ಪೊನ್ನಂಪೇಟೆ ಬಸ್ ನಿಲ್ದಾಣದ ಬಳಿ ಕಳ್ಳತನ.
ಪೊನ್ನಂಪೇಟೆಯ ಹಿರಿಯ ಪತ್ರಕರ್ತ ಹಾಗೂ ಛಾಯಾಗ್ರಹಕ ಎಸ್.ಎಲ್. ಶಿವಣ್ಣ ಎಂಬವರಿಗೆ ಸೇರಿದ ಅಂಗಡಿಗೆ ನಿನ್ನೆ ರಾತ್ರಿ ಯಾರೋ ಕಳ್ಳರು ನುಗ್ಗಿ 24 ಸಾವಿರ ರೂಪಾಯಿ ಮೌಲ್ಯದ ಸಿಗರೇಟ್ ಪ್ಯಾಕೆಟ್ಟುಗಳು, ಐದು ಸಾವಿರ ರೂಪಾಯಿ ನಗದು, ಹಾಗೂ 20 ದೀಪಾ ಹಾಗೂ ಅಡುಗೆ ಎಣ್ಣೆ ಪ್ಯಾಕೆಟ್ ಅನ್ನು ಕಳ್ಳತನ ಮಾಡಿದ್ದಾರೆ. ಇಂದು ಬೆಳಗಿನ ಜಾವ 5 ಗಂಟೆಗೆ ಸುಮಾರಿಗೆ ಅಂಗಡಿ ಬಾಗಿಲು ತೆಗೆಯಲು ಬಂದಾಗ ಬೀಗ ಒಡೆದಿರುವ ದೃಶ್ಯ ಕಾಣಿಸಿತು. ಮತ್ತೆ ಪರಿಶೀಲಿಸಿದಾಗ ನಿನ್ನೆ ಸಂಜೆ 24 ಸಾವಿರ ಮೌಲ್ಯದ ಹೋಲ್ಸೇಲ್ ದರದಲ್ಲಿ ತಂದಿಟ್ಟಿದ್ದ ಸಿಗರೇಟ್ ಪ್ಯಾಕೆಟ್ ನ ಚೀಲ, ಹಾಗೂ ನಗದು ಮತ್ತು ಎಣ್ಣೆ ಇಲ್ಲದಿರುವುದು ಪತ್ತೆಯಾಯಿತು, ಈ ಸಂಬಂಧ ಪೊನ್ನಂಪೇಟೆ ಪೊಲೀಸ್ ಠಾಣೆಗೆ ಎಸ್ ಎಲ್ ಶಿವಣ್ಣ ರವರು ದೂರು ನೀಡಿದ್ದಾರೆ. ಪೊಲೀಸರು ಬಂದು ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಳೆದೆರಡು ತಿಂಗಳ ಹಿಂದೆ ಹಗಲು ಹೊತ್ತಿನಲ್ಲಿ ಪೊನ್ನಂಪೇಟೆಯ ಕುಂದ ರಸ್ತೆಯಲ್ಲಿರುವ ಮುತ್ತಪ್ಪ ದೇವಸ್ಥಾನದ ಬಂಡಾರವನ್ನು ಒಡೆದು ಹಣ ಅಪರಿಸಿರುವ ಘಟನೆ ನಡೆದಿದೆ. ಈ ಪ್ರಕರಣಕ್ಕೂ ಸಂಬಂಧಿಸಿದಂತೆ ಆರೋಪಿ ಇನ್ನೂ ಪತ್ತೆಯಾಗಿಲ್ಲ.