ಶಾಂತಿ ಸೌಹಾರ್ತೆಯ ಸಾರುವ ರಂಜಾನ್ ಹಬ್ಬದ ಮಹತ್ವ – ಸಿಸಿಲ್ ಸೋಮನ್

ಶಾಂತಿ ಸೌಹಾರ್ತೆಯ ಸಾರುವ ರಂಜಾನ್ ಹಬ್ಬದ ಮಹತ್ವ – ಸಿಸಿಲ್ ಸೋಮನ್

ಸಾಗರ: ರಮ್ಜಾನ್ (ರಂಜಾನ್) ಅಥವಾ ಉರ್ದುವಿನಲ್ಲಿ ರಮಝಾನ್ ಎನ್ನಲಾಗುವ ಇಸ್ಲಾಮೀ ಕ್ಯಾಲೆಂಡರ್ನ 9ನೇ ತಿಂಗಳು, ವಿಶ್ವದಾದ್ಯಂತ ಮುಸ್ಲಿಮರು ಉಪವಾಸ ಮಾಡುತ್ತಾರೆ. ಈ ವಾರ್ಷಿಕ ಆಚರಣೆ ಇಸ್ಲಾಮಿನ ಐದು ಸ್ತಂಭಗಳಲ್ಲಿ ಇನ್ನೊಂದು. ವಿವಿಧ ಪ್ರವಾದಿ ವಚನಗಳಲ್ಲಿ ಬರುವ ಜೀವನ ವೃತ್ತಾಂತಗಳ ಪ್ರಕಾರ, ಬಾಲಚಂದ್ರನ ದರ್ಶನದ ಆಧಾರದಲ್ಲಿ ಈ ತಿಂಗಳು 29 ಅಥವಾ 30 ದಿನಗಳ ಕಾಲ ಇರುತ್ತದೆ.

ದೇವನು ಹಿಂದಿನ ಕಾಲದವರ ಮೇಲೆ ಉಪವಾಸವನ್ನು ಕಡ್ಡಾಯಗೊಳಿಸಿದ ಹಾಗೆ ಮುಸ್ಲಿಮರ ಮೇಲೆ ನಿರ್ಬಂಧಗೊಳಿಸಿದ್ದಾನೆ. ಮಹೋನ್ನತನಾದ ಅವನು ಹೇಳುತ್ತಾನೆ : ಓ ಸತ್ಯವಿಶ್ವಾಸಿಗಳೇ, ಗತ ಪ್ರವಾದಿಗಳ ಅನುಯಾಯಿಗಳಿಗೆ ಕಡ್ಡಾಯಗೊಳಿಸಿದ್ದಂತೆಯೇ ನಿಮ್ಮ ಮೇಲೂ ಉಪವಾಸ ವ್ರತವನ್ನು ಕಡ್ಡಾಯಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ಧರ್ಮನಿಷ್ಠೆಯ ಗುಣವಿಶೇಷಗಳು ಉಂಟಾಗುವುದೆಂದು ಆಶಿಸಲಾಗಿದೆ. (ಕುರ್ಆನ್, 2:183).

ಉಪವಾಸದ ಶಬ್ದಾರ್ಥವು, ಆಹಾರ, ಪಾನೀಯ, ಲೈಂಗಿಕ ಕ್ರಿಯೆ, ಧೂಮಪಾನ ಮತ್ತು ಎಲ್ಲಾ ರೀತಿಯ ಕೆಟ್ಟ ಮತ್ತು ಅರೋಚಕ ವರ್ತನೆ, ಭೌತಿಕವಾದ ಆಸೆ ಆಮಿಷಗಳಿಗೆ ಬಲಿಯಾಗುವುದರಿಂದ ತಮ್ಮನ್ನು ಸಂಪೂರ್ಣವಾಗಿ ತಡೆದಿರಿಸಿಕೊಳ್ಳುವುದೇ ಆಗಿದೆ. ಇಸ್ಲಾಮಿನ ಒಂಬತ್ತನೇ ತಿಂಗಳಾದ ರಮಝಾನ್ ಅವಧಿಯಲ್ಲಿ ಸಂಪೂರ್ಣ ತಿಂಗಳು ಸೂರ್ಯೋದಯದಿಂದ ಸೂರ್ಯಾಸ್ತಮಾನದವರೆಗೆ ಇದೇ ರೀತಿ ವ್ರತ ಆಚರಿಸಬೇಕು. [ರೋಜಾ ಆಚರಿಸುವ ಮುಸ್ಲಿಂ ಸ್ನೇಹಿತನ ದಿನಚರಿ]

ರಮಝಾನ್ ತಿಂಗಳಲ್ಲಿ ನೈಸರ್ಗಿಕ ಬೇಡಿಕೆಗಳನ್ನು ನಿಯಂತ್ರಿಸುವುದರ ಜೊತೆ ದೇವಸಾಮಿಪ್ಯ ಗಳಿಸುವ ಅನುಭವ ಉಪವಾಸಿಗನಿಗೆ ಸಿಗುತ್ತದೆ. ದೈಹಿಕ ವ್ರತದ ಜೊತೆ ನಾಲಗೆಯನ್ನೂ (ಸುಳ್ಳು, ಅಶ್ಲೀಲ ಮಾತುಗಳನ್ನು ತೊರೆಯುವುದು) ಮತ್ತು ಹೃದಯವನ್ನು (ಕೆಟ್ಟ ಭಾವನೆಗಳನ್ನು ವರ್ಜಿಸುವುದು) ಉಪವಾಸ ವ್ರತದಲ್ಲಿ ಪಾಲಿಸಲು ಕರೆ ಕೊಡಲಾಗಿದೆ. ಪ್ರವಾದಿ (ಸ) ಹೇಳಿದ್ದಾರೆ, ಯಾವ ವ್ಯಕ್ತಿ (ಉಪವಾಸದ ಹೊರತಾಗಿಯೂ) ಸುಳ್ಳಾಡುವುದನ್ನು ಮತ್ತು ಅದರಂತೆ ವರ್ತಿಸುವುದನ್ನು ವರ್ಜಿಸುವುದಿಲ್ಲವೋ ಅಂಥವನು ಹಸಿವು ಮತ್ತು ಬಾಯಾರಿಕೆಯಿಂದಿರುವುದು ಅಲ್ಲಾಹನಿಗೇನೂ ಬೇಕಾಗಿಲ್ಲ. [ಬುಖಾರಿ, ಮುಸ್ಲಿಮ್] ರಮಝಾನ್ ತಿಂಗಳಿನಲ್ಲಿ ಪ್ರವಾದಿ ಮುಹಮ್ಮದ್ (ಅವರ ಮೇಲೆ ಶಾಂತಿ ಇರಲಿ) ಆರಾಧನೆಯಲ್ಲಿ ಇನ್ನೂ ಹೆಚ್ಚಾಗಿ ತೊಡಗುತ್ತಿದ್ದರು. ರಾತ್ರಿಯ ವೇಳೆ ಹೆಚ್ಚಿನ ಅವಧಿಯನ್ನು ಆರಾಧನೆಯಲ್ಲಿ ಕಳೆಯುತ್ತಿದ್ದರು. ದಾನ ಧರ್ಮಗಳನ್ನು ಹೆಚ್ಚಾಗಿ ಮಾಡುತ್ತಿದ್ದರು. ರಮಝಾನ್ ಅಧ್ಯಾತ್ಮಿಕತೆಯ ಮಾಸವಾಗಿತ್ತು.

ರಮಝಾನ್ ತಿಂಗಳಿನಲ್ಲಿ ಪ್ರವಾದಿ ತಮ್ಮ ಮೇಲೆ ಅವತೀರ್ಣಗೊಂಡಿದ್ದ ಕುರಾನನ್ನು ದೇವಚರ ಜಿಬ್ರೀಲ್ರಿಗೆ ಕೇಳಿಸುತ್ತಿದ್ದರು. ರಾತ್ರಿ ಇಶಾ ನಮಾಝಿನ ಬಳಿಕ ಹೆಚ್ಚುವರಿ ನಮಾಝ್ ತರಾವೀಹ್ ನಿರ್ವಹಿಸಲಾಗುತ್ತಿತ್ತು. ತರಾವೀಹ್ ನಮಾಝ್ನಲ್ಲಿ ವಿವಿಧ ಇಸ್ಲಾಮೀ ಕರ್ಮ ಶಾಸ್ತ್ರಜ್ಞರ ಪ್ರಕಾರ 8-20 ರಕಅತ್ ನಮಾಝ್ ನಿರ್ವಹಿಸಲಾಗುತ್ತಿತ್ತು. ತರಾವೀಹ್ ನಮಾಝ್ನಲ್ಲಿ ಸಂಪೂರ್ಣ ಕುರಾನ್ ಪಠಿಸಲಾಗುತ್ತದೆ. ಹೆಚ್ಚು ಹೆಚ್ಚಾಗಿ ಜನರು ಅಲ್ಲಾಹನಿಗೆ ಪ್ರಾರ್ಥನೆ ಮಾಡುತ್ತಾರೆ. [ಒಣಹಣ್ಣುಗಳ ಸರದಾರ ರಸಲ್ ಮಾರ್ಕೆಟ್ ಮಹಮ್ಮದ್]

ಹಗಲಿನಲ್ಲಿ ಮುಸ್ಲಿಮರು ಉಪವಾಸ ವ್ರತವನ್ನು ಆಚರಿಸುತ್ತಾರೆ. ಸೂರ್ಯನ ಕಿರಣಗಳು ಇನ್ನೂ ಹೊರಡದಿರುವ ಸಮಯದಿಂದ ಹಿಡಿದು ಸೂರ್ಯಾಸ್ತಮದ ತನಕ ಜನರು ಅನ್ನ, ಪಾನೀಯಗಳನ್ನು ಲೈಂಗಿಕ ಕ್ರಿಯೆಗಳನ್ನು ತೊರೆಯುತ್ತಾರೆ. ನೈಸರ್ಗಿಕ ಬೇಡಿಕೆಗಳನ್ನು ನಿಯಂತ್ರಿಸುವ ಮೂಲಕ ಚಿತ್ತಾಕಾಂಕ್ಷೆಗಳ ಮೇಲೆ ನಿಯಂತ್ರಣ ಸಾಧಿಸಲಾಗುತ್ತದೆ. ಹೀಗೆ ರಮಝಾನ್ ತಿಂಗಳಿನಲ್ಲಿ ಆತ್ಮ ಸಂಸ್ಕರಣೆಯ ತರಬೇತಿ ನಡೆಯುತ್ತದೆ! ಉಪವಾಸ ವ್ರತದ ಆಚರಣೆಯಲ್ಲಿ ಕೇವಲ ಅನ್ನ, ಪಾನೀಯಗಳಿಂದ ದೂರವಿದ್ದರೆ ಸಾಲದು. ಜನರು ಸುಳ್ಳು ಹೇಳುವುದು, ಚಾಡಿ ಹೇಳುವುದು, ವಂಚನೆ ಮಾಡುವುದು ಮೊದಲಾದ ಪಾಪಕಾರ್ಯಗಳಿಂದಲೂ ದೂರವಿರಬೇಕು. ಯಾರು ಉಪವಾಸವಿದ್ದೂ, ಸುಳ್ಳು ಹೇಳುವುದನ್ನು, ವಂಚನೆ ಮಾಡುವುದನ್ನು ತೊರೆಯುವುದಿಲ್ಲವೋ, ಅವರಿಗೆ ಉಪವಾಸ ವ್ರತದ ಯಾವ ಪುಣ್ಯಫಲಗಳೂ ದೊರಕುವುದಿಲ್ಲ.

ರಮಝಾನ್ ತಿಂಗಳಿನಲ್ಲಿ ಹೆಚ್ಚು ದಾನಧರ್ಮಗಳನ್ನು ಮಾಡಲು ಉತ್ತೇಜಿಸಲಾಗಿದೆ. ಈ ತಿಂಗಳಿನಲ್ಲಿ ಮುಸ್ಲಿಮರು ಝಕಾತ್, ಫಿತ್ರ್ ಮೊದಲಾದವುಗಳನ್ನು ಸಂಬಂಧಿಕರಿಗೆ, ಬಡಬಗ್ಗರಿಕೆ ಹಂಚುತ್ತಾರೆ. ಫಿತ್ರ್ ಅನ್ನು ರಮಝಾನ್ ತಿಂಗಳ ಕೊನೆಯಲ್ಲಿ ನೀಡಲಾಗುತ್ತದೆ. ಇದು ಬಡ ಜನರೂ ಸಹ ಹಬ್ಬ ಆಚರಿಸಲು ಸಾಧ್ಯವಾಗುವಂತೆ ಮಾಡಲು ಆಗಿದೆ. ಅಲ್ಲಾಹನ ಸಾಮಿಪ್ಯವನ್ನು ದೀನ, ದಲಿತರ ಸಮೀಪ ಇರುವುದೊಂದಿಗೆ, ಅವರ ಸೇವೆ ಮಾಡುವುದರಿಂದ ಹೊಂದಬಹುದಾಗಿದೆ.

ಹಿಜರಿಶಕೆ 6ರಲ್ಲಿ ಒಂದು ರಾತ್ರಿ ಪ್ರವಾದಿ ಒಂದು ಕನಸು ಕಾಣುತ್ತಾರೆ. ಕನಸಿನಲ್ಲಿ ತಮ್ಮ ತಲೆಕೂದಲನ್ನು ತೆಗೆಸಿರುವುದಾಗಿ ಹಾಗೂ ಸಹಾಬಿಗಳ ಒಂದು ದೊಡ್ಡ ತಂಡವೂ ಹಾಗೆಯೇ ಮಾಡಿರುವುದಾಗಿ ಮತ್ತು ಪ್ರವಾದಿ ತಮ್ಮ ಸಂಗಾತಿಗಳ ಜೊತೆ ಕಅಬಾ ಭವನ ಪ್ರವೇಶಿಸಿದುದಾಗಿ ಕಾಣುತ್ತಾರೆ. ಪ್ರವಾದಿಯ ಕನಸುಗಳು ಅಲ್ಲಾಹನ ವತಿಯಿಂದು ಒಂದು ಸಂಜ್ಞೆ ಅಥವಾ ಸಂದೇಶವಾಗಿರುತ್ತದೆ. ಅವು ಸುಳ್ಳಾಗಿರುವುದಿಲ್ಲ. ಉಪವಾಸ ಅನುಷ್ಠಾನದ ಆಧ್ಯಾತ್ಮಿಕ ಸ್ವರೂಪ ಇಂತಹ ಅಪೂರ್ವವಾದ ಆರಾಧನೆಯನ್ನು ಪರಿಚಯಿಸುವ ಮೂಲಕ ಇಸ್ಲಾಮ್, ಅಪಾರ ಸದ್ಗುಣ ಮತ್ತು ಅತುಲ್ಯ ಲಾಭಗಳನ್ನು ನೀಡುವ ಸಸಿಯನ್ನು ನೆಡುವ ಕಾರ್ಯವನ್ನು ಮಾಡಿದೆ. ಇಸ್ಲಾಮಿನಲ್ಲಿ ಉಪವಾಸ ಅನುಷ್ಠಾನದ ಆಧ್ಯಾತ್ಮಿಕ ಸ್ವರೂಪದ ವಿವರಣೆ ಇಂತಿದೆ. [ಇಸ್ಲಾಂ ಧರ್ಮದ ಐದು ಆಧಾರ ಸ್ತಂಭಗಳು, ರಂಜಾನ್ ನಿಮಿತ್ತ]

1. ಉಪವಾಸವು ಸೃಷ್ಟಿಕರ್ತ ಹಾಗೂ ರಕ್ಷಕನಾಗಿರುವ ಅಲ್ಲಾಹನ ಸೇವೆಯನ್ನು ಮಾಡಲು ಮುಸ್ಲಿಮರನ್ನು ಸಜ್ಜುಗೊಳಿಸುವ ಒಂದು ತಿಂಗಳ ಆಧ್ಯಾತ್ಮಿಕ ತರಬೇತಿಯಾಗಿದೆ. 2. ದೇವನ ಮೇಲಿನ ನಿಜವಾದ ಪ್ರೀತಿಯಿಂದ ಉಪವಾಸ ಆಚರಿಸಲಾಗುತ್ತದೆ. ಉಪವಾಸ ನೈಜ ಪ್ರೀತಿ ಏನೆಂಬುವುದನ್ನು ತೋರಿಸುತ್ತದೆ. ನಿಜವಾಗಿ ದೇವನನ್ನು ಪ್ರೀತಿಸುವವನಿಗೆ ಅದರ ಅರ್ಥ ತಿಳಿಯುತ್ತದೆ. 3. ದೇವನನ್ನು ಒಲಿಸಿಕೊಳ್ಳುವ ಹಾಗೂ ಆತನ ಕೃಪೆಗೆ ಒಳಗಾಗುವ ಉದ್ದೇಶದಿಂದ ಉಪವಾಸ ಆಚರಿಸಲಾಗುತ್ತದೆ. ಆದ್ದರಿಂದಲೇ ಉಪವಾಸ ಜೀವನದಲ್ಲಿ ಹೊಸ ಆಶಾಕಿರಣ ಮತ್ತು ಸಕಾರಾತ್ಮಕ ಒಳನೋಟ ಮೂಡಿಸುತ್ತದೆ. 4. ಉಪವಾಸ ಮಾನವನಲ್ಲಿ ಜಾಗೃತಿ ಮತ್ತು ಆರೋಗ್ಯಕರ ಮನಸಾಕ್ಷಿಯನ್ನು ಬೆಳೆಸುತ್ತದೆ. ಯಾಕೆಂದರೆ ಉಪವಾಸವನ್ನು ರಹಸ್ಯವಾಗಿಯೂ, ಸಾರ್ವಜನಿಕವಾಗಿಯೂ ಆಚರಿಸಲಾಗುತ್ತದೆ. ಉಪವಾಸದ ಸಂದರ್ಭದಲ್ಲಿ ಒಬ್ಬಾತನ ಗುಣನಡತೆಯನ್ನು ಪರಿಶೀಲಿಸಲು ಅಥವಾ ಉಪವಾಸ ಹಿಡಿಯುವಂತೆ ಒತ್ತಾಯಿಸಲು ಯಾರಿಗೂ ಅಧಿಕಾರ ಇಲ್ಲ. ದೇವನನ್ನು ಒಲಿಸಿಕೊಳ್ಳಲು ಮತ್ತು ತನ್ನ ಸ್ವಂತ ಮನಸಾಕ್ಷಿಯ ತೃಪ್ತಿಗಾಗಿ ಆತ ರಹಸ್ಯವಾಗಿಯೂ, ಸಾರ್ವಜನಿಕವಾಗಿಯೂ ಉಪವಾಸ ಆಚರಿಸುತ್ತಾನೆ. ಮನುಷ್ಯನಲ್ಲಿ ಉತ್ತಮ ಮನಸಾಕ್ಷಿ ಬೆಳೆಸಲು ಇದಕ್ಕಿಂತ ಉತ್ತಮ ಮಾರ್ಗ ಬೇರೆ ಇಲ್ಲ. 5. ಉಪವಾಸವು ಸ್ವಾರ್ಥ, ಅತಿಯಾಸೆ ಮತ್ತು ಸೋಮಾರಿತನವನ್ನು ನಿವಾರಿಸಿ ಸ್ವಯಂ ನಿಯಂತ್ರಣ ಉಂಟು ಮಾಡುತ್ತದೆ. 6. ನಮಗೆ ಹಸಿವು ಮತ್ತು ಬಾಯಾರಿಕೆಯ ಅನುಭವವನ್ನು ಕಲಿಸುತ್ತದೆ. ಹಸಿವೆಯ ತೀವ್ರತೆಯನ್ನು ನಾವು ಉಪವಾಸದ ಮೂಲಕ ಅರ್ಥ ಮಾಡಿಕೊಳ್ಳಬಹುದಾಗಿದೆ. ಪ್ರತಿನಿತ್ಯ ಹಸಿವೆಯಿಂದ ಬಳಲುವ ಲಕ್ಷಾಂತರ ಬಡವರ ಮತ್ತು ನತದೃಷ್ಟ ಜನರ ಪರಿಸ್ಥಿತಿ ಹೇಗಿರಬಹುದು ಎಂಬುವುದನ್ನು ಅರಿತುಕೊಳ್ಳಬಹುದಾಗಿದೆ. 7. ಉಪವಾಸವು ಮಾನವನಿಗೆ ಪಾರದರ್ಶಕವಾದ ಆತ್ಮ, ಆಲೋಚಿಸಲು ಶುಭ್ರವಾದ ಮನಸ್ಸು, ಅತ್ತಿತ್ತ ಚಲಿಸಿ ಕಾರ್ಯನಿರ್ವಹಿಸಲು ಹಗುರವಾದ ದೇಹವನ್ನು ಸಜ್ಜುಗೊಳಿಸುತ್ತದೆ. ಖಾಲಿ ಹೊಟ್ಟೆಯಲ್ಲಿರುವುದು ಈ ಎಲ್ಲಾ ಫಲಿತಾಂಶಗಳನ್ನು ನೀಡುತ್ತದೆ. ವೈದ್ಯಕೀಯ ಸಲಹೆಗಳು, ಜೀವಶಾಸ್ತ್ರದ ನಿಯಮಗಳು ಮತ್ತು ಬೌದ್ಧಿಕ ಅನುಭವಗಳು ಇದನ್ನು ಪುಷ್ಟೀಕರಿಸುತ್ತದೆ.

8. ಉಪವಾಸವು ಸಾಮಾಜಿಕ ಬದ್ಧತೆಯ ಸ್ಫೂರ್ತಿಯನ್ನು, ಐಕ್ಯತೆ ಮತ್ತು ಸಹೋದರತೆಯನ್ನು, ದೇವನ ಮುಂದೆ ಹಾಗೂ ಆತನ ಕಾನೂನಿನ ಎದುರು ಎಲ್ಲರೂ ಸಮಾನರು ಎಂಬ ಭಾವನೆಯನ್ನು ಉಂಟು ಮಾಡುತ್ತದೆ. ತಾನು ಉಪವಾಸ ಮಾಡುವ ಮೂಲಕ ಇಡೀ ಮುಸ್ಲಿಮ್ ಜಗತ್ತಿನ ಭಾಗವಾಗಿದ್ದೇನೆ. ಎಲ್ಲರೂ ಒಂದೇ ಕಾರ್ಯವನ್ನು, ಸಮಾನ ರೀತಿಯಲ್ಲಿ ಮತ್ತು ಒಂದೇ ಸಮಯದಲ್ಲಿ ಹಾಗೂ ಒಂದೇ ಉದ್ದೇಶದಿಂದ ಮಾಡುತ್ತಿದ್ದೇವೆ ಎಂಬುದು ಈ ಭಾವನೆಯನ್ನು ಮೂಡಿಸುತ್ತದೆ.

ಲೇಖಕರು:- ಸಿಸಿಲ್ ಸೋಮನ್

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655

Leave a Reply

Your email address will not be published. Required fields are marked *