“ದಸರಾ 2022ರ ಅಂತಿಮ ಮೂರನೇ ಹಂತದ ಫಿರಂಗಿ ತಾಲೀಮು ಯಶಸ್ವಿ”

ಮೈಸೂರು: ದಸರಾ 2022ರ ಅಂತಿಮ ಮೂರನೇ ಹಂತದ ಫಿರಂಗಿ ತಾಲೀಮು ಯಶಸ್ವಿ.

 ವಿಶ್ವ ವಿಖ್ಯಾತ ದಸರಾ ಮಹೋತ್ಸವ 2022 ಹಿನ್ನೆಲೆ ಅಂತಿಮ ಮೂರನೇ ಹಂತದ ಫಿರಂಗಿ ತಾಲೀಮು ನಡೆಸಲಾಯಿತು.

ಮೈಸೂರಿನ ವಸ್ತುಪ್ರದರ್ಶನ ಬಳಿ ನಗರ ಪೊಲೀಸ್ ಕಮಿಷನರ್‌, ಡಾ. ಚಂದ್ರಗುಪ್ತ ನೇತೃತ್ವದಲ್ಲಿ ಆನೆಗಳಿಗೆ ಹಾಗೂ ಕುದುರೆಗಳಿಗೆ ಭಾರಿ ಶಬ್ದದ ಪರಿಚಯಿಸುವ ಫಿರಂಗಿ ತಾಲೀಮು ನಡೆಸಲಾಯಿತು.

೭ ಗಾಡಿಗಳ ಮೂಲಕ ೨೧ ಸುತ್ತುಗಳಲ್ಲಿ ಒಟ್ಟು ೨೧ ಕುಶಾಲತೋಪು ಸಿಡುವ ಪೂರ್ವಾಭ್ಯಾಸ ನಡೆಸಲಾಯಿತು.ಜಂಬೂಸವಾರಿಯಲ್ಲಿ ಪಾಲ್ಗೊಳ್ಳುವ ಆನೆಗಳು ಮತ್ತು ಕುದುರೆಗಳಿಗೆ ಫಿರಂಗಿ ಶಬ್ದ ಪರಿಚಯ ಬೆದರುವ ಲಕ್ಷಣಗಳಿರುವ ಆನೆಗಳ ಕಾಲುಗಳನ್ನ ಸರಪಣಿಯಿಂದ ಕಟ್ಟಿ ಮುಂಜಾಗ್ರತೆ ವಹಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್‌, ಡಾ. ಚಂದ್ರಗುಪ್ತ ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ರಾಷ್ಟ್ರ ಗೀತೆ ನುಡಿಸುವಾಗ ಮೂರು ಸುತ್ತಿನ ಕುಶಾಲತೋಪು ಸಿಡುವ ಪೂರ್ವಾಭ್ಯಾಸ ಇಂದು ಮುಗಿದೆ ಗಜಪಡೆ ಹಾಗೂ ಕುದುರೆ ಗಳು ಗುಂಡಿನ ಶಬ್ದಗಳಿಗೆ ಹೊಂದಿಕೊಂಡಿದೆ ಯಾವುದೇ ಸಮಸ್ಯೆ ಅಗಿಲ್ಲ ಜಂಬೂಸವಾರಿ ದಿನದಂದು ಅರಮನೆ ಹೊರ ಆವರಣದಲ್ಲಿ ಸಿಡಿಸಲಾಗುತ್ತದೆ ಎಂದರು.

ಬೈಟ್ : ಡಿಸಿಎಫ್ ಕರಿಕಾಳನ್.

ಇಂದು ಯಶಸ್ವಿಯಾಗಿ ಮೂರನೇ ಹಂತದ ತಾಲೀಮು ನಡೆದಿದೆ ಯಾವುದೇ ಆನೆಗಳಿಗೆ ಕಾಲಿಗೆ ಚೈನನ್ನು ಕಟ್ಟಿರಲಿಲ್ಲ ಎಲ್ಲ ಆನೆಗಳು ಅಚ್ಚುಕಟ್ಟಾಗಿ ಯಾವುದೇ ಶಬ್ದ ಗಳಿಗೆ ಬೆದರದೆ ಆನೆಗಳು ಆರೋಗ್ಯವಾಗಿದೆ ವಿಜಯದಶಮಿ ಹಿಂದಿನ ಎರಡು ಮೂರು ದಿನಗಳಲ್ಲಿ ಮತ್ತೆ ತೂಕ ಪರೀಕ್ಷೆ ನಡೆಸಲಾಗುವುದು.

ಈ ಬಾರಿ ಪಟ್ಟದ ಆನೆಯಾಗಿ ಧನಂಜಯ ಭೀಮ ಹೋಗುತ್ತದೆ ಶ್ರೀರಂಗಪಟ್ಟಣ ದಸರಾ ಮಹೋತ್ಸವಕ್ಕೆ ಮಹೇಂದ್ರ ಹಾಗೂ ಎರಡು ಹೆಣ್ಣನೆ ಕಲಿಸಲಾಗುವುದು ತಿಳಿಸಿದರು.

ವರದಿನಂದಿನಿ ಮೈಸೂರು

ಗುಣಮಟ್ಟದ ಕಟ್ಟಡ ನಿಮಾ೯ಣ ಹಾಗೂ ಕಟ್ಟಡ ಸಾಮಾಗ್ರಿಗಳಿಗಾಗಿ ಸಂಪಕಿ೯ಸಿ: ಎಸ್‌. ಪಿ. ಎಸ್‌. ಟ್ರೇಡಿಂಗ್‌ mob:9880432555.

Leave a Reply

Your email address will not be published. Required fields are marked *