ಪಿರಿಯಾಪಟ್ಟಣ: ಅಕ್ಟೋಬರ್ 10 ರಿಂದ ರಾಜ್ಯದ್ಯಂತ ರಾಜ್ಯ ಮತ್ತು ತಾಲೂಕು ಮಟ್ಟದಲ್ಲಿ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿ ಆಗುತ್ತಿರುವ ಅಕ್ರಮ ಅನುಯಾಯಿಗಳ ವಿರುದ್ಧ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ ಹೋರಾಟ ನಡೆಸಲಾಗುತ್ತದೆ.
ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯ ರೈತ ಘಟಕದ ಅಧ್ಯಕ್ಷರಾದ ಜೋಗನಹಳ್ಳಿ ಗುರುಮೂರ್ತಿ ತಿಳಿಸಿದರು.
ಪಟ್ಟಣದ ಕಾರ್ಯನಿರತ ಪತ್ರಕರ್ತರ ಸಂಘದ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದಾವಣಗೆರೆ ಜಿಲ್ಲೆಯಲ್ಲಿ ಸಾವಿರಾರು ಮರಗಳನ್ನು ಬೆಳೆಸಿದ ಪರಿಸರ ಪ್ರೇಮಿ ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಲುಮರದ ವೀರ ಚಾರಿ ಅವರು ಸರ್ಕಾರದ ನ್ಯಾಯಬೆಲೆ ಅಂಗಡಿಯ ಭ್ರಷ್ಟಾಚಾರ ವಿರುದ್ಧ ಹೋರಾಟ ಮಾಡಿ ಸುಮಾರು 40 ಲಕ್ಷ ರೂಪಾಯಿ ಬೆಲೆ ಹಗರಣವನ್ನು ಬಯಲಿಗೆ ಹೇಳಿದ್ದು, ಮೇಲಾಧಿಕಾರಿಗಳಿಗೆ ದೂರು ನೀಡಿ ಆ ನ್ಯಾಯ ಬೆಲೆ ಅಂಗಡಿಯ ಪರವ ನಾಗಿಯನ್ನು ಅವನತ್ತುಗೊಳಿಸಿದರು.
ತದನಂತರ ಸ್ವಲ್ಪ ಕಾಲ ಹರಿಹರ ತಾಲೂಕಿನ ತಹಸಿಲ್ದಾರ್ ಅವರ ಲಿಖಿತ ದೂರು ಮತ್ತು ಅಕ್ಷೇಪಣೆಯನ್ನು ಬದಿಗುತ್ತಿ 2022ರ ಜೂನ್ 6 ರಂದು ಆ ವಂಚಕನ ನ್ಯಾಯಬೆಲೆ ಅಂಗಡಿಯ ಪರವಾನಗಿಯನ್ನು ಪುನಃ ಸ್ಥಾಪಿಸಿದರು. ಈ ಪ್ರಕರಣ ಹೈಕೋರ್ಟ್ ಹತ್ತಿದ್ದು ಸರ್ಕಾರಿ ಅಧಿಕಾರಿಗಳ ಭ್ರಷ್ಟತೆ ಅಧ್ಯಕ್ಷತೆಯನ್ನು ಅರ್ಥ ಮಾಡಿಕೊಳ್ಳದೆ.
ವೀರಚಾರಿಯವರ ದೂರಿಗೆ ಸ್ಪಂದಿಸಿದೆ ಹೋದ ಕಾರಣ ವೀರಾಚಾರ್ಯ ಅವರು ಬೇಸತ್ತು ಮನನೊಂದು ಇದೇ ಸೆಪ್ಟೆಂಬರ್ 20ರಂದು ತಮ್ಮ ಊರಿನಲ್ಲಿ ಬೆಳೆಸಿದ ಮರಕೆ ನೇಣು ಹಾಕಿಕೊಂಡು ಹುತಾತ್ಮರಾದರು ದಿವಂಗತ ಸಾಲುಮರದ ವೀರಚಾರಿಯವರ ತ್ಯಾಗ ಮತ್ತು ಬಲಿದಾನದ ಅಂಗವಾಗಿ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷವು ಅಕ್ಟೋಬರ್ 10 ರಿಂದ ರಾಜ್ಯದ್ಯಂತ ಎಲ್ಲಾ ನ್ಯಾಯಬೆಲೆ ಅಂಗಡಿಗಳಿಗೆ ಭೇಟಿ ನೀಡಿ ಅಲ್ಲಿ ನಡೆಯುವ ಭ್ರಷ್ಟಾಚಾರ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಅಧಿಕಾರಿಗಳಿಗೆ ಗಮನಕ್ಕೆ ತಂದು ಪ್ರತಿಯೊಬ್ಬರಿಗೂ ಕಟ್ಟೆ ಕಡಿಯ ವ್ಯಕ್ತಿಗೂ ಇದರ ಸದುಪಯೋಗ ಆಗಬೇಕು.
ಸರ್ಕಾರದಿಂದ ಸಿಗುವ ಸೌಲಭ್ಯವನ್ನು ಯಾವುದೇ ರೀತಿ ಲಂಚ ಸ್ವೀಕರಿಸದೆ ಅವರಿಗೆ ಉಚಿತವಾಗಿ ನೀಡಬೇಕು ಎಂಬ ಶ್ಲೋಕವನ್ನು ಒಳಗೊಂಡು ಕೆ ಆರ್ ಎಸ್ ಪಕ್ಷ ಹೋರಾಟ ಮಾಡಲಾಗುತ್ತದೆ ಎಂದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ರೈತ ಘಟಕದ ಪ್ರಧಾನ ಕಾರ್ಯದರ್ಶಿ ಕೆ ಆರ್ ಪ್ರಭುಸ್ವಾಮಿ ,ತಾಲೂಕು ಅಧ್ಯಕ್ಷ ಸಿಪಿ ಅಜಿತ್ ,ಪ್ರಧಾನ ಕಾರ್ಯದರ್ಶಿ ರಾಜು, ಮುಖಂಡರಾದ ಎನ್ಎಸ್ ಲೋಕೇಶ್ ಆರಾಧ್ಯ ,ದಿನೇಶ್ ಕುಮಾರ್ ,ಯೋಗಾನಂದ, ಸ್ವಾಮಿ ,ಮತ್ತಿತರರು ಹಾಜರಿದ್ದರು.
ವರದಿ: ನಂದಿನಿ ಮೈಸೂರು
ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.