ಕೇವಲ ಮೋದಿ ಎಂಬ ಉಪನಾಮವನ್ನು ಟೀಕೆ ಮಾಡಿದಕ್ಕೆ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಸ್ವಹಃ

ಬೆಂಗಳೂರು: ಕೇವಲ ಮೋದಿ ಎಂಬ ಉಪನಾಮವನ್ನು ಟೀಕೆ ಮಾಡಿದಕ್ಕೆ ರಾಹುಲ್ ಗಾಂಧಿ ಲೋಕಸಭಾ ಸದಸ್ಯತ್ವ ಸ್ವಹಃ

ಪ್ರಧಾನಿ ನರೇಂದ್ರ ಮೋದಿಯವರನ್ನು ಟೀಕಿಸುವ ಭರದಲ್ಲಿ ‘ಮೋದಿ ಎಂಬ ಉಪನಾಮ ಹೊಂದಿದವರೆಲ್ಲ ಕಳ್ಳರು’ ಎಂದು ರಾಹುಲ್ ಗಾಂಧಿ ಭಾಷಣದಲ್ಲಿ ಹೇಳಿದ್ದರಿಂದ ಅವರಿಗೆ ಸೂರತ್ ಜಿಲ್ಲಾ ನ್ಯಾಯಾಲಯ ಎರಡು ವರ್ಷ ಜೈಲು ಶಿಕ್ಷೆ ನೀಡಿತ್ತು. ಮೋದಿ ಎಂಬ ಉಪನಾಮ ಹೊಂದಿದ್ದ ಬಿಜೆಪಿ ಶಾಸಕರೊಬ್ಬರು ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ಎದುರಿಸುವಲ್ಲಿ ರಾಹುಲ್ ಗಾಂಧಿ ಸೋತು ದೋಷಿ ಎನಿಸಿಕೊಂಡಿದ್ದರು.

ರಾಹುಲ್ ಗಾಂಧಿಗೆ ಜಾಮೀನು ದೊರೆತಿದ್ದು, ಅವರು ಲೋಕಸಭೆಯ ಸದಸ್ಯತ್ವವನ್ನು ಕಳೆದುಕೊಂಡಿದ್ದಾರೆ. ಗುಜರಾತ್‌ನ ಸೂರತ್ ಕೋರ್ಟ್‌ನಿಂದ ದೋಷಿ ಎಂದು ಸಾಬೀತಾದ ನಂತರ ರಾಹುಲ್ ಗಾಂಧಿಯನ್ನು ಲೋಕಸಭೆಯಲ್ಲಿ ಅನರ್ಹಗೊಳಿಸಲಾಗಿದೆ. ಮಾರ್ಚ್ 23 ರಿಂದ ಲೋಕಸಭಾ ಸದಸ್ಯರಾಗಿ (MP) ಅನರ್ಹಗೊಳಿಸಿ ಲೋಕಸಭಾ ಕಾರ್ಯದರ್ಶಿ ಉತ್ಪಲ್ ಕುಮಾರ್ ಆದೇಶ ಹೊರಡಿಸಿದ್ದಾರೆ. 2019ರಲ್ಲಿ ಮೋದಿ ಎಂಬ ಮನೆತನದ ಹೆಸರಿಗೆ ಅಪಮಾನವಾಗುವಂಥ ಹೇಳಿಕೆಯನ್ನು ರಾಹುಲ್ ಗಾಂಧಿ ನೀಡಿದ್ದು, ಮಾನನಷ್ಟ ಮೊಕದ್ದಮೆ ದಾಖಲಾಗಿತ್ತು.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ಮನೆ ನಿರ್ಮಾಣ ಮಾಡಿಕೊಡುವ ಸಾಗರದ ಪ್ರಪಥಮ ಕನ್ಸ್ಟ್ರಕ್ಷನ್ ಕಂಪನಿ ಸಿಮ್- ಟೆಕ್ ಇಂಟರ್ನಷನಲ್. ಸಂಪರ್ಕಿಸಿ:- MOB: 9880432555, Off: 08183226655

Leave a Reply

Your email address will not be published. Required fields are marked *