ಪಿರಿಯಾಪಟ್ಟಣ: ಸ್ವಾರ್ಥತೆ ಇಲ್ಲದೆ ಯಾರು ಮತ್ತೊಬ್ಬರಿಗಾಗಿ ಕೆಲಸ ಮಾಡುತ್ತಾರೋ ಅಂತಹವರ ಹೆಸರು ಚಿರಸ್ಥಾಯಿ.
ಸ್ವಾರ್ಥತೆ ಇಲ್ಲದೆ ಯಾರು ಮತ್ತೊಬ್ಬರಿಗಾಗಿ ಕೆಲಸ ಮಾಡುತ್ತಾರೋ ಅಂತಹವರ ಹೆಸರು ಚಿರಸ್ಥಾಯಿಯಾಗಿರುತ್ತದೆ ಎಂದು ರೋಟರಿ 3181 ಜಿಲ್ಲೆಯ ಜಿಲ್ಲಾ ಗವರ್ನರ್ ರೋ.ಪ್ರಕಾಶ್ ಕಾರಂತ್ ಅಭಿಪ್ರಾಯಪಟ್ಟರು.
ಪಟ್ಟಣದ ಶ್ರೀ ಮಂಜುನಾಥ ಸಮುದಾಯ ಭವನದಲ್ಲಿ ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಉದ್ಘಾಟನೆ ಮಾಡಿ ಅವರು ಮಾತನಾಡಿದರು, ಪ್ರತಿಯೊಬ್ಬರು ಕೂಡ ಸಮಾಜದಲ್ಲಿ ಅವರ ಕರ್ತವ್ಯ ಮತ್ತು ಬದ್ಧತೆ ಪಾಲಿಸುವ ಅಗತ್ಯವಿದೆ, 36 ಸದಸ್ಯರನ್ನು ಹೊಂದುವ ಮೂಲಕ ನೂತನ ರೋಟರಿ ಸಂಸ್ಥೆ ಆರಂಭಿಸಿರುವುದು ಶ್ಲಾಘನೀಯ ಎಂದರು.
ರೋಟರಿ 3181 ಜಿಲ್ಲೆಯ ನಿಯೋಜಿತ ಜಿಲ್ಲಾ ಗವರ್ನರ್ ರೋ.ಎಚ್.ಆರ್ ಕೇಶವ ಅವರು ಮಾತನಾಡಿ ನಮ್ಮಲ್ಲಿ ವೈಯಕ್ತಿಕ ಹಿತಾಸಕ್ತಿ ಮತ್ತು ಸ್ವಾರ್ಥತೆ ಇಲ್ಲದಿದ್ದರೆ ನಾವು ಏನನ್ನಾದರೂ ಸಾಧಿಸಬಹುದು ಎಂಬುದು ರೋಟರಿಯ ಧ್ಯೇಯವಾಗಿದೆ ಎಂದರು.
ಶಾಸಕ ಕೆ.ಮಹದೇವ್ ಅವರು ಮಾತನಾಡಿ ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎನ್ನುವ ಮನೋಭಾವ ಮೂಡಿಸಿಕೊಂಡಲ್ಲಿ ಸೇವಾಪರ ಚಟುವಟಿಕೆಗಳು ಹೆಚ್ಚಲಿದೆ ಎಂದರು.
ಕಾರ್ಯಕ್ರಮದಲ್ಲಿ ತಾಲ್ಲೂಕಿನ ವಿವಿಧ ಕ್ಷೇತ್ರಗಳಲ್ಲಿ ತಮ್ಮ ವಿಶಿಷ್ಟವಾದ ಸೇವಾ ಚಟುವಟಿಕೆಗಳಿಂದ ಗುರುತಿಸಲ್ಪಟ್ಟಿರುವ ಐದು ಮಂದಿ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ರೋಟರಿ ಮೆಂಬರ್ ಶಿಪ್ ಡೆವಲಪ್ ಮೆಂಟ್ ಚೇರ್ಮನ್ ಗಳಾದ ಪಿ.ಕೆ ರವಿ, ಸುರೇಂದ್ರ ಕಿಣಿ, ನೂತನ ಕ್ಲಬ್ ಸಲಹೆಗಾರ ಡಾ. ಕೆ.ಎನ್ ಚಂದ್ರಶೇಖರ್, ವಲಯ 6 ರ ಸಹಾಯಕ ಗವರ್ನರ್ ಗಳಾದ ಅರುಣ್.ಬಿ.ನರಗುಂದ್, ರತನ್ ತಮ್ಮಯ್ಯ, ಎಸ್.ಕೆ.ಸತೀಶ್, ವಲಯ ಸೇನಾನಿ ನೆವಿನ್, ಗೋಣಿಕೊಪ್ಪ ರೋಟರಿ ಅಧ್ಯಕ್ಷೆ ಜೆ.ಕೆ ಸುಭಾಷಿಣಿ, ರೋಟರಿ ಪಿರಿಯಾಪಟ್ಟಣ ಐಕಾನ್ಸ್ ಅಧ್ಯಕ್ಷ ಕೆ.ರಮೇಶ್ ಮಾತನಾಡಿದರು.
ಈ ಸಂದರ್ಭ ಗೋಣಿಕೊಪ್ಪ ರೋಟರಿ ಕಾರ್ಯದರ್ಶಿ ಅರುಣ್ ತಮ್ಮಯ್ಯ, ಪಿರಿಯಾಪಟ್ಟಣ ರೋಟರಿ ಐಕಾನ್ ಕಾರ್ಯದರ್ಶಿ ಪಿ.ಎಸ್ ಹರೀಶ್, ವಿವಿಧ ವಿಭಾಗದ ಪದಾಧಿಕಾರಿಗಳಾದ ಜೆ.ಎಸ್ ನಾಗರಾಜ್, ಎಂ.ಬಿ ಸಂಪತ್, ಬಿ.ಆರ್ ಗಣೇಶ್, ಸಿ.ಎನ್ ವಿಜಯ್, ಬಿ.ಎಂ ಕುಮಾರ್, ಪಿ.ಎನ್ ಸಂತೋಷ್, ಎಸ್.ಎಲ್ ರವಿಕುಮಾರ್, ರೆಹಾನ್ ಅಹ್ಮದ್, ಎಸ್.ರಮೇಶ್, ಎಂ.ಭಾನುಪ್ರಕಾಶ್, ಪಿ.ಎನ್ ಮಾಧು, ಕೆ.ಆರ್ ಕೆಂಪಣ್ಣ, ಸುಖ್ ಲಾಲ್, ಬಿ.ಎಸ್ ಪ್ರಸನ್ನಕುಮಾರ್, ಎನ್.ಕರುಣಾಕರ್, ಟಿ.ಎಸ್ ಹರೀಶ್, ಗೊರಳ್ಳಿ ಜಗದೀಶ್, ಕುಮಾರ್, ಡಿ.ಜೆ ಗಣೇಶ್, ಕೆ.ಬಿ ಮಹೇಶ್, ಸೈಯ್ಯದ್ ಇಸ್ರಾರ್, ಎಂ.ಎನ್ ಚಂದ್ರು, ಸಿ.ಎನ್ ಶ್ಯಾಮ್, ಜಿ.ಶಂಕರ್, ಸಿ.ಎನ್ ರವಿ, ಡಿ.ರಮೇಶ್, ಎಚ್.ಕೆ ಮಂಜುನಾಥ್, ಎ.ಪಿ ದಿನೇಶ್, ಕುಮಾರ್, ಕೆಂಪರಾಜು, ಎಸ್.ಕೆ ಸುನೀಲ್, ರಮೇಶ್ ಹಾಗು ಗೋಣಿಕೊಪ್ಪ, ಹುಣಸೂರು, ಕೆ.ಆರ್ ನಗರ, ಕುಶಾಲನಗರ, ಮಡಿಕೇರಿ, ಸೋಮವಾರಪೇಟೆ, ಶನಿವಾರಸಂತೆ ರೋಟರಿ ಸದಸ್ಯರು ಇದ್ದರು.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.