ಮೈಸೂರು ಚಲನ ಚಿತ್ರೋತ್ಸವ ಉಪ ಸಮಿತಿಯಿಂದ ಸುದ್ದಿಗೋಷ್ಠಿ

ಮೈಸೂರು ಚಲನ ಚಿತ್ರೋತ್ಸವ ಉಪ ಸಮಿತಿಯಿಂದ ಸುದ್ದಿಗೋಷ್ಠಿ

ಮೈಸೂರು:ನಗರದ ಖಾಸಗಿ ಹೋಟೆಲ್ ನಲ್ಲಿ ನಡೆದ ಸುದ್ದಿಗೋಷ್ಠಿ.
ಪ್ರತಿ ವರ್ಷದಂತೆ ಈ ಬಾರಿಯು ದಸರಾ ವೇಳೆ ಚಲನ ಚಿತ್ರೋತ್ಸವ ಇರಲಿದ್ದು.ಚಲನ ಚಿತ್ರೋತ್ಸವ ಕಾರ್ಯಕ್ರಮಕ್ಕೆ ಉಸ್ತುವಾರಿ ಸಚಿವ ಹೆಚ್ ಸಿ ಮಹದೇವಪ್ಪ ಉದ್ಘಾಟನೆ ಮಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ದಸರಾ ಉದ್ಘಾಟಕರಾದ ಹಂಸಲೇಖ,ನಟ ಡಾರ್ಲಿಂಗ್ ಕೃಷ್ಣ,ಮಿಲನ ನಾಗರಾಜ್ ಭಾಗಿಯಾಗಲಿದ್ದಾರೆ. ಮೈಸೂರಿನ ಕಲಾ ಮಂದಿರದಲ್ಲಿ ಕಾರ್ಯಕ್ರಮ ಉದ್ಘಾಟನೆ ನಡೆಯಲಿದೆ. ಇತ್ತೀಚಿನ ದಿನಗಳಲ್ಲಿ ಜನರು ಚಿತ್ರಮಂದಿರಗಳಿಗೆ ತೆರಳಿ ಚಿತ್ರ ವೀಕ್ಷಣೆ ಮಾಡುವುದು ಕಡಿಮೆಯಾಗಿದೆ.ಆಗಾಗಿ ಜನರಿಗೆ ಮನರಂಜನೆ ನೀಡುವ ಸಲುವಾಗಿ ಚಲನ ಚಿತ್ರೋತ್ಸವ ಹಮ್ಮಿಕೊಳ್ಳಲಾಗಿದೆ.ಅನೇಕ ಕಿರು ಚಿತ್ರಗಳ ಪ್ರದರ್ಶನ ಕೂಡ ಇರುತ್ತೆ. ಚಲನ ಚಿತ್ರೋತ್ಸವಕ್ಕೆ ಆನ್ಲೈನ್ ಟಿಕೆಟ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಾರ್ವಜನಿಕರಿಗೆ 500 ಮತ್ತು ವಿದ್ಯಾರ್ಥಿಗಳಿಗೆ 300ರೂ ಟಿಕೆಟ್ ದರ ನಿಗದಿ ಮಾಡಲಾಗಿದೆ. ಅಕ್ಟೊಬರ್ 16ರಿಂದ 22ರವರೆಗೆ ಚಲನ ಚಿತ್ರೋತ್ಸವ ನಡೆಯಲಿದೆ. ಸುದ್ದಿಗೋಷ್ಠಿಯಲ್ಲಿ ಪ್ರವಾಸೋದ್ಯಮ ಇಲಾಖೆ ಜಂಟಿ ನಿರ್ದೇಶಕಿ ಎಂ ಕೆ ಸವಿತಾ ಮಾಹಿತಿ.

ವರದಿ: ನಂದಿನಿ ಮೈಸೂರು.

Leave a Reply

Your email address will not be published. Required fields are marked *