ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ

ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಹಾಗೂ ಮೈಸೂರಿನ ಎಲ್ಲಾ ಕಲಾ ಬಳಗಗಳ ಒಕ್ಕೂಟದಿಂದ
ಇಂದು ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ.
ಪಾರಂಪರಿಕ ದಸರಾ ಉತ್ಸವಗಳಲ್ಲಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಜರಗುವ ಸಂಗೀತ ಕಾರ್ಯಕ್ರಮಗಳಲ್ಲಿ ಕರೋಕೆಯನ್ನು ನಿಷೇಧಿಸಿ ಎಂದು ಪ್ರತಿಭಟನೆ ನಡೆಸಲಾಯಿತು
ಈ ಸಂದರ್ಭದಲ್ಲಿ ಮೈಸೂರು ಆರ್ಟಿಸ್ಟ್ ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿಯಾದ ಗುರುದತ್ ರವರು ಮಾತನಾಡಿ ಮೈಸೂರು ದಸರಾ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು ಈ ದಸರಾ ಸಂದರ್ಭದಲ್ಲಿ ಅನೇಕ ವೇದಿಕೆಗಳಲ್ಲಿ ಕರೋಕೆಯನ್ನು ಬಳಸುತ್ತಿದ್ದಾರೆ ಯುವ ದಸರಾ ಯುವ ಸಂಭ್ರಮ ಅರಮನೆ ವೇದಿಕೆ ಮತ್ತು ಇನ್ನಿತರ ಮುಖ್ಯ ವೇದಿಕೆಗಳಲ್ಲಿಯೇ ಕರೋಕೆಯನ್ನು ಬಳಸುತ್ತಿರುವುದು ಖಂಡನೀಯವಾಗಿದೆ
ಈ ಕರೋಕೆ ಬಳಕೆಯಿಂದ ಮೈಸೂರಿನ ಪಾರಂಪರಿಕ ಇತಿಹಾಸವನ್ನು ಹಾಳುಮಾಡುತ್ತಿರುವಂತಾಗಿದೆ …
ಇದು ಸಾಂಸ್ಕೃತಿಕ ನಗರ ಮೈಸೂರಿಗೆ ಹಾಗೂ ನಾಡಹಬ್ಬ ದಸರಾ ಗೆ ಮಾಡುವ ಅತಿ ದೊಡ್ಡ ಅನ್ಯಾಯವಾಗಿದು ಕಳಂಕ ತಂದೊಡ್ಡಿದೆ..ಇದರೊಂದಿಗೆ ನೈಜ ಕಲಾವಿದರು ಗಳಿಗೆ ಅನ್ಯಾಯ ಮಾಡಿದಂತಾಗುತ್ತಿದೆ
ಹಾಗೂ ದಸರಾ ಕಾರ್ಯಕ್ರಮಗಳಲ್ಲಿ ಮೈಸೂರಿನ ಪ್ರತಿಭೆಗಳಿಗೆ ಹಾಗೂ ಕಲಾವಿದರು ಗಳಿಗೆ ಅವಕಾಶ ನೀಡದೆ ಇರುವುದು ಕಂಡನೀಯವಾಗಿದೆ ಎಂದು ತಿಳಿಸಿದರು ಅಧ್ಯಕ್ಷರಾದ ರಘುನಾಥ್ ಅವರು ಮಾತನಾಡಿ
ನೂರಾರು ವರ್ಷಗಳಿಂದ ನಡೆಯುತ್ತಾ ಬಂದಿರುವ ದಸರಾ ಕಾರ್ಯಕ್ರಮಗಳಲ್ಲಿ ಮೈಸೂರಿನ ಸ್ಥಳಿಯ ಕಲಾವಿದರು ಗಳಿಗೆ ಅವಕಾಶ ನೀಡದೆ ಇರುವುದು ಮೈಸೂರಿನ ಕಲಾವಿದರಿಗೆ ಮಾಡುತ್ತಿರುವ ಅತಿ ದೊಡ್ಡ ಅನ್ಯಾಯವಾಗಿದೆ ..
ಮೈಸೂರಿನ ಉನ್ನತ ವೇದಿಕೆಗಳಲ್ಲಿ ಕರೋಕೆಯನ್ನು ಬಳಸಿ ಕಾರ್ಯಕ್ರಮವನ್ನು ಮಾಡುತ್ತಿರುವುದು .. ಮಾಡಲು ಅವಕಾಶ ನೀಡುತ್ತಿರುವುದು ಎಷ್ಟರಮಟ್ಟಿಗೆ ಸರಿ .. ಸರ್ಕಾರದ ವತಿಯಿಂದಲೇ ಕರೋಕೆಯನ್ನು ರದ್ದು ಮಾಡಬೇಕಾಗಿದೆ.. ಹಾಗೂ ದಸರಾ ಕಾರ್ಯಕ್ರಮಗಳನ್ನು ಇವೆಂಟ್ ಮ್ಯಾನೇಜ್ಮೆಂಟ್ ಗೆ ವಹಿಸುತ್ತಿರುವುದು ತಪ್ಪು ಇದರಿಂದ ಎಲ್ಲ ಕಲಾವಿದರು ಗಳಿಗೆ ಹಾಗೂ ಮೈಸೂರಿನ ಧ್ವನಿವರ್ಧಕದವರಿಗೆ ವೇದಿಕೆ ಸಿದ್ಧಪಡಿಸುವವರಿಗೆ ಹಾಗೂ ಅನೇಕ ಜನರಿಗೆ ಇದು ಮಾರಕವಾಗಿದ್ದು ಅನ್ಯಾಯವಾಗುತ್ತಿದೆ ಎಂದರು. ಮೈಸೂರಿನ ಎಲ್ಲಾ ಕಲಾ ಬಳಗದ ಒಕ್ಕೂಟದಿಂದ ಎಲ್ಲಾ ಕಲಾವಿದರು ಮಮ್ಮತದಿಂದ ಸೇರಿ ದಸರಾ ಸಂಗೀತ ಕಾರ್ಯಕ್ರಮದಲ್ಲಿ ಹಾಗೂ ಸಂಸ್ಕೃತಿ ಇಲಾಖೆ ನಡೆಸುವ ಸಂಗೀತ ಕಾರ್ಯಕ್ರಮದಲ್ಲಿ ಕರೋಕೆಯನ್ನು ನಿಷೇಧಿಸಿ ಎಂದು ಒಮ್ಮತದಿಂದ ಘೋಷಣೆಗಳನ್ನು ಕೂಗಿದರು ..ಸ್ಥಳದಲ್ಲಿ ಕಲಾವಿದರುಗಳಾದ ರಘುನಾಥ್, ಗುರುದತ್, ಷಣ್ಮುಗ ಸಜ್ಜಾ , ರೋಶನ್ ಸೂರ್ಯ , ರಾಜೇಶ್ ಪಡಿಯಾರ್ , ರವಿಕಿರಣ್ , ಬಾಲಣ್ಣ , ಸೌಭಾಗ್ಯ ಪ್ರಭು, ವಿನ್ಸೆಂಟ್ , ಪ್ರದೀಪ್ ಗಾಂಧಿನಗರ, ಪ್ರದೀಲ್ ಕಿಗ್ಗಾಲ್, ರಾಮಚಂದ್ರು, ಸಂತೋಷ್, ಜಗದೀಶ್ , ನಾಗಲಿಂಗೇಶ್ , ಪೃಥ್ವಿ, ರವಿಕುಮಾರ್ ಸಾಕ್ಸೊಪೋನ, ಬಾಬು
ಮತ್ತಿತರರು ಹಾಜರಿದ್ದರು

ವರದಿ: ನಂದಿನಿ ಮೈಸೂರು

Leave a Reply

Your email address will not be published. Required fields are marked *