
ಮೈಸೂರು: ಗಂಧದಗುಡಿ ಚಿತ್ರಕಲಾ ಸ್ಪರ್ಧೆ.

ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಮಕ್ಕಳಲ್ಲಿ ಪರಿಸರ ಕಾಳಜಿ, ವನ್ಯಜೀವಿಗಳ ಅರಣ್ಯ ಪ್ರದೇಶಗಳ ಅರಿವು ಮೂಡಿಸುವಲ್ಲಿ ಆಯೋಜಿಸಿರುವ ಗಂಧಧಗುಡಿ ಚಿತ್ರಕಲಾ ಸ್ಪರ್ಧೆ ಯಲ್ಲಿ ಪ್ರತಿಶಾಲೆಯ ಮಕ್ಕಳು ಭಾಗವಹಿಸಬೇಕು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಕರೆ
ಕರ್ನಾಟಕ ರತ್ನ ಅಪ್ಪು ಅಭಿಮಾನಿಗಳ ಬಳಗದ ವತಿಯಿಂದ ಕನ್ನಡಚಿತ್ರರಂಗದ ಪವರ್ ಸ್ಟಾರ್
ಪುನೀತ್ ರಾಜಕುಮಾರ್ ರವರ ಮೊದಲನೇ ವರ್ಷದ ನೆನಪಿನಲ್ಲಿ ಗಂಧಧಗುಡಿ ಚಿತ್ರಕಲಾ ಸ್ಪರ್ಧೆಯನ್ನ
ದಿನಾಂಕ 30/10/2022 ಭಾನುವಾರ ಬೆಳಗ್ಗೆ 10:30ರಿಂದ ಮಧ್ಯಾಹ್ನ 1:00 ಗಂಟೆವರೆಗೆ ಮೈಸೂರು ದಸರಾ ವಸ್ತುಪ್ರದರ್ಶನದ ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ಹಮ್ಮಿಕೊಂಡಿದ್ದು ಅದರ ಪೋಸ್ಟರ್ ಬಿತ್ತಿಪತ್ರ ಪ್ರಚಾರ ಸಾಮಾಗ್ರಿಗಳನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ರವರು ಪಿ. ಕಾಳಿಂಗರಾವ್ ಗಾನಮಂಟಪದಲ್ಲಿ ನಡೆದ ಸಮಾರಂಭದಲ್ಲಿ ಬಿಡುಗಡೆಗೊಳಿಸಿದರು
ನಂತರ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರ್ ರವರು ಮಾತನಾಡಿ ಕನ್ನಡ ಚಿತ್ರರಂಗದ ನಟಸಾರ್ವಭೌಮ ವರನಟ ಡಾ.ರಾಜಕುಮಾರ್ ರವರ ಪ್ರತಿಯೊಂದು ಚಿತ್ರವೂ ಸಮಾಜಕ್ಕೆ ಸಂದೇಶ ನೀಡುತ್ತಿದ್ದವು, ಕುಟುಂಬ ಪ್ರಧಾನವಾದ ಚಿತ್ರಗಳಾಗಿದ್ದವು ಅವರಂತಯೇ ಅವರ ಸುಪುತ್ರ ಪವರ್ ಸ್ಟಾರ್ ಕರ್ನಾಟಕ ರತ್ನ ಪುನೀತ್ ರಾಜಕುಮಾರ್ ರವರ ನಟನೆಯ ಚಿತ್ರಗಳು ಸಹ ಸಮಾಜ ಜಾಗೃತಿ ಮೂಡಿಸುತ್ತಿದ್ದವು ಮದ್ಯವ್ಯಸನ ಮುಕ್ತ ಸಮಾಜ, ಪರಿಸರ ಸಂರಕ್ಷಣೆ ಕಾಳಜಿ, ಸರಳತೆಯ ನಟ ಪುನೀತ್ ರವರು ಚಿಕ್ಕವಯಸ್ಸಿನಲ್ಲಿಯೆ ನಟಿಸಿ ರಾಷ್ಟ್ರೀಯ ಪ್ರಶಸ್ತಿಗಳನ್ನ ಪಡೆದುಕೊಂಡವರು, ವಿದ್ಯಾರ್ಥಿಯ ಪಾತ್ರದಿಂದ ಜಿಲ್ಲಾಧಿಕಾರಿ ಪಾತ್ರ, ಸೈನಿಕ ಪಾತ್ರ, ಆರಕ್ಷಕ ಅಧಿಕಾರಿ ಪಾತ್ರ, ಅಷ್ಟೆ ಅಲ್ಲದೇ ಇಂದಿನ ಗಂಧದಗುಡಿ ಚಿತ್ರದಲ್ಲಿ ಅರಣ್ಯಸಂರಕ್ಷಣೆ ಪರಿಸರ ಕಾಳಜಿಯನ್ನ ಯುವಪೀಳಿಗೆಗೆ ಮೂಡಿಸುವಲ್ಲಿ ಮತ್ತು ವನ್ಯಜೀವಿಗಳ ಪರಿಚಯದ ಬಗ್ಗೆ ಅವರು ಬೆಟ್ಟಗುಡ್ಡ ಅರಣ್ಯ ಜಾಗದಲ್ಲಿ ನಟಿಸಿದ್ದು ಮಹತ್ವವಾಗಿದೆ, ಅಕ್ಟೋಬರ್ 30ರಂದು ಭಾನುವಾರ ಗಂಧದಗುಡಿ ಚಿತ್ರಕಲಾಸ್ಪರ್ಧೆಯಲ್ಲಿ ಮೈಸೂರು ಜಿಲ್ಲೆಯ ಎಲ್ಲಾ ಶಾಲಾಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು, ಭಾನುವಾರ ರಜೆಯಿದ್ದು ಪೋಷಕರು ತಮ್ಮ ಮಕ್ಕಳೊಂದಿಗೆ ದಸರಾ ವಸ್ತುಪ್ರದರ್ಶನದಲ್ಲಿ ನಡೆಯುತ್ತಿರುವ ಗಂಧದಗುಡಿ ಚಿತ್ರಕಲಾಸ್ಪರ್ಧೆಯಲ್ಲಿ ಕರೆದುಕೊಂಡು ಬಂದು ಭಾಗವಹಿಸಿ ಎಂದು ಕರೆ ನೀಡಿದರು,
ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡ ರವರು ಮಾತನಾಡಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ನೆನಪಿನಲ್ಲಿ ಆಯೋಜಿಸಿರುವ ಗಂಧದಗುಡಿ ಚಿತ್ರಕಲಾ ಸ್ಪರ್ಧೆಗೆ ಮೈಸೂರು ಜಿಲ್ಲೆಯ ಎಲ್ಲಾ ಶಿಕ್ಷಣ ಮಂಡಳಿಯವರು ತಮ್ಮ ಮಕ್ಕಳನ್ನು ಕಳುಹಿಸಬಹುದು ಪ್ರವೇಶ ಉಚಿತವಾಗಿದೆ, ವಿವಿಧ ವಯೋಮಿತಿಯ ಆಸಕ್ತ ಸ್ಪರ್ಧಾಳುಗಳು ಭಾಗವಹಿಸಬಹುದಾಗಿದೆ
ವಿಭಾಗಗಳು
8 ವರ್ಷ ದಿಂದ 12ವರ್ಷ,
12 ವರ್ಷ ದಿಂದ 18 ವರ್ಷ,
18 ವರ್ಷದಿಂದ ಮೇಲ್ಪಟ್ಟವರು
ಚಿತ್ರಕಲಾ ಸ್ಫರ್ಧೆಯ ವಿಷಯ:- ಪರಿಸರ ಬೆಟ್ಟಗುಡ್ಡಗಳು ನದಿಕೆರೆ ವನ್ಯಜೀವಿಗಳು ಅಭಯಾರಣ್ಯ ಜಲಪಾತ ನಿಸರ್ಗಕ್ಕೆ ಸಂಬಂಧಿಸಿದ್ದಾಗಿರಬೇಕು
ಮೂರೂ ವಿಭಾಗದಲ್ಲೂ ಮೊದಲನೇ, ದ್ವಿತೀಯ ಹಾಗೂ ತೃತೀಯ ಆಕರ್ಷಕ ಬಹುಮಾನಗಳನ್ನು ನೀಡಲಾಗುವುದು
ಹಾಗೆಯೇ ಸ್ಪರ್ಧಿಸಿದ ಎಲ್ಲಾ ಸ್ಪರ್ಧಾಳುಗಳಿಗೆ ನೆನಪಿನ ಕಾಣಿಕೆ ಹಾಗೂ ಪ್ರಮಾಣ ಪತ್ರ ನೀಡಲಾಗಮಾತನಾಡಿ ಆಸಕ್ತ ಸ್ಪರ್ಧಾಳುಗಳು ಸ್ಥಳದಲ್ಲೆ ನೋಂದಾಯಿಸಿಕೊಳ್ಳಬಹುದು
ಸೂಚನೆಗಳು
1 ಪ್ರವೇಶ ಉಚಿತ
2 ಚಿತ್ರ ರಚನೆಗೆ ಅಗತ್ಯವಿರುವ ಕಾರ್ಡ್ಬೋರ್ಡ್ ಮಾತ್ರ ನೀಡಲಾಗುವುದು
3 ಕಲರ್ಸ್, ವಾಟರ್ ಪೇಟಿಂಗ್ ಸೇರಿದಂತೆ ಅವಶ್ಯಕ ಪದಾರ್ಥಗಳನ್ನು ಸಂಬಂಧಿಸಿದ ಪರಿಕರಗಳನ್ನು ಸ್ಪರ್ಧಿಗಳೇ ತರಬೇಕು
ಹೆಚ್ಚಿನ ವಿವರಗಳಿಗೆ ಆಸಕ್ತರು 9880752727/ 7829067769 ಸಂಪರ್ಕಿಸಬಹುದು ಎಂದರು
ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ ಸೋಮಶೇಖರು, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷರಾದ ಮಿರ್ಲೆ ಶ್ರೀನಿವಾಸ ಗೌಡ, ಕರ್ನಾಟಕ ಮೃಗಾಲಯ ಪ್ರಾಧಿಕಾರದ ಅಧ್ಯಕ್ಷ ಶಿವಕುಮಾರ್, ಮೂಡ ನಿಕಟಪೂರ್ವ ಅಧ್ಯಕ್ಷ ಹೆಚ್.ವಿ ರಾಜೀವ್, ಬಿಜೆಪಿ ನಗರಾಧ್ಯಕ್ಷ ಟಿಎಸ್. ಶ್ರೀವತ್ಸ, ಪ್ರಧಾನಕಾರ್ಯದರ್ಶಿ ಗಿರಿಧರ್, ಬಿಜೆಪಿ ವಕ್ತಾರ ಮೋಹನ್ ನಗರಪಾಲಿಕೆ ಸದಸ್ಯ ಜಗದೀಶ್, ಕಾರ್ಯ ನಿರ್ವಾಹಣಾಧಿಕಾರಿ ಕೆ.ರುದ್ರೇಶ್, ಸಾಮಾಜಿಕ ಹೋರಾಟಗಾರ ವಿಕ್ರಂ ಅಯ್ಯಂಗಾರ್, ನಿರೂಪಕ ಅಜಯ್ ಶಾಸ್ತ್ರಿ,
ಮಲ್ಲಿಕಾ, ದೇವರಾಜು ,
ಅಪ್ಪು ಅಭಿಮಾನಿಗಳ ಬಳಗದ ದರ್ಶನ್ ಯದುರಾಜ್, ಶಿವು, ಮುರಳಿ, ಸುಚೀಂದ್ರ, ಚಕ್ರಪಾಣಿ, ಲೋಹಿತ್, ನಾಗೇಂದ್ರ, ನವೀನ್ ವಿನಯ್, ರಾಕೇಶ್, ದುತ್ಗಪ್ರಸಾದ್, ರಾಘವೇಂದ್ರ, ಯೋಗಿಶ್ ಇನ್ನಿತರರು ಇದ್ದರು.
ವರದಿ: ನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್. ಪಿ. ಎಸ್. ಟ್ರೇಡಿಂಗ್ mob:9880432555.