
ಹೊಸಬರ ಸಿನಿಮಾಗೆ ‘ಚಟ್ಟ’ ಟೈಟಲ್ ಫಿಕ್ಸ್
ಶೀರ್ಷಿಕೆಯೇ ಸಿನಿಮಾ ಪ್ರೇಕ್ಷಕರಿಗೆ ಮೊದಲ ಆಮಂತ್ರಣ. ಸಿನಿಮಾ ಮೇಕರ್ಗಳು ಅದನ್ನೇ ಗಮನದಲ್ಲಿಟ್ಟುಕೊಂಡು ಏನಾದರೊಂದು ಹೊಸದನ್ನು ನೀಡಬೇಕೆನ್ನುವ ಆಶಯ ನಿರ್ಮಾಪಕರದ್ದು. ಈ ನಡುವೆ ಬಗೆಬಗೆಯ ಶೀರ್ಷಿಕೆಗಳ ಮೂಲಕವೇ ಸಿನಿಮಾಗಳು ಸೆಟ್ಟೇರುತ್ತಿವೆ. ಇದೀಗ ಅಂಥದ್ದೇ ವಿಭಿನ್ನ ಸಿನಿಮಾ ಮೂಲಕ ಗಮನ ಸೆಳೆಯುತ್ತಿದೆ ‘ಚಟ್ಟ’ ಸಿನಿಮಾ.
‘ಚಟ್ಟ’ ಹೀಗೊಂದು ವಿಭಿನ್ನ ಶೀರ್ಷಿಕೆ ಮೂಲಕ ಹೊಸತನದ ಕಥಾಹಂದರವನ್ನು ಚಿತ್ರರಸಿಕರಿಗೆ ಉಣಬಡಿಸಲು ಸಜ್ಜಾಗ್ತಿರುವುದು ನಿರ್ದೇಶಕ ಭಾನು ಪ್ರಕಾಶ್. ಕೋ ಡೈರೆಕ್ಟರ್ ಆಗಿ ಗುರುತಿಸಿಕೊಂಡಿರುವ ಅವರೀಗ ಡೈರೆಕ್ಟರ್ ಕ್ಯಾಪ್ ತೊಟ್ಟು ನಿರ್ದೇಶನದ ಅಖಾಡಕ್ಕೆ ಧುಮುಕಿದ್ದಾರೆ. ‘ಕೇರ್ ಆಫ್ ಫುಟ್ಬಾತ್’ ಸೇರಿದಂತೆ ಒಂದಷ್ಟು ಕನ್ನಡ ಹಾಗೂ ತೆಲುಗು ಇಂಡಸ್ಟ್ರೀಯಲ್ಲಿಯೂ ನಿರ್ದೇಶನದ ಪಟ್ಟುಗಳನ್ನು ಕಲಿತುಕೊಂಡಿರುವ ಭಾನು ಪ್ರಕಾಶ್, ಈ ಭರವಸೆಯೊಂದಿಗೆ ಚಟ್ಟ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಡುತ್ತಿದ್ದಾರೆ.
ಬೆಂಗಳೂರಿನಲ್ಲಿ ಇತ್ತೀಚೆಗಷ್ಟೇ ಅದ್ಧೂರಿಯಾಗಿ ಸೆಟ್ ಹಾಕಿ ಶೀರ್ಷಿಕೆ ಅನಾವರಣ ಕಾರ್ಯಕ್ರಮ ಮಾಡಲಾಗಿದೆ. ಕವಿರತ್ನ ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜೋಸೈಮನ್ ಮುಖ್ಯ ಅತಿಥಿಗಳಾಗಿ ಭಾಗಿಯಾಗಿ ಭಾನು ಪ್ರಕಾಶ್ ಹೊಸ ಕನಸಿಗೆ ಜೊತೆಯಾದರು.
ಈ ವೇಳೆ ನಿರ್ದೇಶಕ ಭಾನು ಪ್ರಕಾಶ್ ಮಾತನಾಡಿ, ಚಟ್ಟ ಎಂದರೆ ನಾವು ಅಂದುಕೊಂಡಂತೆ ಎತ್ತಿಕೊಂಡು ಹೋಗುವುದಲ್ಲ. ಲೋಕದಲ್ಲಿಯೂ ಪುಸ್ತಕ. ಆ ಪುಸ್ತಕದ ಕೊನೆಯ ಪೇಜ್ ಸಿನಿಮಾ. ನನಗೆ ಆಶೀರ್ವಾದ ಮಾಡಲು ಬಂದವರಿಗೆ ಧನ್ಯವಾದ. ಟೆಕ್ನಿಷಿಯಲ್, ಕಲಾವಿದರು ಒಬ್ಬೊಬ್ಬರಿಗೆ ಪರಿಚಯಿಸುತ್ತೀವೆ. ಚಟ್ಟ ಪ್ಯಾನ್ ಇಂಡಿಯಾ ಸಿನಿಮಾ ಎಂದರು.
ಕೆಎಂ ಕ್ರಿಯೇಷನ್ಸ್ ನಿರ್ಮಾಣದ ಚಟ್ಟ ಸಿನಿಮಾವನ್ನು ಕುಮಾರ್ ಎಂ, ಅಣಜಿ ರಮೇಶ್, ಡಿ.ಒಬಲ್ ರೆಡ್ಡಿ, ಕುಮಾರ್ ಎಂ ನಿರ್ಮಾಣ ಮಾಡುತ್ತಿದ್ದಾರೆ. ಕೆ ರಾಮ್ ರಾಮ್ ಮೂರ್ತಿ, ವಾಸುದೇವನ್, ಪ್ರಕಾಶ್ ಗೌಡ ಕೋ ಪ್ರೊಡ್ಯೂಸರ್ ಆಗಿ, ಮುರಳಿ ಕೃಷ್ಣ ಸಿ.ಎಚ್.ಉತನೂರೂಪ್ಪ ಎಕ್ಸಿ ಕ್ಯೂಟಿವ್ ಪ್ರೊಡ್ಯೂಸರ್ ಆಗಿ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮಿಸ್ಟ್ರೀ ಡ್ರಾಮಾ ಕಥಾಹಂದರ ಹೊಂದಿರುವ ಚಟ್ಟ ಸಿನಿಮಾ ಫೆಬ್ರವರಿಯಿಂದ ಶೂಟಿಂಗ್ ಚಾಲುವಾಗಲಿದೆ. ಅದಕ್ಕೂ ಮುನ್ನ ಚಿತ್ರತಂಡ ತಾರಾಬಗಳ ಹಾಗೂ ತಾಂತ್ರಿಕ ವರ್ಗವನ್ನು ರಿವೀಲ್ ಮಾಡಲಿದೆ.
ವರದಿ :ನಂದಿನಿ ಮೈಸೂರು
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link

ವಿಳಾಸ: ಮುಖ್ಯ ಕಚೇರಿ: ನಂ ,356/10 ಸಿ,ವೈಕುಂಠ ಧಾಮ ಪಕ್ಕದಲ್ಲಿ ಹಳೆ. ಪಿ .ಬಿ .ರಸ್ತೆ, ದಾವಣಗೆರೆ -577 006. ಶಾಖೆ ವೀರರಾಣಿ ಕೆಳದಿ ಚೆನ್ನಮ್ಮ ರಸ್ತೆ ಶುಭ ಮಂಗಳ ಮಂಟಪದ ಹತ್ತಿರ ವಿನೋಬನಗರ ಶಿವಮೊಗ್ಗ -577 204