ರಾಜಕೀಯ ಪ್ರಭಾವವಿರುವ ಪುಡಾರಿಗಳು ಪೊಲೀಸರೊಂದಿಗೆ ತೆರಳಿ ದೌರ್ಜನ್ಯ – ಮಾಜಿ ಸಚಿವರಾದ ಹೆಚ್.ಹಾಲಪ್ಪ.

ಸಾಗರ:ರಾಜಕೀಯ ಪ್ರಭಾವವಿರುವ ಪುಡಾರಿಗಳು ಪೊಲೀಸರೊಂದಿಗೆ ತೆರಳಿ ದೌರ್ಜನ್ಯ – ಮಾಜಿ ಸಚಿವರಾದ ಹೆಚ್.ಹಾಲಪ್ಪ.

ಇಂದು (05-06-2023) ಮಾಜಿ ಸಚಿವರಾದ ಹೆಚ್.ಹಾಲಪ್ಪ ನವರು,

ಹಿರೇಬಿಲಗುಂಜಿ ಗ್ರಾ.ಪಂ, ಸಂಪಳ್ಳಿ ಕೋಟೆಕೊಪ್ಪ ಗ್ರಾಮದ ಬಡ ರೈತ ಕುಟುಂಬದ ಶ್ರೀಮತಿ ಪ್ರೇಮ ಕೋಂ ಬಸವರಾಜ್ ರವರ ಸ್ವಾಧೀನದಲ್ಲಿದ್ದ ಜಮೀನನ್ನು ರಾಜಕೀಯ ಪ್ರಭಾವವಿರುವ ಪುಡಾರಿಗಳು ಪೊಲೀಸರೊಂದಿಗೆ ತೆರಳಿ ದೌರ್ಜನ್ಯದಿಂದ ಕಬಳಿಸಲು ಹೋಗಿದ್ದರಿಂದ ಆತಂಕಕ್ಕೊಳಗಾಗಿ ವಿಷ ಸೇವಿಸಿ, ಸಾಗರ ಉಪವಿಭಾಗೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಹಿಳೆಯ ಯೋಗಕ್ಷೇಮ ವಿಚಾರಿಸಿ, ಆತ್ಮಸ್ಥೈರ್ಯ ತುಂಬಿ, ಸೂಕ್ತ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿದರು.

ನಂತರದೌರ್ಜನ್ಯ ಖಂಡಿಸಿ, ಪ್ರತಿಭಟನಾ ಮೆರವಣಿಗೆ ಮೂಲಕ AC ಕಛೇರಿಗೆ ಭೇಟಿ ನೀಡಿ, ಬಡ ರೈತ ಕುಟುಂಬಕ್ಕೆ ಸೂಕ್ತ ರಕ್ಷಣೆ ಒದಗಿಸಿ, ತಪ್ಪಿತಸ್ಥರ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿದ AC ಮತ್ತು DYSP ಯವರು, ತಪ್ಪಿತಸ್ಥ ಪೊಲೀಸರ ವಿರುದ್ಧ ಇಲಾಖಾ ಕ್ರಮ ಕೈಗೊಂಡು, ಮಹಿಳೆಯ ಕುಟುಂಬಕ್ಕೆ ರಕ್ಷಣೆ ಜೊತೆಗೆ ಸಾಗುವಳಿ ಮಾಡಿಕೊಳ್ಳಲು ಅವಕಾಶ ನೀಡುವ ಬಗ್ಗೆ ಭರವಸೆ ನೀಡಿದರು.
ಮಹಿಳೆಯ ಕುಟುಂಬಸ್ಥರು, ಗ್ರಾಮಸ್ಥರು, ಚುನಾಯಿತ ಪ್ರತಿನಿಧಿಗಳು, ಪಕ್ಷದ ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

FacebookTwitterLinkedInWhatsApp

Leave a Reply

Your email address will not be published. Required fields are marked *