ಕೇರಳದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ

ಮಂಗಳೂರು:- ಕೇರಳದಲ್ಲಿ ಪೆಟ್ರೋಲ್ ಬೆಲೆ ಗಗನಕ್ಕೇರಿದೆ.

ಕೇರಳದಲ್ಲಿ ಸರ್ಕಾರ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಸೆಸ್ ದರ ಜಾಸ್ತಿ ಮಾಡಿದ ಹಿನ್ನಲೆಯಲ್ಲಿ ಕೇರಳ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡಿಸೇಲ್ ದರ ಮತ್ತೆ ಏರಿಕೆಯನ್ನು ಕಂಡಿದೆ. ಕರ್ನಾಟಕ ರಾಜ್ಯಕ್ಕಿಂತ ಕೇರಳದಲ್ಲಿ ಪಟ್ರೋಲ್ ದರ ಏಳು ರೂಪಾಯಿ ಮತ್ತು ಡಿಸೇಲ್ ದರ ಹತ್ತು ರೂಪಾಯಿ ದುಬಾರಿಯಾಗಿದೆ. ಈ ಹಿನ್ನಲೆಯಲ್ಲಿ ಕೇರಳದ ಕರ್ನಾಟಕದ ಗಡಿ ಭಾಗದ ಪೆಟ್ರೋಲ್ ಬಂಕ್‌ಗಳಲ್ಲಿ ಕೇರಳದ ಜನರು ಮುಗಿಬಿದ್ದಿದ್ದಾರೆ. ಕೇರಳ ಸರ್ಕಾರ ಎಪ್ರಿಲ್ ಒಂದರಿಂದ ಜಾರಿಗೆ ಬರುವಂತೆ ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ಮತ್ತೆ ಎರಡು ರೂಪಾಯಿ ಸೆಸ್ ಹೇರಿದೆ. ಕೇರಳದಲ್ಲೀಗ ಪೆಟ್ರೋಲ್ ಬೆಲೆ ಲೀಟರ್‌ಗೆ 108.48ರೂಪಾಯಿ ಆಗಿದ್ದು, ಡಿಸೇಲ್ ಗೆ 97.40ರೂಪಾಯಿ ದರವಾಗಿದೆ.

ಮಂಗಳೂರಿನಲ್ಲಿ ಪೆಟ್ರೋಲ್ ಬೆಲೆ 101.48 ರೂಪಾಯಿಯಾಗಿದ್ದು, ಕೇರಳಕ್ಕಿಂತ ಏಳು ರೂಪಾಯಿ ಅಗ್ಗ ದರದಲ್ಲಿ ರಾಜ್ಯದ ಪೆಟ್ರೋಲ್ ದೊರಕುತ್ತಿದೆ. ಇನ್ನು ಕೇರಳಕ್ಕಿಂತ ಹತ್ತು ರೂಪಾಯಿ ಅಗ್ಗದಲ್ಲಿ ರಾಜ್ಯದ ಡಿಸೇಲ್ ದೊರೆಯಲಿದೆ.ತೀವ್ರ ಆರ್ಥಿಕ ಮುಗ್ಗಟ್ಟು ಹಿನ್ನಲೆಯಲ್ಲಿ ಕೇರಳ ಸರ್ಕಾರ ಸೆಸ್ ದರ ಜಾಸ್ತಿ ಮಾಡಿದೆ ಎನ್ನಲಾಗಿದೆ.
ಕೇರಳದಲ್ಲಿ ತೈಲ ದರ ಏರಿಕೆ ಹಿನ್ನಲೆಯಲ್ಲಿ ಗಡಿಭಾಗದಲ್ಲಿ ಪೆಟ್ರೋಲ್ ಬಂಕ್‌ಗಳಿಗೆ ಸುಗ್ಗಿ ಕಾಲ ಬಂದಿದೆ. ಕೇರಳ ಸರ್ಕಾರದ ವಾಹನಗಳು ಸೇರಿದಂತೆ ಕೇರಳ ನೋಂದಾಯಿತ ವಾಹನಗಳಿಂದ ರಾಜ್ಯದ ಪೆಟ್ರೋಲ್‌ಗೆ ಭಾರೀ ಬೇಡಿಕೆ ಉಂಟಾಗಿದ್ದು, ಪೆಟ್ರೋಲ್ ಬಂಕ್ ಮಾಲಿಕರು ಭರಪೂರ ಲಾಭದಲ್ಲಿದ್ದಾರೆ.

ಗುಣಮಟ್ಟದ ಕಟ್ಟಡ ನಿರ್ಮಾಣ ಹಾಗೂ ಕಟ್ಟಡ ಸಾಮಗ್ರಿ ಗಳಿಗಾಗಿ ಸಂಪರ್ಕಿಸಿ :- ಎಸ್ ಪಿ ಎಸ್ ಟ್ರೇಡಿಂಗ್ Mob: 9880432555.

ಇನ್ನು ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಕೇರಳ ಮುಸ್ಲಿಂ ಲೀಗ್‌ನ ಮುಖಂಡರಾಗಿರುವ ಆಸಿಫ್, ‘ಕೇರಳದಲ್ಲಿ ಉಂಟಾಗಿರುವ ಆರ್ಥಿಕ ಸಂಕಷ್ಟವನ್ನು ತಪ್ಪಿಸಲು ಹೊರೆಯನ್ನು ಕೇರಳ ಸರ್ಕಾರ ಜನರ ಮೇಲೆ ಹಾಕಿದೆ. ಬಡವರ ಸರ್ಕಾರ ಎಂದು ಹೇಳಿಕೊಳ್ಳುವ ಸಿಎಂ ಪಿಣರಾಯಿ ವಿಜಯನ್ ಬಡವರ ಮೇಲೆ ಅಕ್ಷರಶಃ ದಬ್ಬಾಳಿಕೆ ಮಾಡುತ್ತಿದ್ದಾರೆ.ಕೇರಳಕ್ಕೆ ಅತೀ ಹೆಚ್ಚಿನ ವಸ್ತುಗಳು ಆಹಾರ ಸಾಮಗ್ರಿಗಳು ಹೊರ ರಾಜ್ಯಗಳಿಂದಲೇ ಬರಬೇಕು, ಇದೀಗ ಪೆಟ್ರೋಲ್ ಮೇಲಿನ ಸೆಸ್ ಜಾಸ್ತಿಯಾದ ಹಿನ್ನೆಲೆಯಲ್ಲಿ ಆಹಾರ ವಸ್ತುಗಳಿಗೆ ಜನಪಯೋಗಿ ವಸ್ತುಗಳಿಗೆ ದರ ಜಾಸ್ತಿಯಾಗಲಿದೆ. ಇದರಿಂದ ಜನ ಮತ್ತೆ ಸಂಕಷ್ಟಕ್ಕೆ ಒಳಗಾಗಲಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.

Leave a Reply

Your email address will not be published. Required fields are marked *