ಮೈಸೂರು: ಕಾಮಗಾರಿ ಪರಿಶೀಲಿನೆ :ಮಾನ್ಯ ಶಾಸಕರಾದ ಎಸ್ ಎ ರಾಮದಾಸ್.

ವಾರ್ಡ್ ನಂಬರ್ 63ರ ಜೆಪಿ ನಗರದ ಲಾಸ್ಟ್ ಬಸ್ ಸ್ಟಾಪ್ ನಿಂದ ನವೋದಯ ಬಡಾವಣೆಯ ಮುಖಾಂತರ ದಡದಳ್ಳಿ ಮಾರ್ಗವಾಗಿ ಸಂಚರಿಸುವ ಮುಖ್ಯರಸ್ತೆಯನ್ನು ಮಾನ್ಯ ಶಾಸಕರ ಅನುದಾನ ದಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಅಭಿವೃದ್ಧಿಪಡಿಸುತ್ತಿದ್ದು,
ಇಂದು ರಸ್ತೆ ಡಾಂಬರೀಕರಣ ಕಾಮಗಾರಿ ನಡೆಯುತ್ತಿದ್ದ ಸಂದರ್ಭದಲ್ಲಿ ಮಾನ್ಯ ಶಾಸಕರಾದ ಎಸ್ ಎ ರಾಮದಾಸ್ ರವರು ಸ್ಥಳಕ್ಕೆ ಭೇಟಿ ನೀಡಿ ಡಾಂಬರಿಕರಣ ಮತ್ತು ಮಳೆನೀರು ಚರಂಡಿ ಕಾಮಗಾರಿಯ ಗುಣಮಟ್ಟ ಮತ್ತು ಸಾಂದ್ರತೆಯನ್ನು ಪರಿಶೀಲಿಸಿ ಸಣ್ಣಪುಟ್ಟ ಸಮಸ್ಯೆಯನ್ನು ಸರಿಪಡಿಸಿಕೊಂಡು ಕಾಮಗಾರಿಯನ್ನು ತ್ವರಿತಗತಿಯಲ್ಲಿ ಗುಣಮಟ್ಟದಿಂದ ಪೂರ್ಣಗೊಳಿಸಿ ಸಾರ್ವಜನಿಕರ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ನಗರಪಾಲಿಕೆ ಸದಸ್ಯರಾದ ಶಾರದಮ್ಮ ಈಶ್ವರ್ ರವರು ಸ್ಥಳೀಯ ಮುಖಂಡರಾದ ಈಶ್ವರ್, ನಾಗೇಂದ್ರ,ಶ್ರೀನಿವಾಸ್, ದೇವರಾಜೇಗೌಡರು,ಅಕ್ಷಯ್,ರವಿ,ರೇಣುಕಾ, ರೇವತಿ,ನಂದೀಶ್, ರಾಜೀವ್,ಡೈರೆಕ್ಟರ್ ರಾಜು, ರಾಜಣ್ಣ,ಶ್ಯಾಮ್ ಮತ್ತು ಅಧಿಕಾರಿಗಳು ಹಾಜರಿದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.