
ಕಲಬುರಗಿ : ಪಿಎಸ್ಐ ಅಕ್ರಮ ಪ್ರಕರಣ ! ಕಿಂಗ್ಪಿನ್ ರುದ್ರಗೌಡ ಪಾಟೀಲ್ ಸೇರಿ ಐವರ ಮನೆ ಮೇಲೆ ಈಡಿ ದಾಳಿ.
ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಕಿಂಗ್ಪಿನ್ಗಳು ಮತ್ತು ಮಧ್ಯವರ್ತಿಗಳ ಮನೆಗಳಲ್ಲಿ ಈಡಿ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದ ರುದ್ರಗೌಡ ಪಾಟೀಲ್ ಮತ್ತು ಅವರ ಸಹೋದರ ಮಹಾಂತೇಶ್ ಪಾಟೀಲ್, ಕಾಶಿನಾಥ್ ಚಿಲ್, ಮಂಜುನಾಥ ಮೇಳಕುಂದಿ, ಸೇರಿ ಐವರ ಮನೆ ಮೇಲೆ ನಿನ್ನೆ (ಜ. 19) ದಾಳಿ ಮಾಡಿ ಶೋಧ ನಡೆಸಿದೆ.
ಬೆಂಗಳೂರು ಮತ್ತು ಹೈದ್ರಾಬಾದ್ನಿಂದ ಬಂದಿದ್ದ 25 ಈಡಿ ಅಧಿಕಾರಿಗಳ ತಂಡ ಹಣದ ಮೂಲದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮದಲ್ಲಿ ಕೋಟ್ಯಂತರ ರೂ. ಅವ್ಯವಹಾರದ ಬಗ್ಗೆ ಸಿಐಡಿ ಈಡಿ ಗಮನಕ್ಕೆ ತಂದಿತ್ತು. ಆ ಬೆನ್ನಲ್ಲೇ ಆರೋಪಿಗಳಿಗೆ ಜಾಮೀನು ಸಿಗುವವರೆಗೂ ಕಾದಿದ್ದ ಇಡಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದ್ದಾರೆ.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.