್ವಾಸವಿದೆ ಎಂದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *