ಜನತಾ ದಳ ಸೆಕ್ಯುಲರ್ ಪಕ್ಷದಿಂದ ರೈತ ಸಂಕ್ರಾಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪೋಸ್ಟರ್ ಬಿಡುಗಡೆ ಮಾಡಿದ – ಎಚ್.ಡಿ.ಕುಮಾರಸ್ವಾಮಿ

ಜನತಾ ದಳ ಸೆಕ್ಯುಲರ್ ಪಕ್ಷದಿಂದ ರೈತ ಸಂಕ್ರಾಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಪೋಸ್ಟರ್ ಬಿಡುಗಡೆ ಮಾಡಿದ – ಎಚ್.ಡಿ.ಕುಮಾರಸ್ವಾಮಿ

ಜನವರಿ 16ರಂದು ಸಂಜೆ ಜನತಾ ದಳ ಸೆಕ್ಯುಲರ್ ಪಕ್ಷದಿಂದ ರೈತ ಸಂಕ್ರಾಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಪೋಸ್ಟರ್ ಬಿಡುಗಡೆ ಮಾಡಿದರು.

ಅನ್ನದಾತನ ಆಮೂಲಾಗ್ರ ಸಬಲೀಕರಣ ನನ್ನ ಆಶಯ. ಅದಕ್ಕಾಗಿ ಪಂಚರತ್ನ ಕಾರ್ಯಕ್ರಮಗಳಲ್ಲಿ ರೈತ ಚೈತನ್ಯ ಯೋಜನೆ ರೂಪಿಸಿದ್ದೇನೆ.

ಅಂದು ಆನ್ ಲೈನ್ ವೇದಿಕೆ ಮೂಲಕ ಐವತ್ತಕ್ಕೂ ಹೆಚ್ಚು ವಿಧಾನಸಭೆ ಕ್ಷೇತ್ರಗಳ ರೈತರ ಜತೆ ಸಂವಾದ ನಡೆಸಲಿದ್ದೇನೆ. ಕೃಷಿ ವಲಯದ ಜ್ವಲಂತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳುವುದು ನನ್ನ ಉದ್ದೇಶ.

ಈ ಹಿನ್ನೆಲೆಯಲ್ಲಿ ಸೇಡಂ ವಿಧಾನಸಭೆ ಕ್ಷೇತ್ರದ ಸುಲೇಪೇಟದಲ್ಲಿ ಪಂಚರತ್ನ ರಥಯಾತ್ರೆಯಲ್ಲಿದ್ದ ನಾನು ಅಲ್ಲೇ ರಸ್ತೆ ಪಕ್ಕದ ಜಮೀನಲ್ಲಿದ್ದ ಕಟ್ಟೆಯ ಮೇಲೆ ಮಾಧ್ಯಮಗೋಷ್ಠಿ ನಡೆಸಿ ರೈತ ಸಂಕ್ರಾಂತಿಯ ಲಾಂಛನ ಬಿಡುಗಡೆ ಮಾಡಿದೆ ಈ ಅರ್ಥಪೂರ್ಣ ಕಾರ್ಯಕ್ರಮದಲ್ಲಿ ಅನ್ನದಾತರು ದೊಡ್ಡ ಪ್ರಮಾಣದಲ್ಲಿ ಭಾಗಿಯಾಗಬೇಕು ಎಂದು ಎಚ್.ಡಿ.ಕುಮಾರಸ್ವಾಮಿ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವ ಶ್ರೀ ವೆಂಕಟರಾವ್ ನಾಡಗೌಡ, ವಿಧಾನ ಪರಿಷತ್ ಸದಸ್ಯ ಶ್ರೀ ಭೋಜೇಗೌಡ, ಮಾಜಿ ಸದಸ್ಯ ಶ್ರೀ ರಮೇಶ್ ಗೌಡ, ಸೇಡಂ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಬಾಲರಾಜ್ ಗುತ್ತೇದಾರ್, ಜಿಲ್ಲಾಧ್ಯಕ್ಷ ಶ್ರೀ ಸುರೇಶ್ ಮಾಗಾವಂಕರ್ ಇತರರು ಹಾಜರಿದ್ದರು.

ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :-ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

Leave a Reply

Your email address will not be published. Required fields are marked *