ಎಲ್ಲಾರ ಮನೆಗೆದ್ದ ಕಿರುದನಿ ಚಿತ್ರದ ಪ್ರೀಮಿಯರ್ ಶೋ
ಮೈಸೂರಿನ ವಿಜಯನಗರ ೩ನೇ ಹಂತದಲ್ಲಿರುವ ಕೃಲ್ಪ ಕ್ಷೇತ್ರ ಸಭಾಂಗಣದಲ್ಲಿ ಕಿಕ್ಕಿರಿದು ತುಂಬಿದ್ದ ಮಕ್ಕಳು ಹಾಗೂ ಪೋಷಕರ ನಡುವೆ ಕಿರುದನಿ ಚಿತ್ರದ ಪ್ರೀಮಿಯರ್ ಶೋ ಎಲ್ಲರ ಮನಗೆದ್ದಿತು.
ಎಸ್‌ಎಲ್ ಪ್ರೊಡಕ್ಷನ್ ಬ್ಯಾನರಡಿ ದಾಸ್ ಮೋಹನ್ ನಿರ್ದೇಶನದಲ್ಲಿ ನಿರ್ಮಾಣಗೊಂಡಿರುವ ಚಿತ್ರದಲ್ಲಿ ಮಕ್ಕಳ ಅಪಹರಣ ಕುರಿತು ಬೆಳಕು ಚೆಲ್ಲಲಾಗಿದೆ.
ಮಕ್ಕಳ ಪೋಷಣೆ, ಅವರ ಕಲಿಕೆ, ತಾಯಿ-ತಂದೆ ಜವಾಬ್ದಾರಿ ಜೊತೆಗೆ ಆಟ-ಪಾಠಗಳಿಂದ ಕೂಡಿರುವ ಮಕ್ಕಳ ಚಿತ್ರ ಕಿರುದನಿ ಪ್ರೀಮಿಯರ್ ಶೋ ಭಾನುವಾರ ಪ್ರದರ್ಶನಗೊಂಡಿತು.
ಮಕ್ಕಳ ತುಂಟಾಕ್ಕೆ ಅನುಗುಣವಾಗಿ ವೆದಾಂತ್, ಅತಿಶಯ್ ಜೈನ್ ಸಂಗೀತ ಸಂಯೋಜನೆ ಮಾಡಿದ್ದು, ರಕ್ಷಿತ್ ಮಲ್ಲಪ್ಪ, ರಿಜೋಯಿಸ್ ಸಂಕಲನ ಅಚ್ಚುಕಟ್ಟಾಗಿದೆ. ಕನ್ನಡ, ಸಮಾಜ ವಿಜ್ಞಾನ, ವಿಜ್ಞಾನ, ಕ್ರೀಡೆ ಮತ್ತಿತರ ವಿಷಯಗಳ ಕುರಿತು ಸಹ ಸಿನಿಮಾದಲ್ಲಿ ಮಾಹಿತಿ ನೀಡುವ ಪ್ರಯತ್ನ ಮಾಡಲಾಗಿದೆ.
ಸಂಪೂರ್ಣ ಮಕ್ಕಳ ಚಿತ್ರ: ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ನಿರ್ದೇಶಕ ದಾಸ್ ಮೋಹನ್, ಇದೊಂದು ಸಂಪೂರ್ಣ ಮಕ್ಕಳ ಚಿತ್ರವಾಗಿದ್ದು, ನೂರಾರು ಮಕ್ಕಳ ತೆರೆ ಹಂಚಿಕೊಂಡಿದ್ದಾರೆ.ಚಿತ್ರಕ್ಕೆ UA ಸರ್ಟಿಫಿಕೇಟ್ ಲಭಿಸಿದೆ. ಶಾಲೆ ಆವರಣ ಸೇರಿದಂತೆ ರಾಜ್ಯದ ವಿವಿಧೆಡೆ ಸುಂದರ ತಾಣಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ಸದ್ಯದಲ್ಲಿಯೇ ಚಿತ್ರ ಬಿಡುಗಡೆ ದಿನಾಂಕ ಘೋಷಣೆ ಮಾಡಲಾಗುವುದು ಎಂದು ತಿಳಿಸಿದರು.
ವರದಿ :ನಂದಿನಿ ಮೈಸೂರು
https://whatsapp.com/channel/0029VaA61PAC6ZvhcEyEjS0S To Join Hind- Samachar What’s up Channel click the above link
ಕೇವಲ ಐದು ತಿಂಗಳ ಕಾಲಾವಧಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಸಾರ್ಹ ಕಂಪನಿ .ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್ – ಟೆಕ್ ಇಂಟರ್ ನ್ಯಾಷನಲ್(cem-tech international construction).ಸಂಪರ್ಕಿಸಿ: 9916432555 ,9986432555