ಮೈಸೂರಿನಲ್ಲಿ ವಿಶೇಷವಾಗಿ ಕನ್ನಡ ರಾಜ್ಯೋತ್ಸವ ಆಚರಣೆ – ಶಾಸಕ ಹರೀಶ್ ಗೌಡ
ಮೈಸೂರು: ಕರ್ನಾಟಕ ಎಂದು ನಾಮಕರಣಗೊಂಡು ಐವತ್ತು ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಈ ಬಾರಿ ಕನ್ನಡ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗುವುದು ಎಂದು ಶಾಸಕ ಹರೀಶ್ ಗೌಡ ಹೇಳಿದರು.
ಕರ್ನಾಟಕ ಹಿತ ರಕ್ಷಣಾ ವೇದಿಕೆಯ ಸದಸ್ಯರೊಂದಿಗೆ ಕನ್ನಡ ರಾಜ್ಯೋತ್ಸವದ 50ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ ಮೈಸೂರಿನ ಪ್ರಮುಖ ಡಿ ದೇವರಾಜ ಅರಸು ರಸ್ತೆಯಲ್ಲಿ ಪ್ರತಿ ಅಂಗಡಿಗಳಿಗೆ ತೆರಳಿ ಕನ್ನಡ ಬಾವುಟ ನೀಡಿ ಪ್ರತಿಯೊಬ್ಬರೂ ಈ ಕನ್ನಡ ಹಬ್ಬದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದರು.
ಈ ವೇಳೆ ಮಾತನಾಡಿದ ಶಾಸಕರು ಮಾಜಿ ಮುಖ್ಯಮಂತ್ರಿ, ರಾಜ್ಯ ಕಂಡ ಧೀಮಂತ ನಾಯಕ, ಮುತ್ಸದ್ದಿ ರಾಜಕಾರಣಿ ಡಿ. ದೇವರಾಜ ಅರಸು ಅವರು ಕರ್ನಾಟಕ ಎಂದು ಘೋಷಿಸಿ ಇಲ್ಲಿಗೆ ೫೦ ವರ್ಷ ತುಂಬಿದೆ. ಹಾಗಾಗಿ ಈ ಬಾರಿ ರಾಜ್ಯೋತ್ಸವವನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.
ಇಲ್ಲಿನ ಪ್ರತಿ ಅಂಗಡಿಗಳಿಗೂ ಕನ್ನಡತಾಯಿ ಭುವನೇಶ್ವರಿ ಚಿತ್ರ ಇರುವ ಬಾವುಟ ಹಾಗೂ ಮತ್ತು ಕನ್ನಡದ ಶಲ್ಯವನ್ನು ನೀಡಿ ಎಲ್ಲರೂ ರಾಜ್ಯೋತ್ಸವ ದಲ್ಲಿ ಪಾಲ್ಗೊಳ್ಳಬೇಕೆಂದು ಮನವಿ ಮಾಡಿದ್ದೇವೆ ಎಂದು ಹೇಳಿದರು.
ರಾಜಸ್ಥಾನ, ಗುಜರಾತಿ ಹೀಗೆ ಹೊರ ರಾಜ್ಯಗಳಿಂದ ಬಂದಿರುವ ವ್ಯಾಪಾರಗಾರರು, ಮುಸಲ್ಮಾನರು, ಸ್ಥಳೀಯರು ಎಲ್ಲರೂ ಸೇರಿ ಜಾತ್ಯಾತೀತವಾಗಿ, ಪಕ್ಷಾತೀತವಾಗಿ ಧರ್ಮಾತೀತವಾಗಿ ಕನ್ನಡ ರಾಜ್ಯೋತ್ಸವವನ್ನು ಅದ್ದೂರಿಯಾಗಿ, ವಿಶೇಷವಾಗಿ ಆಚರಿಸಬೇಕೆಂದು ಹರೀಶ್ ಗೌಡ ಕೋರಿದರು.
ಪ್ರತಿ ಅಂಗಡಿಯವರಿಗೂ ಕನ್ನಡದ ಧ್ವಜ ಕೊಡುತ್ತಿದ್ದೇವೆ ಎಲ್ಲರೂ ಈ ಬಾರಿಯ ವಿಶೇಷ ರಾಜ್ಯೋತ್ಸವಕ್ಕೆ ಬೆಂಬಲ ನೀಡಬೇಕೆಂದು ಅವರು ಮನವಿ ಮಾಡಿದರು
ಈ ವೇಳೆ ಕರ್ನಾಟಕ ಹಿತರಕ್ಷಣ ವೇದಿಕೆಯ ಅಧ್ಯಕ್ಷ ವಿನಯ್ ಕುಮಾರ್, ಗೌರವಾಧ್ಯಕ್ಷ ವೀರಣ್ಣಗೌಡ, ಕಾರ್ಯದರ್ಶಿ ರವಿ, ಮೂಡ ಮಾಜಿ ಸದಸ್ಯ ನವೀನ್ ಕುಮಾರ್, ಪ್ರಮೋದ್ ಗೌಡ, ಗುರುರಾಜ್ ಶೆಟ್ಟಿ,
ರವಿಚಂದ್ರ, ನಿತಿನ್, ನಂಜುಂಡಿ, ಸಂತೋಷ್, ಕಾಂತಿಲಾಲ್ ಜೈನ್, ಶರವಣ, ನವೀನ, ಮತ್ತಿತರರು ಹಾಜರಿದ್ದರು.
ವರದಿ: ನಂದಿನಿ ಮೈಸೂರು