
ಮೈಸೂರು ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ
ಎಲ್ಲರ ಮೆಚ್ಚುಗೆ ವಿಶ್ವಾಸಗಳಿಸಿರುವ ನಂದಿನಿ ಸಿಹಿ ಉತ್ಸವಕ್ಕೆ ಇಂದು ಚಾಲನೆ ನೀಡಲಾಯಿತು.
ಮೈಸೂರಿನ ಮೆಗಾ ಡೈರಿ ಅವರಣದಲ್ಲಿರುವ ನಂದಿನಿ ಮಿಲ್ಸ್ ಗ್ಯಾಲಕ್ಷಿ ಮುಂಭಾಗದಲ್ಲಿ ನಂದಿನಿ ಸಿಹಿ ಉತ್ಸವಕ್ಕೆ ಒಕ್ಕೂಟದ ಅಧ್ಯಕ್ಷರಾದ ಪಿ.ಎಂ.ಪ್ರಸನ್ನ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು
ಕರ್ನಾಟಕ ಹಾಲು ಮಹಾಮಂಡಳಿ (ಕೆ.ಎಂ.ಎಫ್) ಹಾಗೂ ಮೈಸೂರು ಜಿಲ್ಲಾ ಹಾಲು ಒಕ್ಕೂಟದ ಸಹಭಾಗಿತ್ವದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ನಂದಿಸಿ ಸಿಹಿ ಉತ್ಪನ್ನಗಳ ಬಗ್ಗೆ ಗ್ರಾಹಕರಿಗೆ ಅರಿವು ಮೂಡಿಸುವ ದೃಷ್ಟಿಯಿಂದ ದಿನಾಂಕ 15.08,2023 ರಿಂದ 20,09,2023 ರವರೆಗೆ ಮೈಸೂರು ಜಿಲ್ಲೆಯ ಸಮಸ್ತ ಗ್ರಾಹಕರಿಗೆ ನಂದಿನಿ, ಸಿಹಿ, ಉತ್ಪನ್ನಗಳ ಮೇಲೆ: 20 ರಿಯಾಯಿತಿ ದರ ನೀಡಲಾಗುವುದು.ಹಾಲು,ಮೊಸರು,ತುಪ್ಪ ಹೊರತುಪಡಿಸಿ ನಂದಿನಿ ಸಿಹಿ ಉತ್ಪನ್ನಗಳಿಗೆ ಮಾತ್ರ 20 ರಷ್ಟು ರಿಯಾಯಿತಿ ಇರಲಿದೆ. ವಿಶ್ವವಿಖ್ಯಾತ ನಾಡ ಹಬ್ಬ ದಸರಾ ಬರುತ್ತಿರುವುದರಿಂದ ವಿವಿಧ ದೇಶ,ರಾಜ್ಯಗಳಿಂದ ಪ್ರವಾಸಿಗರು ಆಗಮಿಸಲಿದ್ದು ಅವರಿಗೂ ನಂದಿನಿ ಸಿಹಿ ಉತ್ಪನ್ನಗಳನ್ನು ಪರಿಚಯಿಸುವ ಪ್ರಯತ್ನ ಮಾಡಲಿದ್ದೇವೆ.ನಂದಿನಿಯ ಎಲ್ಲಾ ಸಮಸ್ತ ಗ್ರಾಹಕರು ಈ ಸುವರ್ಣಾವಕಾಶವನ್ನು ಸದುಪಯೋಗ ಪಡಿಸಿಕೊಳ್ಳಲು ಹಾಗೂ ಒಕ್ಕೂಟದೊಂದಿಗೆ ಸಹಕರಿಸಿ ಎಂದರು.

ಸಮಾರಂಭದಲ್ಲಿ ಒಕ್ಕೂಟದ ನಿರ್ದೇಶಕರುಗಳಾದ ಎ.ಟಿ. ಸೋಮಶೇಖರ್, ಕುಮಾಶಂಕರ್, ಕಿಜಿ ಮಹೇಶ್, ಸಿ., ಪಾರ್, ಕೆ.ಈರಗೌಡ,.ಎಸ್ ಕುಮಾರ್, ದಾಕ್ಷಾಯಿಣಿ ಬಸವರಾಜಪ್ಪ, ಲೀಲಾ ಬಿ.ಕೆ. ನಾಗರಾಜ್, ಬಿ.ನೀಲಾಂಬಿಕೆ ಮಹೇರ್ ಕುರಟ್ಟಿ, ಶಿವಗಾಮಿ ಷುಗಂ ಡಿ.ರಾಜೇಂದ್ರ ಜಿ.ಎಸ್. ಸದಾನಂದ, ಆರ್. ಚೆಲುವರಾಜು, ಗುರುಸ್ವಾಮಿ ಹಾಗೂ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಾದ ವ್ಯವಸ್ಥಾಪಕರು(ಆಡಳಿತ ಮತ್ತು ಖರೀದಿ ಶ್ರೀ ಕೆ.ಎಸ್ ಜಗದೀಶ್, ಹಾಗೂ ವ್ಯವಸ್ಥಾಪಕರು ಮಾರುಕಟ್ಟೆ) ಶ್ರೀ ಹೆಚ್ಕಿ’ ಜಯಶಂಕರ್ ರವರು ಉಪಸ್ಥಿತರಿದ್ದರು.
ವರದಿ:ನಂದಿನಿ ಮೈಸೂರು

ಶಿವಾ ಮೋಟರ್ಸ್
ಮುಖ್ಯ ಕಛೇರಿ :ನo 356/10/ಸಿ, ವೈಕುಂಠಧಾಮ ಪಕ್ಕದಲ್ಲಿ, ಹಳೆ ಪಿ. ಬಿ. ರಸ್ತೆ, ದಾವಣಗೆರೆ -577006. ಶಾಖೆ : ವೀರ ರಾಣಿ ಕೆಳದಿ ಚೆನ್ನಮ್ಮ ರಸ್ತೆ, ಶುಭ ಮಂಗಳ ಕಲ್ಯಾಣ ಮಂಟಪ ಹತ್ತಿರ, ವಿನೋಭಾ ನಗರ, ಶಿವಮೊಗ್ಗ -577304. Mob: + 91 7259433400 , 8182350116.