ಪಣೆಯಿಲ್ ಕುಟುಂಬದ ಪಣೆಯಿಲ್ ಮೋದಿಜಿ ಎಂದೆ ಹೆಸರಾಗಿದ್ದ ಶಿವನ್ ಕುಟ್ಟಿ ಅವರು ದೈವಾಧೀನರಾಗಿದ್ದಾರೆ
ಶಿವನ್ ಕುಟ್ಟಿ ಅವರು ಫೆಬ್ರವರಿ 1 -1945 ರಲ್ಲಿ ಕೇರಳದ ಅಲಾಪುಜ್ಹ ಜಿಲ್ಲೆ ಅರುನೂಟೀಮಂಗಲಂ ಮಾವೇಲಿಕೆರಾದಲ್ಲಿ ಜನಿಸಿದರು. ಇವರ ಪ್ರಾರ್ಥಮಿಕ ಹಾಗೂ ಕಾಲೇಜಿನ ಶಿಕ್ಷಣವನ್ನು ಅಲಾಪುಜ್ಹ ಜಿಲ್ಲೆ ಅರುನೂಟೀಮಂಗಲಂ ಮಾವೇಲಿಕೆರಾದಲ್ಲಿ ಮುಗಿಸಿದರು. ಶಿವನ್ ಕುಟ್ಟಿ ಅವರಿಗೆ ಇಬ್ಬರು ಹೆಣ್ಣು ಮಕ್ಕಳು , ಹಿರಿಯ ಮಗಳು ಶ್ರೀಕಲ ಕಿರಿಯ ಮಗಳು ಶ್ರೀ ವಿದ್ಯಾ ಹಾಗೂ ಮಗ ಶ್ರೀಜಿತ್ ಅವರ ಪತ್ನಿ ರಮ ಶಿವನ್
ಇವರು ಭಾರತೀಯ ಸೇನಾಪಡೆಯಲ್ಲಿ 18 ವರ್ಷಗಳಕಾಲ ಕಾರ್ಯನಿರ್ವಹಿಸುತ್ತಾರೆ . ಇವರು ಸಾಗರದ ಕೇರಳ ಸಮಾಜದ ಉಪಾಧ್ಯಕ್ಷರಾಗಿಯು ಹಾಗೂ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಸೇವೆಯನ್ನು ಸಲ್ಲಿಸಿರುತ್ತಾರೆ .
ಶಿವನ್ ಕುಟ್ಟಿ ಅವರ ಹಿರಿಯ ಸಹೋದರರಾದ ಬಾಲಕೃಷ್ಣ ಮೇಸ್ತ್ರಿ ಹೆಸರಾಂತ ಖಾಸಗಿ PWD ಗುತ್ತಿಗೆದಾರರು ಹಾಗೂ ರೈಲ್ವೆ ಗುತ್ತಿಗೆದಾರರು ಆಗಿದ್ದರು. ಇವರು ಸಾಗರದ ವಿಶ್ವೇಶ್ವರಯ್ಯ ಎಂದೆ ಗುರುತಿಸಿಕೊಂಡವರಾಗಿರುತ್ತಾರೆ. ಸಾಗರದ ಎಲ್ ಬಿ ಕಾಲೇಜ್, ಸಂಜಯ್ ಮೆಮೋರಿಯಲ್ ಪಾಲಿಟೆಕ್ನಿಕ್ ಕಾಲೇಜ್, ಜನತಾ ಹೈ ಸ್ಕೂಲ್, ಸೆಂಚು ಸಫ್ ಹೈ ಸ್ಕೂಲ್, ನಿರ್ಮಾಣ ಮಾಡಿರುತ್ತಾರೆ. ಹಾಗೂ ಎಳಮಳ್ಳಿ ನರ್ಸಿಂಗ್ ಹೋಮ್, ಭಾಗವತ್ ನರ್ಸಿಂಗ್ ಹೋಮ್, ಮಾಲಿನಿ ನರ್ಸಿಂಗ್ ಹೋಮ್ ಹಾಗೂ ಮೈಸೂರು ಕೆಫೆ ಹೋಟೆಲ್ ಬಿಲ್ಡಿಂಗ್ ಸಾಗರದ 1980-90 ರ ಅತಿ ವಿಶ್ವಾಸಿನಿಯ PWD ಗುತ್ತಿಗೆದಾರರಾಗಿ ಸೇವೆ ಸಲ್ಲಿಸಿರುತ್ತಾರೆ.
ಶಿವನ್ ಕುಟ್ಟಿ ಅವರ ಕಿರಿಯ ಸಹೋದರರಾದ ಪಿ .ಆರ್ ಸೋಮನ್ ರವರು 27-01-1948 ರಲ್ಲಿ ಜನಿಸಿ ತಮ್ಮ ಪ್ರಾರ್ಥಮಿಕ ಹಾಗೂ ಕಾಲೇಜಿನ ಶಿಕ್ಷಣವನ್ನು ಕೇರಳದ ಅಲಾಪುಜ್ಹ ಜಿಲ್ಲೆ ಅರುನೂಟೀಮಂಗಲಂ ಮಾವೇಲಿಕೆರಾದಲ್ಲಿ ಮುಗಿಸಿರುತ್ತಾರೆ. ಪಿ. ಆರ್ ಸೋಮನ್ ರವರು ಭಾರತೀಯ ಸೇನಾಪಡೆಯಲ್ಲಿ 18 ವರ್ಷಗಳ ಕಾಲ ಸೇವೆ ಸಲ್ಲಿಸಿರುತ್ತಾರೆ . ಭಾರತೀಯ ಸೇನೆಯಲ್ಲಿ ನಿವೃತ್ತಿ ಆದ ನಂತರ ಶಿವಮೊಗ್ಗಜಿಲ್ಲೆಯ ಸಾಗರ ತಾಲೂಕಿನ ಖಾಸಗಿ PWD , ಹಾಗೂ ರೈಲ್ವೆ ಕ್ಲಾಸ್ 1 ಗುತ್ತಿಗೆದಾರರಾಗಿ ಕಾರ್ಯವನ್ನು ನಿರ್ವಹಿರುಸುತ್ತಾರೆ. ಪಿ. ಆರ್ ಸೋಮನ್ ರವರು ಸಾಗರದ ಅನೇಕ ಸಂಘ ಸಂಸ್ಥೆಗಳ ಜವಾಬ್ದಾರಿಯನ್ನು ವಹಿಸಿರುತ್ತಾರೆ. ಅದರಲ್ಲಿ PWD ಗುತ್ತಿಗೆದಾರರ ಅಧ್ಯಕ್ಷರು ಹಾಗೂ ಲಯನ್ಸ್ ಕ್ಲಬ್ ಅಧ್ಯಕ್ಷರು, ಹಾಗೂ ಕೇರಳ ಸಮಾಜದ ಅಧ್ಯಕ್ಷರು ಇನ್ನಿತರ ಸಂಘ-ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಿರುತ್ತಾರೆ.
ಶಿವನ್ ಕುಟ್ಟಿ ಅವರು ದೈವಾಧೀನರಾದ ರೆಂದು ಶಿವನ್ ಕುಟ್ಟಿ ಅವರ ತಮ್ಮ ಪಿ .ಆರ್ ಸೋಮನ್ ಅವರ ಮಗನಾದ ಸೀಸೆಲ್ ಪಣೆಯಿಲ್ ಸೋಮನ್ ತಿಳಿಸಲು ವಿಷಾದಿಸುತ್ತಾರೆ. ಮೃತರ ಅಂತಿಮ ಸಂಸ್ಕಾರವು ಇಂದು ಮಧ್ಯಾಹ್ನ 2 ಗಂಟೆಗೆ ಅವರ ಪಣೆಯಿಲ್ ವಸತಿ ಅರುನೂಟೀಮಂಗಲಂ ಮಾವೇಲಿಕೆರಾ ಅಲ್ಲಿ ನೆರವೇರಿಸಲಾಗುವುದು.
ವರದಿ :ಅಪೂರ್ವ ಸಾಗರ
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link