
ಮೈಸೂರು: ಫಲಿತಾಂಶಕ್ಕೂ ಮುನ್ನವೇ ತಾರಕ್ಕಕ್ಕೇರಿದೆ ಚಾಮುಂಡೇಶ್ವರಿ ಕದನ
ಫಲಿತಾಂಶಕ್ಕೂ ಮುನ್ನವೇ ತಾರಕ್ಕಕ್ಕೇರಿದೆ ಚಾಮುಂಡೇಶ್ವರಿ ಕದನ. ಚುನಾವಣೆಯಲ್ಲಿ ಬುಕ್ ಆಗಿರೋ ಆರೋಪ ಹಿನ್ನೆಲೆ, ಉಪ್ಪು ಮುಟ್ಟಿ ಪ್ರಮಾಣ ಮಾಡಿದ ಕಾಂಗ್ರೇಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ. ಚುನಾವಣೆಯಲ್ಲಿ ನಾನು ಯಾವ ಒಳ ಒಪ್ಪಂದ ಮಾಡಿಕೊಂಡಿಲ್ಲ.ಇದೆಲ್ಲ ಮೂಲ ಕಾಂಗ್ರೇಸ್ಸಿಗರ ಪಿತೂರಿ.ನಾನು ಗೆದ್ದೆ ಬಿಡ್ತೀನಿ ಅಂತಾ ಇಂತಹ ಚಿತಾವಣೆ ಮಾಡಿದ್ದಾರೆ. ೫೦೦ ಜನರ ಗುಂಪು ಕಟ್ಟಿಸಿಕೊಂಡು ಸುಳ್ಳು ಸುದ್ದಿ ಹಬ್ಬಿಸಿದ್ದಾರೆ.
ಜೆಡಿಎಸ್ ನವರು ಇಂತಹ ಅವಕಾಶ ಬಳಕೆ ಮಾಡಿಕೊಂಡಿದ್ದಾರೆ. ಆದರೆ ನಾನು ಯಾರೋ ಒಬ್ಬ ವ್ಯಕ್ತಿಯನ್ನ ನಂಬಿ ಮೋಸ ಹೋದೆ.ಅದಾಗಿಯೋ ಚುನಾವಣೆ ಚೆನ್ನಾಗಿ ಆಗಿದೆ. ಈಗಲೂ ನನಗೆ ಗೆಲುವಿನ ವಿಶ್ವಾಸವಿದೆ.
ಸಿದ್ದರಾಮಯ್ಯನವರಿಗೆ ಈ ವಿಚಾರಗಳ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಚುನಾವಣೆಯಲ್ಲಿ ಬಳಲಿ ಬಂದವರಿಗೆ ಪ್ರಶ್ನೆ ಕೇಳಿದಾಗ ಈ ರೀತಿ ಹೇಳಿದ್ದಾರೆ ಅಷ್ಟೇ. ನಾನು ಖುದ್ದು ಅವರನ್ನ ಭೇಟಿ ಮಾಡಿ ಈ ಬಗ್ಗೆ ಮಾತುನಾಡುತ್ತೇನೆ.
ಉಪ್ಪನ್ನ ಹಿಡಿದು ಪ್ರಮಾಣ ಮಾಡಿದ ಕಾಂಗ್ರೇಸ್ ಅಭ್ಯರ್ಥಿ ಮಾವಿನಹಳ್ಳಿ ಸಿದ್ದೇಗೌಡ.

ಕೇವಲ ಐದು ತಿಂಗಳ ಕಾಲವಾದಿಗಳಲ್ಲಿ ನಿಮ್ಮ ಕನಸಿನ ಮನೆ ನಿರ್ಮಾಣ ಮಾಡಿಕೊಡುವ ವಿಶ್ವಾಸಾರ್ಹ ಕಂಪನಿ. ಸಾಗರದ ಪ್ರಪ್ರಥಮ ಕನ್ಸ್ಟ್ರಕ್ಷನ್ ಕಂಪನಿ, ಸಿಮ್-ಟೆಕ್ ಇಂಟೆರ್ ನ್ಯಾಷನಲ್ (Cem-Tech International Construction). ಸಂಪರ್ಕಿಸಿ :- Mob: 9880432555, Off: 08183226655.