ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕನ್ನಡ ತಂತ್ರಾಂಶ ಅಭಿವೃದ್ಧಿ ಅಗತ್ಯ.

ಮೈಸೂರು: ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕನ್ನಡ ತಂತ್ರಾಂಶ ಅಭಿವೃದ್ಧಿ ಅಗತ್ಯ ಬೇಳೂರು ಸುದರ್ಶನ.

ಮೈಸೂರು,ಫೆ.೨೭ ರಾಜ್ಯ ಸರ್ಕಾರ ಸಮುದಾಯದ ಜೊತೆಗೆ ಕನ್ನಡವನ್ನು ಅಭಿವೃದ್ಧಿ ಪಡಿಸುವಂತಹ ತಂತ್ರಾಂಶಗಳನ್ನು ರೂಪಿಸುವ ಕೆಲಸವನ್ನು ಮಾಡಬೇಕು. ಕಾರಣ ಜ್ಞಾನ ಮತ್ತು ತಂತ್ರಜ್ಞಾನ ಎರಡು ಒಟ್ಟಿಗೆ ಹೋಗಬೇಕು. ಜ್ಞಾನದ ಸಹಾಯವಿಲ್ಲದೆ ತಂತ್ರಜ್ಞಾನ ಬೆಳೆಯುವುದು ಕಷ್ಟಕರವಾಗುತ್ತದೆ. ಇದರಿಂದ ಕನ್ನಡ ಬೆಳವಣಿಯೂ ಕಂಡುಬಂದರೆ ಸಮುದಾಯದ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳ ಇ ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ ಅವರು ತಿಳಿಸಿದರು. ನಗರ ಆಡಳಿತ ತರಬೇತಿ ಸಂಸ್ಥೆಯಲ್ಲಿ ಸೋಮವಾರ ರಾಜ್ಯ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಇ-ಆಡಳಿತ ಕೇಂದ್ರ ಆಯೋಜಿಸಿದ್ದ ಇ-ಕನ್ನಡ ಕಮ್ಮಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ತಂತ್ರಜ್ಞಾನ ಬೆಳೆದರೆ ಜ್ಞಾನವು ಬೆಳೆಯುತ್ತದೆ. ಇವೆರಡು ಒಂದೇ ನಾಣ್ಯದ ಎರಡು ಮುಖಗಳು. ಇದರ ಜೊತೆಗೆ ಕನ್ನಡವು ಬೆಳವಣಿಗೆ ಆಗಬೇಕು ಹಾಗೂ ಕನ್ನಡ ತಂತ್ರಜ್ಞಾನ ಎಲ್ಲರ ಕೈಗೂ ಸಿಗಬೇಕು. ಈ ಹಿನ್ನೆಲೆಯಲ್ಲಿ ೨೦೧೯ರ ನವೆಂಬರ್‌ನಲ್ಲಿ ಕನ್ನಡ ತಂತ್ರಜ್ಞ ಆಸಕ್ತರ ಸಭೆಯನ್ನು ಬೆಂಗಳೂರಿನಲ್ಲಿ ಅಂದಿನ ಅಧ್ಯಕ್ಷರಾದ ಟಿ.ಎಸ್.ನಾಗಭರಣ ಅವರ ಅಧ್ಯಕ್ಷತೆಯಲ್ಲಿ ಇದೆ ಮಾದರಿಯಲ್ಲಿ ಸಭೆ ಮಾಡಿ ಚರ್ಚಿಲಾಗಿತ್ತು ಎಂದು ಮಾಹಿತಿ ನೀಡಿದರು. ಕನ್ನಡದ ಅಭಿವೃದ್ಧಿಗಾಗಿ ಸ್ವಯಂ ಸೇವಕರಾಗಿ ಕೆಲಸ ಮಾಡುವವರು ಇದ್ದು, ಇವರು ಕನ್ನಡ ಅಭಿವೃದ್ಧಿಗಾಗಿ ಕನ್ನಡ ತಂತ್ರಾಜ್ಞಾನವನ್ನು ಬೆಳೆಸಿದಂತಹ ಅನೇಕ ವ್ಯಕ್ತಿಗಳು ಬಹಳಷ್ಟು ಮಂದಿ ನಮ್ಮ ನಿಮ್ಮ ನಡುವೆಯೇ ಇದ್ದಾರೆ. ಡಿಜಿಟಲ್ ವೇದಿಕೆಗಳಲ್ಲಿ ಕನ್ನಡ ಬೆಳೆಯಬೇಕು. ಪ್ರಕಾಶನ ರಂಗವೂ ಸಹ ಇದರಲ್ಲಿ ಕೈ ಜೋಡಿಸಬೇಕು. ಇವರು ತಂತ್ರಜ್ಞಾವನ್ನು ಬಿಟ್ಟು ಕೆಲಸ ಮಾಡಿದರೆ ಮತ್ತೆ ಹೊಸ ಸಮಸ್ಯೆಗಳು ಉದ್ಬವವಾಗುತ್ತದೆ. ಪ್ರಕಾಶನ ರಂಗದಲ್ಲಿ ಇ-ಬುಕ್ ತಂತ್ರಜ್ಞಾನ ಬೆಳೆಬಹುದು ಎಂದು ಹೇಳಿದರು. ಇ-ಕನ್ನಡ ಯೋಜನೆಯ ಯೋಜನಾ ನಿರ್ದೇಶಕರಾದ ಹೆಚ್.ಎಲ್.ಪ್ರಭಾಕರ್ ಅವರು ಮಾತನಾಡಿ, ಇಂತಹ ಯೋಜನೆಗಳನ್ನು ಸಮುದಾಯದ ಮಟ್ಟಕ್ಕೆ ತಲುಪಿಸಬೇಕು. ಮೊದಲನೆ ಹಂತದಲ್ಲಿ ಭಾಷೆ ಹಾಗೂ ತಂತ್ರಜ್ಞಾನದ ಬಗ್ಗೆ ಪ್ರೌಢತ್ವ ಇರುವವರನ್ನು ಸೇರಿಸಿಕೊಂಡು ಕನ್ನಡದ ಅಭಿವೃದ್ಧಿಗಾಗಿ ಹಾಗೂ ಕನ್ನಡದ ತಂತ್ರಜ್ಞಾನದ ಅಭಿವೃದ್ಧಿಗಾಗಿ ಒಂದು ಚೌಕಟ್ಟನ್ನು ರೂಪಿಸುವಂತಹ ಕೆಲಸ ಮಾಡಬೇಕು ಎಂದು ಹೇಳಿದರು. ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷಾಂತರವನ್ನು ಗೂಗಲ್ ಮೂಲಕ ಭಾಷಾಂತರ ಮಾಡಲಾಗುತ್ತಿದೆ. ಇದಕ್ಕಾಗಿ ಒಂದು ಸೂಕ್ತವಾದ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಕನ್ನಡದಲ್ಲಿ ಮಾಹಿತಿಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ಹೀಗಾಗಿ ಸೂಕ್ತವಾದ ಸಲಹೆಗಳು ಬಂದರೆ ಕನ್ನಡವನ್ನು ಹಾಗೂ ಕನ್ನಡಕ್ಕೆ ಸಂಬಂಧಪಟ್ಟಂತಹ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಸಹಾಯಕವಾಗುತ್ತದೆ ಎಂದರು. ಸಭೆಯಲ್ಲಿ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿದಾನಂದ ಗೌಡ, ಸರ್ಕಾರದ ಕಾರ್ಯದರ್ಶಿಗಳಾದ ಪೊನ್ನುರಾಜ್ ಸೇರಿದಂತೆ ಇತರರು ಹಾಜರಿದ್ದರು.

Leave a Reply

Your email address will not be published. Required fields are marked *